ರಾಜು ದಂಪತಿಗೆ ಅಭಿನಂದನೆ,ಶುಭ ಹಾರೈಕೆ

ಬೆಂಗಳೂರು.ಮೇ25:ನಾಗರಬಾವಿ ಸ್ನೇಹ ಬಳಗದ ವತಿಯಿಂದ ರಾಜು ಮತ್ತು ಉಷಾರಾಣಿ ಅವರಿಗೆ ಅಭಿನಂದನಾ ಸಮಾರಂಭ… ನಾಗರಿಕರ ಸ್ನೇಹ ಬಳಗದ ವತಿಯಿಂದ ರಾಜುರವರ 45ನೇ ವರ್ಷದ ಹುಟ್ಟುಹಬ್ಬ ಹಾಗೂ 25ನೇ ವರ್ಷದ ಉಷಾರಾಣಿ ಮತ್ತು ರಾಜು ಅವರ ಮದುವೆ ವಾರ್ಷಿಕೋತ್ಸವ ಸಮಾರಂಭವನ್ನು ಸ್ನೇಹಿತರ ಬಳಗದಿಂದ ಆಚರಿಸಲಾಯಿತು.


ನಾಗರಬಾವಿ ನಾಗರಿಕರ ಸ್ನೇಹ ಬಳಗ ಅಧ್ಯಕ್ಷ ಮೈಸೂರಪ್ಪ ಮತ್ತು ಪದಾಧಿಕಾರಿಗಳು ಸದಸ್ಯರ ಉಪಸ್ಥಿತಿಯಲ್ಲಿ ಇಂದು ರಾಜುರವರ 45ನೇ ವರ್ಷದ ಹುಟ್ಟುಹಬ್ಬ ಆಚರಣೆ ಮತ್ತು ಉಷಾ ರಾಣಿ ರವರ 25ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಮಾರಂಭ ಪ್ರಯುಕ್ತ ನಾಗರಬಾವಿ ಬಳಗದ ಪದಾಧಿಕಾರಿಗಳು ಇಂದು ರಾಜು ಮತ್ತು ಶ್ರೀಮತಿ ಉಷಾ ರಾಣಿ ರಾಜು ಅವರಿಗೆ ಅಭಿನಂದಿಸಿ ಶುಭ ಹಾರೈಸಿದರು
ಕಾರ್ಯಕ್ರಮದಲ್ಲಿ ಮೈಸೂರಪ್ಪ , ಬಿಡಿಎ ಅಧ್ಯಕ್ಷ ಪುಟ್ಟಸ್ವಾಮಿ ಗೌಡ್ರು, ಮೋಹನ್ ರಾವ್, ಮಂಜುನಾಥ್, ಪ್ರಭು , ಶಿವಲಿಂಗ, ಶಂಕರೇಗೌಡರು, ಶಿವಪ್ರಕಾಶ್, ಸಿ.ಕೆ ಮೂರ್ತಿ, ಬೋರಣ್ಣ, ಇತರೆ ನಾಗರಿಕ ನಾಗರಬಾವಿ ನಾಗರಿಕರ ಸ್ನೇಹ ಬಳಗದ ಸದಸ್ಯರು ಇದ್ದರು ಹಾರೈಸಿದರು.