Home ಜಿಲ್ಲೆ ಮೈಸೂರು ರಾಜ್ಯಮಟ್ಟದ ನೃತ್ಯ ಸ್ಪರ್ಧೆ: ಕುಶಾಲನಗರದ ಶಿವಧಾರೆ ನೃತ್ಯ ಸಂಸ್ಥೆಗೆ ತೃತೀಯ ಬಹುಮಾನ

ರಾಜ್ಯಮಟ್ಟದ ನೃತ್ಯ ಸ್ಪರ್ಧೆ: ಕುಶಾಲನಗರದ ಶಿವಧಾರೆ ನೃತ್ಯ ಸಂಸ್ಥೆಗೆ ತೃತೀಯ ಬಹುಮಾನ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ:
ಪಿರಿಯಾಪಟ್ಟಣದ ನಕ್ಷತ್ರ ನೃತ್ಯ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕುಶಾಲನಗರದ ಶಿವಧಾರೆ ಸ್ಕೂಲ್ ಆಫ್ ಡ್ಯಾನ್ಸ್ ಸೀನಿಯರ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ತೃತೀಯ ಬಹುಮಾನ ತನ್ನದಾಗಿಸಿಕೊಂಡಿದೆ.


ಪಟ್ಟಣದ ದೇವರಾಜ ಅರಸು ಭವನದಲ್ಲಿ ನಡೆದ ಈ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ಹಾಸನ, ವೀರಾಜಪೇಟೆ, ಗೋಣಿಕೊಪ್ಪ, ಕುಶಾಲನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೃತ್ಯಪಟುಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಸೀನಿಯರ್ ಸೋಲೋ, ಸೀನಿಯರ್ ಗ್ರೂಪ್, ಜೂನಿಯರ್ ಸೋಲೋ, ಜೂನಿಯರ್ ಗ್ರೂಪ್, ಸಬ್ ಜೂನಿಯರ್ ಸೋಲೋ ಹಾಗೂ ಸಬ್ ಜೂನಿಯರ್ ಗ್ರೂಪ್ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಈ ಪೈಕಿ ಸೀನಿಯರ್ ವಿಭಾಗದಲ್ಲಿ ಶಿವಧಾರೆ ನೃತ್ಯ ಸಂಸ್ಥೆಯ ತಂಡ ನೀಡಿದ ಮನಮೋಹಕ ನೃತ್ಯ ಪ್ರದರ್ಶನ ತೀರ್ಪುಗಾರರಿಂದ ಪ್ರಶಂಸೆಗೆ ಪಾತ್ರವಾಗಿ ತೃತೀಯ ಬಹುಮಾನವನ್ನು ಪಡೆದುಕೊಂಡಿತು.


ಶಿವಧಾರೆ ಸ್ಕೂಲ್ ಆಫ್ ಡ್ಯಾನ್ಸ್‍ನ ತರಬೇತುದಾರ ಮಾಸ್ಟರ್ ಚೇತನ್ ರವಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಸ್ಪರ್ಧೆಗೆ ಬೆಂಗಳೂರಿನ ಖ್ಯಾತ ನೃತ್ಯ ಸಂಯೋಜಕರಾದ ಜಗ್ಗು ಮಾಸ್ಟರ್ ಹಾಗೂ ಪ್ರದೀಪ್ ತೀರ್ಪುಗಾರರಾಗಿh ಕಾರ್ಯನಿರ್ವಹಿಸಿ ವಿಜೇತರನ್ನು ಆಯ್ಕೆ ಮಾಡಿದರು.