ರಸ್ತೆ ಮಧ್ಯೆ ಗುಂಡಿ ತಪ್ಪಿಸಲು ಹೋಗಿ ಆಟೋ ರಿಕ್ಷ ಪಲ್ಟಿ – ಇಬ್ಬರಿಗೆ ಗಾಯ

ಸುಳ್ಯ:ಸುಳ್ಯ ಗಾಂಧಿನಗರದಿಂದ ಆಲೆಟ್ಟಿ ರಸ್ತೆಯ ಗುರುಂಪು ಎಂಬಲ್ಲಿ ರಸ್ತೆ ಮಧ್ಯದ ಗುಂಡಿ ತಪ್ಪಿಸಲು ಹೋಗಿ ಅಟೋ ರಿಕ್ಷಾ ವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಚರಂಡಿಗೆ ಪಲ್ಟಿಯಾದ ಘಟನೆ ನಡೆದಿದೆ.
ಖಾಸಗಿ ಬಸ್ ನಿಲ್ದಾಣದ ಬಳಿಯ ಅಟೋ ನಿಲ್ದಾಣದ ಪಾಕಿಂಗ್‌ನಲ್ಲಿ ನಿಲ್ಲಿಸುತ್ತಿದ್ದ ಆನಂದ ಎಂಬವರಿಗೆ ಸೇರಿದ ಅಟೋ ರಿಕ್ಷಾ ನಾಗಪಟ್ಟಣ ಕಡೆಗೆ ಸಂಚರಿಸುತ್ತಿದ್ದಾಗ ಗುರುಂಪು ಎಂಬಲ್ಲಿ ರಸ್ತೆ ಮಧ್ಯೆ ಇರುವ ಗುಂಡಿಯನ್ನು ತಪ್ಪಿಸುವ ಕಾರಣದಿಂದ ಎದುರಿನಿಂದ ಬರುತ್ತಿದ್ದ ಬೈಕ್ ಸವಾರ ಬಲಬದಿಯತ್ತ ಬರುವುದನ್ನು ಗಮನಿಸಿದ ರಿಕ್ಷಾ ಚಾಲಕ ಎಡಬದಿಗೆ ತಿರುಗಿಸಿದಾಗ ನಿಯಂತ್ರಣ ಕಳೆದುಕೊಂಡು ಚರಂಡಿಗೆ ಪಲ್ಟಿಯಾಗಿದೆ. ರಸ್ತೆ ಮಧ್ಯೆ ಇರುವ ಪೈಪ್ ಲೈನ್ ಗುಂಡಿಯನ್ನು ಸಮರ್ಪಕವಾಗಿ ಮುಚ್ಚದೆ ಹಾಗೆ ಬಿಟ್ಟಿರುವುದೇ ಅಪಘಾತಕ್ಕೆಕಾರಣವಾಗಿದೆ. ಆಟೋ ರಿಕ್ಷಾದಲ್ಲಿ ಮಹಿಳೆಯೋರ್ವರು ಮಾತ್ರ ಇದ್ದು ಗಾಯಗೊಂಡ ಅವರನ್ನು ತಕ್ಷಣ ಸೇರಿದ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಯ ವ್ಯವಸ್ಥೆ ಮಾಡಿದರು. ಚಾಲಕ ಆನಂದ ಗಾಯಗೊಂಡಿರುತ್ತಾರೆ. ಅಟೋರಿಕ್ಷಾ ಜಖಂಗೊಂಡಿz.