
ಸಂಜೆವಾಣಿ ನ್ಯೂಸ್
ಮೈಸೂರು.ಏ.12:- ಮೈಸೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಸಂಘದ ವತಿಯಿಂದ ಮುಖಂಡರು ಮಾರ ರವರ ನೇತೃತ್ವದಲ್ಲಿ ಡಾ.ಬಾಬು ಜಗಜೀವನ್ ರಾಮ್ ರಾಜ್ಯ ಪ್ರಶಸ್ತಿ ಪುರಸ್ಕೃತರು ಶ್ರೀ ನಾರಾಯಣ್ ರವರಿಗೆ ಅಭಿನಂದನ ಸಮಾರಂಭವನ್ನು ನಗರದ ಪುರ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು,
ಡಾ.ಡಿ.ತಿಮ್ಮಯ್ಯ ರವರು ಮಾತನಾಡಿ:-
ನಾರಾಯಣ್ ಅವರ ಶ್ರಮ ಸಾಧನೆ , ಹುಟ್ಟಿನಿಂದ ಹೋರಾಟ ಮಾಡುವ ವ್ಯಕ್ತಿ. ಸಾಧನೆ ಮಾಡಲು ಸಮಾಜಮುಖಿ , ನಿಸ್ವಾರ್ಥ ಮನೋಭಾವ ಹೊಂದಿದ್ದ ವ್ಯಕ್ತಿ ಯಿಂದ ಸಾಧ್ಯ. ಇಂತಹ ಎಲ್ಲಾ ಗುಣಗಳನ್ನು ನಾರಾಯಣ್ ಹೊಂದಿದ್ದಾರೆ. ಪೌರ ಕಾರ್ಮಿಕರ ಸಮಸ್ಯೆ ಹಾಗೂ ಸವಲತ್ತುಗಳನ್ನು ಪಡೆಯಲು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ.
ಪೌರ ಕಾರ್ಮಿಕ ಎಂದರೆ ಕಸ ಹೊಡೆಯುವ ವ್ಯಕ್ತಿ ಮಾತ್ರ ಅಲ್ಲ , ಎಲ್ಲಾ ಅಧಿಕಾರಿಗಳು ಸಹ ಪೌರ ಕಾರ್ಮಿಕರೇ, ಇಂದು ಪೌರಕಾರ್ಮಿಕ ವೃತ್ತಿ ಒಂದು ಜಾತಿಗೆ ಮಾತ್ರ ಸೀಮಿತ ವಾಗಿದೆ. ತಮ್ಮ ಆರೋಗ್ಯ ವನ್ನೂ ಗಣನೆಗೆ ತೆಗೆದುಕೊಳ್ಳದೆ , ಸಮಾಜದ ಎಲ್ಲಾ ಜನರ ಆರೋಗ್ಯ ಕಾಪಾಡುವುದು ಪೌರಕಾರ್ಮಿಕರು. ಪೌರ ಕಾರ್ಮಿಕರ ಮಕ್ಕಳಿಗೆ ಉದಯಗಿರಿ ಯಲ್ಲಿ ರೆಸಿಡೆನ್ಸಿಯಲ್ ಶಾಲೆ ತೆರೆಯಲಾಗಿತ್ತು .
ಮೈಸೂರು ನಗರದಲ್ಲಿ ಬಾಬು ಜಗಜೀವನ್ ರಾಮ್ ರವರ ಪ್ರತಿಮೆ ಆಗಲು ನಾರಾಯಣ್ ಕಾರಣ ಇದು ದಾಖಲೆಆಗಿದೆ. ಮಲಹೊರುವ ಪದ್ದತಿಯನ್ನು ತೆಗೆದುಹಾಕಲು ಕಾನೂನು ಬಂದಿದ್ದು ದೇವರಾಜ ಅರಸು , ಬಸವಲಿಂಗಪ್ಪ ಕಾಲದಲ್ಲಿ. ನಾರಾಯಣ್ ಮೇಯರ್ ಆಗಲು ಸಿದ್ದರಾಮಯ್ಯ ಕಾರಣ. ಸಿದ್ದರಾಮಯ್ಯ ರವರು ನಿಸ್ವಾರ್ಥ ಮನೋಭಾವ ಹೊಂದಿರುವ ರಾಜಕಾರಣಿ.
ನಾರಾಯಣ್ ರವರು ಮುಂದಿನ ದಿನಗಳಲ್ಲಿ ಎಂಎಲ್‍ಎ , ಮಂತ್ರಿ ಆಗಲಿ , ಈ ವರ್ಷದ ಬಾಬು ಜಗಜೀವನ್ ರಾಮ್ ಪ್ರಶಸ್ತಿ ಸೂಕ್ತ ವ್ಯಕ್ತಿಗೆ ದೊರಕಿವೆ ಎಂದರು,
ಡಾ.ಬಿ.ಜೆ.ವಿಜಯ್ ಕುಮಾರ್ ರವರು ಮಾತನಾಡಿ:-
ಪೌರ ಕಾರ್ಮಿಕ ವರ್ಗದ ಏಳ್ಗೆಗೆ ದುಡಿದ ನಾರಾಯಣ್ ರವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಬೇಕು. ಇದು ನಾರಾಯಣ್ ಅವರಿಗೆ ಕೊಡುವ ಗೌರವ ಅಲ್ಲ ಅವರ ಸೇವೆ ಹಾಗೂ ಸಮಾಜಕ್ಕೆ ಕೊಡುವ ಗೌರವ. ನಮ್ಮ ಜಿಲ್ಲೆಯಲ್ಲಿ ಪೌರ ಕಾರ್ಮಿಕ ವಿಚಾರದಲ್ಲಿ ನಾರಾಯಣ್ ರವರೇ ಅಂತಿಮ.
ಇವತ್ತು ಮೈಸೂರು ಮಹಾನಗರ ಪಾಲಿಕೆ ರಜೆ ನೀಡಿ ಈ ಕಾರ್ಯಕ್ರಮ ದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಕುಳಿತುಕೊಳ್ಳಬೇಕಿತ್ತು , ಈ ವಿಚಾರದಲ್ಲಿ ಕಾಪೆರ್Çೀರೇಷನ್ ಕಮಿಷನರ್ ತಪ್ಪು ಮಾಡಿದ್ದಾರೆ. ಇದಕ್ಕಿಂತಲೂ ದೊಡ್ಡ ಕೆಲಸ ಏನಿತ್ತು. ಇವರೆಲ್ಲಾ ಬೇರೆ ರೀತಿಯಲ್ಲಿ ಆಲೋಚನೆ ಮಾಡಿದರೆ ಹೇಗೆ. ಬೇರೆಯವರನ್ನು ಗೌರವಿಸುವುದು ಸಹ ದೊಡ್ಡತನ.
ಏಪ್ರಿಲ್ 14 ರಂದು ಡಾ.ಬಿ.ಅರ್.ಅಂಬೇಡ್ಕರ್ ಜಯಂತಿ ದಿನದಂದು ನಾರಾಯಣ್ ರವರಿಗೆ ಅಭಿನಂದನ ಸಮಾರಂಭವನ್ನು ನಗರ ಕಾಂಗ್ರೆಸ್ ಭವನದಲ್ಲಿ ಅಯೋಜನೆ ಮಾಡಲಾಗಿದೆ. ನಾರಾಯಣ್ ರವರ ಹೋರಾಟ ಜೊತೆಯಲ್ಲಿ ಕಾಂಗ್ರೆಸ್ ಪಕ್ಷ ಇರುತ್ತದೆ ಎಂದು ಮಾತನಾಡಿದರು.
ಈ ಕಾರ್ಯಕ್ರಮ ದಲ್ಲಿ ವಿಧಾನ ಪರಿಷತ್ ಸದಸ್ಯರು ಡಾ.ಡಿ.ತಿಮ್ಮಯ್ಯ ರವರು, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ , ಮೈಸೂರು ನಗರ ಅಧ್ಯಕ್ಷರಾದ ಆರ್.ಮೂರ್ತಿ ರವರು, ಜಿಲ್ಲಾಧ್ಯಕ್ಷರಾದ ಡಾ.ಬಿ.ಜೆ.ವಿಜಯ್ ಕುಮಾರ್ ರವರು, ಮಾಜಿ ಮಹಾಪೌರರಾದ ಶಅನಂತು ರವರು ಹಾಗೂ ಬೈರಪ್ಪ ರವರು , ಬೆಂಗಳೂರು ಪೌರಕಾರ್ಮಿರ ಸಂಘದ ಅಧ್ಯಕ್ಷರು ಶ್ರೀನಿವಾಸ ರವರು, ಡಾ. ಹರೀಶ್ ಆಯುಕ್ತರು ಮಾಹಿತಿ ಹಕ್ಕು ಇಲಾಖೆ, ಕಾಂಗ್ರೆಸ್ ಮುಖಂಡ ಹೆಚ್ ವಿ ರಾಜೀವ್ , ಶಿವ ಪ್ರಸಾದ್ , ಶಿವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
























