
ಸಂಜೆವಾಣಿ ನ್ಯೂಸ್
ಮೈಸೂರು: ಜ.13:- ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ರವರು ಮಾಲಾರ್ಪಣೆ ಮಾಡಿದರು.
ಇದೇ ಸಂಧರ್ಭದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಧಿಕಾರದ ಅಧ್ಯಕ್ಷ ಅಯೂಬ್ ಖಾನ್ ರವರು ಮಾತನಾಡಿ ಸ್ವಾಮಿ ವಿವೇಕಾನಂದರ ಸಂದೇಶಗಳು ಪಾಲಿಸುವಲ್ಲಿ ಯುವ ಸಮೂಹ ಮುಂದಾಗಬೇಕು ಉತ್ತಮ ಶಿಕ್ಷಣ ಪಡೆದು ದೇಶದ ಭವಿಷ್ಯದ ಆಸ್ಥಿಯಾಗಿ ಯುವಕರು ನಿರ್ಮಾಣವಾಗಬೇಕು, ದುಷ್ಚಟಗಳಿಗೆ ಬಲಿಯಾಗದೆ ಶಿಸ್ತು, ಸಮಯಪರಿಪಾಲನೆ ರೂಡಿಸಿಕೊಳ್ಳಬೇಕು, ಮಹಾತ್ಮ ಗಾಂಧಿ ಮತ್ತು ಸ್ವಾಮಿ ವಿವೇಕಾನಂದರ ಚಿಂತನೆ ಯುವಭಾರತ ಕಟ್ಟುವ ಕಡೆ ಪ್ರಮುಖವಾಗಿತ್ತು ಸ್ವದೇಶಿ ವಸ್ತುಗಳ ಬಳಕೆ, ಅವರು ಕೊಟ್ಟಂತಹ ಘೋಷಾವಾಕ್ಯ ಏಳಿ ಏದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ ಎನ್ನುವುದು ಯುವಸಮೂಹಕ್ಕೆ ಸ್ಪೂರ್ಥಿಯಾಗಿದೆ ಎಂದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಪತ್ರಕರ್ತರಾದ ಟಿ. ಗುರುರಾಜ್, ಮಾಜಿ ನಗರಪಾಲಿಕೆ ಸದಸ್ಯರಾದ ಸಯ್ಯದ್ ಹಸ್ರದ್ ಉಲ್ಲಾ, ಸುಹೇಲ್ ಬೇಗ್, ರಘುರಾಜೇ ಅರಸ್, ಯುವ ಮುಖಂಡರಾದ ಜಿ. ರಾಘವೇಂದ್ರ, ಗಾಂಧಿನಗರ ರಾಕೇಶ್, ಎಸ್.ಎನ್ ರಾಜೇಶ್, ನಿರೂಪಕ ಅಜಯ್ ಶಾಸ್ತ್ರಿ, ನಸ್ರುಲ್ಲಾ, ಒಂಟಿಕೊಪ್ಪಲು ಗುರುರಾಜ್, ಕೈಸರ್ ಅಹಮದ್, ತಬ್ರೇಜ್ ಪಾಷಾ, ನಾಗೇಶ್, ಮಹೇಂದ್ರ ಇನ್ನಿತರರು ಇದ್ದರು.


























