ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.11:- ರಕ್ಷಾಬಂಧನ ಭಾರತೀಯ ಸಂಸ್ಕøತಿಯ ಮೇರುತತ್ವ.ಪ್ರಪಂಚವೇಒಂದುಕುಟುಂಬ ಎಂದು ಭಾವಿಸಿದ ಭಾರತೀಯ ಸನಾತನಧರ್ಮದ ಮೌಲ್ಯವನ್ನುಜಗತ್ತಿಗೆ ಎಂದಿಗೂ ಬಿಂಬಿಸುತ್ತಿರುವುದು ಭಾರತವೆಂದು ಹೆಮ್ಮೆಯಿಂದ ಹೇಳಬಹುದುಎಂದು ಸಂಸ್ಕೃತಿಚಿಂತಕ ಸುರೇಶ್‍ಎನ್‍ಋಗ್ವೇದಿ ತಿಳಿಸಿದರು.
ಅವರು ನಗರದಜೈ ಹಿಂದ್ ಪ್ರತಿμÁ್ಠನ ಜೈ ಹಿಂದ್‍ಕಟ್ಟೆಯಲ್ಲಿ ಹಮ್ಮಿಕೊಂಡಿದ್ದರಕ್ಷಾ ಬಂಧನಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತರಕ್ಷಾಬಂಧನವೂ ಸ್ನೇಹ,ವಿಶ್ವಾಸ,ನಂಬಿಕೆ,ಗೌರವ ಪರಸ್ಪರಅರ್ಥ ಮಾಡಿಕೊಳ್ಳುವುದು ಹಾಗೂ ಬದುಕಿನ ಸಂಪೂರ್ಣ ಪೂರ್ಣತೆಯ ಶ್ರೇಷ್ಠ ಬಂಧನವಾಗಿದೆ.ಭಾರತದ ಪುರಾಣಗಳಲ್ಲಿ ಮಹಾಕಾವ್ಯಗಳಲ್ಲಿ ರಕ್ಷಾಬಂಧನದ ಅನೇಕ ಮಹತ್ವಪೂರ್ಣವಾದ ಮಾರ್ಗದರ್ಶನ ಮೌಲ್ವಿಕದರ್ಶನ ನಮಗೆ ದೊರಕುತ್ತದೆ.ಶ್ರೀ ಕೃಷ್ಣ ಪರಮಾತ್ಮ ಹಾಗೂ ದ್ರೌಪದಿಯ, ಕೃಷ್ಣ ಸುಧಾಮರ ಚಿತ್ರಣಗಳು ನಮಗೆ ಸದಾ ಸರಿದಾರಿಯಲ್ಲಿ ಹೋಗಲು ಸಹಕಾರಿಯಾಗಿದೆ.ರಕ್ಷಾಬಂಧನದಅರ್ಥಪೂರ್ಣವಾದತತ್ವವನ್ನುಯುವಕರಿಗೆ ಮತ್ತು ಮನೆಮನೆಗಳಿಗೆ ತಲುಪಿಸುವ ಕಾರ್ಯವಾಗಬೇಕು.ಪ್ರತಿ ಮನೆಗಳಲ್ಲೂ ಮನಸ್ಸುಗಳು ಪ್ರೀತಿಯಿಂದ ಸ್ನೇಹದಿಂದ ಬೆಳೆಯುವ ವಾತಾವರಣ ಸೃಷ್ಟಿಯಾಗಬೇಕು. ಸಾಹಿತ್ಯದಚಿಂತನೆ ಪುರಾಣಗಳ, ಅರ್ಥಇತಿಹಾಸ ತಿಳಿಸುವ ಸಂಘಟನೆಗಳು ಹೆಚ್ಚಾಗಬೇಕು ಎಂದು ತಿಳಿಸಿದರು.
ರಕ್ಷಾಬಂಧನವನ್ನುಕಟ್ಟುವ ಮೂಲಕ ಪರಸ್ಪರ ಸೌಹಾರ್ದ,ಭಾವೈಕ್ಯತೆ,ಏಕತೆಯ ಸ್ವರೂಪವಾಗಿರಕ್ಷೆಯು ನಮ್ಮೆಲ್ಲರನ್ನು ಸದಾ ಕಾಲ ಸಂತೋಷವಾಗಿಇಡಲಿ ಎಂದು ಶಾರದಾಅಭಿಯಾನದ ವತ್ಸಲಾರಾಜಗೋಪಾಲ್ ತಿಳಿಸಿದರು.
ಕಾರ್ಯಕ್ರಮದಲ್ಲಿಜೈ ಹಿಂದ್ ಪ್ರತಿμÁ್ಠನದ ಕುಸುಮ ಶರಣ್ಯ,ಶ್ರಾವ್ಯ,ಸಿಂಚನ,ಸಾನಿಕ,ಮಾಲಾ, ಸರಸ್ವತಿ ಮುಂತಾದವರು ಉಪಸ್ಥಿತರಿದ್ದರು.




























