
ಉಡುಪಿ: ನಗರಸಭೆಯ ಪೌರಾಯುಕ್ತರಾದ ಮಹಾಂತೇಶ್ ನಗರ ಸಭೆ, ಉಡುಪಿ ಇವರ ಕಚೇರಿಯಲ್ಲಿ ಆಸ್ತಿತೆರಿಗೆ ಪಾವತಿಯನ್ನು ಇ-ಸ್ವೀಕೃತಿ ಮೂಲಕ ಚಲನ್ ಸೃಜನೆ ಮಾಡಿ ಯೂನಿಯನ್ ಬ್ಯಾಂಕ್ ನಲ್ಲಿ ನಗರಸಭೆ ಖಾತೆ ಸಂಖ್ಯೆ ಗೆ ಜಮಾ ಮಾಡಲಾಗುತ್ತದೆ.
ದಿನಾಂಕ ೦೩/೦೨/೨೦೨೬ ರಂದು ಕಚೇರಿಯಲ್ಲಿ ಆಸ್ತಿತೆರಿಗೆ ಪಾವತಿಯನ್ನು ತುಲನೆ ಮಾಡುತ್ತಿರುವಾಗ ದಿನಾಂಕ ೨೮/೦೧/೨೦೨೬ ರಂದು ಆಸ್ತಿತೆರಿಗೆ ಪಾವತಿ ಎಂದು ಚಲನ್ ಮೇಲೆ ಯೂನಿಯನ್ ಬ್ಯಾಂಕ್ ನ ಸೀಲ್ ಲಭ್ಯವಿದ್ದು, ಆದರೆ ಅದೇ ದಿನಾಂಕದಲ್ಲಿ ಯೂನಿಯನ್ ಬ್ಯಾಂಕ್ ಪುಸ್ತಕದ ವಿವರ ಪಟ್ಟಿಯಲ್ಲಿ ಪಾವತಿ ಆಗಿರುವ ಬಗ್ಗೆ ನಮೂದು ಇಲ್ಲದಿರುವುದು ಕಂಡು ನಗರಸಭೆಯ ಸಿಬ್ಬಂದಿ ಯವರು ಪೌರಾಯುಕ್ತರ ಗಮನಕ್ಕೆ ತಂದಿರುತ್ತಾರೆ.
ಮುಂದುವರೆದು ದಿನಾಂಕ ೦೪/೦೨/೨೦೨೬ ರಂದು ಪುನಃ ಆಸ್ತಿತೆರಿಗೆ ಪಾವತಿಯನ್ನು ತುಲನೆ ಮಾಡುತ್ತಿರುವಾಗ ದಿನಾಂಕ ೦೪/೦೨/೨೦೨೬ ರಂದು ಯೂನಿಯನ್ ಬ್ಯಾಂಕ್ ಸೀಲ್ ಹೊಂದಿದ ಚಲನ್ ಗಳನ್ನು ಪರಿಶೀಲನೆ ನಡೆಸಿದಾಗ ಅವುಗಳಲ್ಲಿ ಈಗಾಗಲೇ ದಿನಾಂಕ ೨೮/೦೧/೨೦೨೬ ರಂದು ಜನರೇಟ್ ಆಗಿದ್ದ ಚಲನ್ ಸಂಖ್ಯೆ ಆಗಿರುತ್ತವೆ.
ಒಂದೇ ಚಲನ್ ಸಂಖ್ಯೆಗೆ ಎರಡು ಬೇರೆ ಬೇರೆ ದಿನಾಂಕಗಳಲ್ಲಿ ಯೂನಿಯನ್ ಬ್ಯಾಂಕ್ ಸೀಲ್ ಉಳ್ಳ ಚಲನ್ ಗಳು ದೊರೆತಿದ್ದು, ಆರೋಪಿಗಳು ಯೂನಿಯನ್ ಬ್ಯಾಂಕ್ ನ ಸೀಲ್ ನ್ನು ದುರ್ಬಳಕೆ ಮಾಡಿ ಆಸ್ತಿ ತೆರಿಗೆ ಪಾವತಿ ಮಾಡಿದ ಹಣವನ್ನು ಪಡೆದು ಮೋಸ ವಂಚನೆ ಮಾಡಿರುವುದಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ ೨೬/೨೦೨೬ ಕಲಂ: ೩೩೬(೨), ೩೩೬(೩), ೩೪೦(೨), ೩೧೮(೪) ಖ/W ೩(೫) ಃಓS ರಂತೆ ಪ್ರಕರಣ ದಾಖಲಾಗಿರುತ್ತದೆ.

























