ರಾಜ್ಯದ ಮುಖ್ಯ ಮಂತ್ರಿ ಸೇರಿದಂತೆ ವಿವಿಧ ನಾಯಕರು ಗಳಿಗೆ ವಿಶೇಷ ಪ್ರಾರ್ಥನೆ

ಸಂಜೆವಾಣಿ ವಾರ್ತೆ
ಕೆಆರ್.ನಗರ, ಆ.04:-
ದಿ. ಮಾಜಿ ಮುಖ್ಯಮಂತ್ರಿ ಡಿ ದೇವರಾಜ್ ಅರಸು ನಂತರ ರಾಜ್ಯದಲ್ಲಿ ಅವರಂತೆ ಮಾದರಿ ಆಡಳಿತ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರಾದ ಪೈಜûುಲ್ಲಾ ರಜಾ ಗುಣಗಾನ ಮಾಡಿದರು.


ಪಟ್ಟಣದ ಸಮೀಪವಿರುವ ಹಳೆಯಡತೂರೆ ಹಜ್ರತ್ ಸೈಯದ್ ಖಾದರ್ ಲಿಂಗಾವಲಿ ಹಾಗೂ ಹಜ್ರತ್ ಜಲಾಲ್ ಷಾ ವಲಿ ಅವರ ದರ್ಗಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಸತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ ಝೆಡ್ ಜಮೀರ್ ಅಹ್ಮದ್ ಖಾನ್ ಹುಟ್ಟು ಹಬ್ಬದ ಅಂಗವಾಗಿ ಜೊತೆಗೆ ಮೈಸೂರು ಜಿಲ್ಲಾ ವಖ್ಫ್ ಬೋರ್ಡ್ ಸಲಹ ಸಮಿತಿಯ ನೂತನ ಅಧ್ಯಕ್ಷ ಅಜಿûೀಜûುಲ್ಲ ಅಜ್ಜು ಅವರ ಕಾರ್ಯವೈಖರಿ ಮತ್ತು ಕೆ ಆರ್ ನಗರ ಕ್ಷೇತ್ರದ ಶಾಸಕರಾದ ಡಿ ರವಿಶಂಕರ್ ಅಭಿವೃದ್ಧಿ ಪಡಿಸುತ್ತಿದ್ದು ಅವರ ಹೆಸರಿನಲ್ಲಿ ವಿಶೇಷ ಪೂಜೆ ನೆರವೇರಿಸಿ ಮಾತನಾಡಿದ ಅವರು ರಾಜ್ಯದಲ್ಲಿ 5 ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದು ಬಡವರ ಪಾಲಿಗೆ ಇದೊಂದು ಮಹತ್ವಾಕಾಂಕ್ಷಿ ಯೋಜನೆ ಎಂದು ವಿವರಿಸಿದರು.


ಮೈಸೂರು ಜಿಲ್ಲಾ ವಖ್ಫ್ ಬೋರ್ಡ್ ಸಲಹ ಸಮಿತಿಯ ನೂತನ ಅಧ್ಯಕ್ಷ ಅಜಿûೀಜûುಲ್ಲ ಅಜ್ಜು ಅವರು ಕೈಗೊಂಡಿರುವ ಕಾರ್ಯಕ್ರಮ ನಿಜಕ್ಕೂ ಉತ್ತಮವಾದ ಬೆಳವಣಿಗೆ ಇದೇ ರೀತಿ ಮುಂದುವರೆಯಿರಿ ನಮ್ಮ ಸಹಕಾರ ಎಂದು ಇರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮುಂಖಡರಾದ ಶೇಕ ಹುಸೇನ್, ಇಮ್ರಾನ್ ಸೇರಿದಂತೆ ಇನ್ನಿತರರು ಹಾಜರಿದ್ದರು.