ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿಗೆ ಆತ್ಮೀಯ ಸ್ವಾಗತ


ನವದೆಹಲಿ,ಡಿ.೧- ಕೆಲ ತಿಂಗಳ ಹಿಂದೆಯಷ್ಟೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಸಿಪಿ ರಾಧಾಕೃಷ್ಣನ್ ಅವರಿಗೆ ಸಂಸತ್ತಿನ ಚಳಿಗಾಲದ ಅಧಿವೇಶನ ಮೊದಲ ಅಧಿವೇಶನವಾಗಿದೆ, ರಾಜ್ಯಸಭೆಯ ಸಭಾಪತಿಯೂ ಆಗಿರುವ ಸಿಪಿ ರಾಧಾಕೃಷ್ಣನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇಡೀ ಸದನ ಆತ್ಮೀಯವಾಗಿ ಸ್ವಾಗತಿಸಿದೆ.
ಇಂದಿನಿಂದ ಆರಂಭವಾಗಿವ ಸಂಸತ್ತಿನ ಅಧಿವೇಶನದಲ್ಲಿ ಪ್ರತಿಪಕ್ಷಗಳು ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಬಿಗಿ ಪಟ್ಟು ಹಿಡಿದ ಸಂದರ್ಭದಲ್ಲಿ ರಾಜ್ಯಸಭೆಯ ಸಭಾಪತಿಯಾಗಿ ಮೊದಲ ಬಾರಿಗೆ ರಾಜ್ಯಸಭೆಯ ಕಲಾಪದಲ್ಲಿ ರಾಧಾಕೃಷ್ಣನ್ ಅವರು ಭಾಗಿಯಾದರು.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ರಾಜ್ಯಸಭೆ ಸಭಾನಾಯಕ ಜೆಪಿ ನಡ್ಡಾ ,ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇಡೀ ಸದನ ರಾಜ್ಯಸಭೆಯ ಸಭಾಪತಿಗಳನ್ನು ಸದನಕ್ಕೆ ಆತ್ಮೀಯವಾಗಿ ಬರಮಾಡಿಕೊಂಡಿತು.
ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯ ಸಭಾಪತಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಭಾಪತಿ ಸಿಪಿ ರಾಧಾಕೃಷ್ಣನ್ ಅವರಿಗೆ ಮೊದಲ ಕರ್ತವ್ಯದ ದಿನ, ಇಡೀ ಸದನದ ಪರವಾಗಿ ನಿಮ್ಮನ್ನು ಸ್ವಾಗಿಸುತ್ತೇನೆ.ಜೊತೆಗೆ ಅಭಿನಂಧಿಸುವುದಾಗಿ ತಿಳಿಸಿದ್ದಾರೆ.
ಸಾಮಾನ್ಯ ರೈತ ರೈತ ಕುಟುಂಬದಿಂದ ಬಂದ ಉಪ ರಾಷ್ಟ್ರಪತಿ ಅವರು ತಮ್ಮ ಇಡೀ ಜೀವನವನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ. ನಿಮ್ಮ ಅಧಿಕಾರವಧಿಯಲ್ಲಿ ಅರ್ಥಪೂರ್ಣ ಚರ್ಚೆಗೆ ವೇದಿಕೆಯಾಗಲಿ ಎಂದು ಹಾರೈಸಿದ್ದಾರೆ.
“ಈ ಸದನದಲ್ಲಿ ಕುಳಿತಿರುವ ಎಲ್ಲಾ ಸದಸ್ಯರು ಮೇಲ್ಮನೆಯ ಘನತೆ ಕಾಪಾಡುತ್ತಾರೆ. ಜೊತೆಗೆ ನಿಮ್ಮ ಘನತೆಯನ್ನು ಕಾಪಾಡುತ್ತಾರೆ ಎನ್ನುವ ಭರವಸೆ ನನಗಿದೆ ರೈತ ಕುಟುಂಬದಿಂದ ಬಂದಿದ್ದರೂ ರಾಜಕೀಯ ಹಿನ್ನೆಲೆಯ ಇದೆ. ಆದರೆ ಮುಖ್ಯವಾಹಿನಿಯು ಸಮಾಜ ಸೇವೆಯಾಗಿದೆ. ಅವರು ಸಮಾಜಕ್ಕೆ ಸಮರ್ಪಿತರಾಗಿದ್ದಾರೆ. ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿರುವ ನಮಗೆಲ್ಲರಿಗೂ ಅವರು ಸ್ಫೂರ್ತಿ ಮತ್ತು ಮಾರ್ಗದರ್ಶಕರಾಗಿದ್ದಾರೆ” ಎಂದು ಅವರು ಹೇಳಿದ್ದಾರೆ.