ಯುವಕರು ರಕ್ತದಾನ ಮಾಡಿ ಜೀವ ಉಳಿಸಿ: ಶ್ರೀಕಂಠ

ಸಂಜೆವಾಣಿ ವಾರ್ತೆ
ನಂಜನಗೂಡು: ಜ.28:-
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆ ಅಧ್ಯಕ್ಷ ಶ್ರೀಕಂಠ ಆರ್ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಯುವ ಮುಖಂಡರು ರಕ್ತದಾನ ಮಾಡುವ ಮೂಲಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ನಮನ ಸಲ್ಲಿಸಿದರು.

ಸಂಗೊಳ್ಳಿ ರಾಯಣ್ಣ ಬಲಿದಾನದಂದು ಜೀವದಾರ ಸಹಯೋಗದೊಂದಿಗೆ ನಗರಸಭೆ ಮಾಜಿ ಅಧ್ಯಕ್ಷ ಮಹದೇವಸ್ವಾಮಿ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆ ಅಧ್ಯಕ್ಷ ಶ್ರೀಕಂಠ ಸ್ವಾಮಿ ಹಾಗೂ ರೈತ ಸಂಘದ ತಾಲೂಕು ಅಧ್ಯಕ್ಷ ಸತೀಶ್ ರಾವ್ ಕನಕ ಜಯಂತೋತ್ಸವ ಮಾಜಿ ಅಧ್ಯಕ್ಷ ಮೋಹನ್ ಸೇರಿದಂತೆ 50ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗುವ ಮೂಲಕ ನಗರಸಭೆ ಮಾಜಿ ಅಧ್ಯಕ್ಷ ಮಾದೇವಸ್ವಾಮಿ ಚಾಲನೆ ನೀಡಿದರು ನಂತರ ರಕ್ತದಾನ ಶಿಬಿರ ನಡೆಯಿತು ಇದೇ ಸಂದರ್ಭದಲ್ಲಿ ಶಾಸಕ ದರ್ಶನ್ ದ್ರುವ ನಾರಾಯಣ್ ಮತ್ತು ಮಾಜಿ ಶಾಸಕ ಹರ್ಷವರ್ಧನ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪುಷ್ಪಾರ್ಚನೆ ಸಲ್ಲಿಸಿದರು.
24 ವರ್ಷ ಗಡಿಭಾಗದಲ್ಲಿ ಇಂಡಿಯನ್ ಆರ್ಮಿ ಆಗಿ ಸೇವೆ ಸಲ್ಲಿಸಿದ ಸೇಕ್ ದಾವೂದ್ ಎಂಬುವರಿಗೆ ಸನ್ಮಾನಿಸಲಾಯಿತು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆ ಅಧ್ಯಕ್ಷ ಶ್ರೀಕಂಠ ಮಾತನಾಡಿ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಬಂದಂತ ಎಲ್ಲರಿಗೂ ಅಭಿನಂದನೆಗಳು. ನಾವು ಮಾಡುವ ಯಾವುದೇ ಕಾರ್ಯಕ್ರಮ ಅರ್ಥಪೂರ್ಣವಾಗಿರಬೇಕು ಇನ್ನೊಬ್ಬರಿಗೆ ಸಹಾಯ ಹಸ್ತ ನೀಡುವ ಮೂಲಕ ಕಾರ್ಯಕ್ರಮ ಆಗಬೇಕು ಪಟಾಕಿ ಸಿಡಿಸಿ ಆಚರಣೆ ಸಲ್ಲದು ಆದ್ದರಿಂದ ನಮ್ಮೆಲ್ಲ ಯುವಕರ ಮಿತ್ರರ ಸಹಾಯದಿಂದ ರಕ್ತದಾನ ಮಾಡಲು ಸಭೆಯಲ್ಲಿ ನಿರ್ಧರಿಸಿದೆವು . ಅದರಂತೆ ಎಲ್ಲರೂ ಕೂಡ ರಕ್ತದಾನ ಮಾಡಿ ಕಾರ್ಯಕ್ರಮ ಯಶಸ್ವಿ ಮಾಡಿದ್ದಾರೆ ಅವರಿಗೆ ಅಭಿನಂದನೆಗಳು ಕಡೆಯದಾಗಿ ಹೇಳುವುದೇನೆಂದರೆ ರಕ್ತದಾನ ಮಾಡಿ ಜೀವ ಉಳಿಸಿ ಎಂದು ಅಥವಾ ಜೀವ ಉಳಿಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ರೈತ ಮುಖಂಡರಾದ ವಿದ್ಯಾಸಾಗರ್, ಸತೀಶ್ ರಾವ್ ಇಮ್ಮಾವು ರಘು ಖಾಲಿದ್ ಚಂದ್ರು ಸಿದ್ದರಾಜು ಮನೋಜ್ ಕುಮಾರ್ ವಿನಯ್ ದೇವು ಮದನ ರವಿಕುಮಾರ್ ಶಿವಸ್ವಾಮಿ ಜೈಚಂದ್ರ ಶಿವಪ್ಪ ಮಾದಪ್ಪ ಯೋಗಿ ಮಧುರಾಜ್ ಮನು ಮಹೇಶ್ ಲೋಕೇಶ್ ಮೋಹನ್ ಪ್ರಭು ನಿಂಗರಾಜು ಮಾದೇವ ಮಹೇಶ್ ಸುರೇಶ್ ನಂದ ಮಂಜು ಶಿವಕುಮಾರ ಪ್ರದೀಪ್ ವಾಸು ಬಸವರಾಜು ಮತ್ತು ರಾಯಣ್ಣನ ಅಭಿಮಾನಿ ಬಳಗದವರು ಮತ್ತು ಅಭಿಮಾನಿಗಳು ಸೇರಿದಂತೆ ಇತರರು ಇದ್ದರು.