Home ಜಿಲ್ಲೆ ರಂಭಾಪುರ ಶ್ರೀಗಳ ದಸರಾ ದರ್ಬಾರು ಬಳ್ಳಾರಿಯಲ್ಲಿ ನಡೆಸುವಂತೆ ಮನವಿ

ರಂಭಾಪುರ ಶ್ರೀಗಳ ದಸರಾ ದರ್ಬಾರು ಬಳ್ಳಾರಿಯಲ್ಲಿ ನಡೆಸುವಂತೆ ಮನವಿ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಅ.14: ವೀರಶೈವ ಪಂಚಪೀಠಗಳಲ್ಲಿ ಒಂದಾದ ರಂಭಾಪುರಿ ಪೀಠದ ಜಗದ್ಗುರುಗಳು ಪ್ರತಿ ವರ್ಷ ನಡೆಸುತ್ತಾ ಬಂದಿರುವ ಮುಂದಿನ ವರ್ಷದ ದಸರಾ ದರ್ಬಾರ ಕಾರ್ಯಕ್ರಮವನ್ನು ಬಳ್ಳಾರಿ ನಗರದಲ್ಲಿ ನಡೆಸುವಂತೆ ಜಗದ್ಗುರುಗಳ ಬಳಿ ಬಿನ್ನಹ ಮಾಡಲು ನಗರದ ವೀರಶೈವ ಲಿಂಗಾಯತ ಮುಖಂಡರು ಸಿದ್ದತೆ ನಡೆಸಿದ್ದಾರೆ.

ನಿನ್ನೆ ಸಂಜೆ ನಗರದ ಖಾಸಗಿ ಹೊಟೇಲ್ ನಲ್ಲಿ ಸಭೆ ಸೇರಿದ ಮುಖಂಡರು. ಈ ವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ದಸರಾ ದರ್ಬಾರು ಕಾರ್ಯಕ್ರಮ ನಡೆದಿಲ್ಲ. ಈ ನಿಟ್ಟಿನಲ್ಲಿ ಮುಂದಿನ ವರ್ಷ ಬಳ್ಳಾರಿಯಲ್ಲಿ ನಡೆಸಲು ಶ್ರೀಗಳ ಬಳಿ ಮನವಿ ಮಾಡಿಕೊಳ್ಳಬೇಕಿದೆ.

ಈ ವರ್ಷ ಜಗದ್ಗುರುಗಳವರು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ದಸರಾ ದರ್ಬಾರದ ಪೂಜಾ ಕಾರ್ಯಕ್ರಮ ನಡೆಸುತ್ತಿದ್ದಾರೆ. ಅಲ್ಲಿಗೆ ಅ.18 ರಂದು ತೆರಳಿ ಮನವಿ ಮಾಡಲು ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಯ್ತು.