
ಸುಳ್ಯ:ಜೇಸಿಐ ಪಂಜ ಪಂಚಶ್ರೀ, ಯುವಜನ ಸಂಯುಕ್ತ ಮಂಡಳಿ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಶೌರ್ಯ ಯುವತಿ ಮಂಡಲ ಪೈಲಾರು ಇದರ ಸಹಯೋಗದಲ್ಲಿ ಯುವಕ ಯುವತಿ ಮಂಡಲಗಳಿಗೆ ಯುವಾಭ್ಯುದಯ” ಸರಣಿ ತರಬೇತಿ ಕಾರ್ಯಕ್ರಮ ಪೈಲಾರು ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ರಕ್ತದಾನ ವಿಭಾಗದ ವಲಯ ೧೫ರ ಸಂಯೋಜಕ ಪ್ರದೀಪ್ ರೈ ಬೀಡು ನೆರವೇರಿಸಿದರು. ಜೇಸಿಐ ಪಂಜ ಪಂಚಶ್ರೀಯ ಅಧ್ಯಕ್ಷ ದೇವಿಪ್ರಸಾದ್ ಚಿಕ್ಮುಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧ. ಗ್ರಾ. ಯೋ ದೊಡ್ಡತೋಟದ ವಲಯಾಧ್ಯಕ್ಷ ದಯಾನಂದ ಗುಡ್ಡೆಮನೆ ಉಪಸ್ಥಿತರಿದ್ದರು. ವಲಯ ತರಬೇತುದಾರ ಸೋಮಶೇಖರ ನೇರಳ ತರಬೇತಿ ನಡೆಸಿ ಕೊಟ್ಟರು.
ವೇದಿಕೆಯಲ್ಲಿ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ಶೌರ್ಯ ಯುವತಿಮಂಡಲದ ಅಧ್ಯಕ್ಷ ಭವ್ಯ ನಾಯರ್‌ಕಲ್ಲು , ಯುವಜನ ಸಂಯುಕ್ತ ಮಂಡಳಿಯ ಉಸ್ತುವಾರಿ ನಿರ್ದೇಶಕ ರಾಜೀವಿ ಗೋಳ್ಯಾಡಿ, ಕಾರ್ಯಕ್ರಮ ನಿರ್ದೇಶಕ ಜೀವನ್ ಶೆಟ್ಟಿಗದ್ದೆ, ಕಾರ್ಯದರ್ಶಿ ಪ್ರಕಾಶ್ ಅಳ್ಪೆ ಉಪಸ್ಥಿತರಿದ್ದರು. ಜೇಸಿ ವಿಜೇಶ್ ಹಿರಿಯಡ್ಕ ಸ್ವಾಗತಿಸಿ, ಅಶೋಕ್ ಕುಮಾರ್ ದಿಡುಪೆ ಕಾರ್ಯಕ್ರಮ ನಿರೂಪಿಸಿದರು.






























