
ಪಂಜದಲ್ಲಿ ಮೇಳೈಸಿದ ರಾಜ್ಯ ಯುವ ಸಂಭ್ರಮ ಉದ್ಘಾಟನೆ
ಸುಳ್ಯ:ಯುವಕರು ಚಿಂತೆ ಮಾಡುವುದನ್ನು ಬಿಟ್ಟು ಚಿಂತನಾಶೀಲರಾಗಿ ಸಮಾಜಕ್ಕೆ ಕೊಡುಗೆ ನೀಡುವ ಕೆಲಸ ಮಾಡಬೇಕು. ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡು ಕ್ರಿಯಾಶೀಲರಾಗಿರಬೇಕು ಆ ಮೂಲಕ ತಮ್ಮೂರಿನ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ದ.ಕ.ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು ಇದರ ಸಹಯೋಗದಲ್ಲಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ರಾಜ್ಯ ಮಟ್ಟದ ಯುವಸಂಭ್ರಮ ಕಾರ್ಯಕ್ರಮದ ಎರಡನೇ ದಿನವಾದ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ತಾಲೂಕು ಮಟ್ಟದಲ್ಲಿ ಯುವಜನ ಮೇಳ ಆಗಬೇಕು. ಸರಕಾರ ಅನುದಾನ ನೀಡಬೇಕೆಂದು ನಾನು ಶಾಸಕಿಯಾದ ಪ್ರಥಮ ಅಧಿವೇಶನದಲ್ಲೇ ಪ್ರಸ್ತಾಪ ಮಾಡಿದ್ದೇನೆ. ಆ ಬಳಿಕವೂ ಸದನದಲ್ಲಿ ಧ್ವನಿ ಎತ್ತಿದ್ದೇನೆ. ಆದತೆ ಸರಕಾರ ಉತ್ತರ ನೀಡಿಲ್ಲ. ಮುಂದೆಯು ಯುವಜನರ ಪರವಾಗಿ ಧ್ವನಿಯಾಗಿ ಮಾತನಾಡುವೆ” ಎಂದು ಹೇಳಿದರು.
ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ರಾಜ್ಯ ಸಂಭ್ರಮ ಉದ್ಘಾಟಿಸಿ ಮಾತನಾಡಿ ೭೫ ದಿನಗಳ ಕಾಲ ನಡೆಸಿದ ಸ್ವಚ್ಚತಾ ಅಭಿಯಾನ ಯುವಜನ ಸಂಯುಕ್ತ ಮಂಡಳಿ ಮಾಡಿರುವ ಶ್ರೇಷ್ಠ ಕಾರ್ಯ ಎಂದು ಹೇಳಿದರು.
ಮೆರವಣಿಗೆಗೆ ಚಾಲನೆ ನೀಡಿದ ರಾಜ್ಯ ಕನಿಷ್ಠ ವೇತನಾ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಮಾತನಾಡಿ ಗ್ರಾಮೀಣ ಭಾಗದ ಯುವಕರ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಿದ್ದ ಯುವಜನ ಮೇಳಗಳು ಮತ್ತೆ ನಡೆಯಬೇಕು, ಅದಕ್ಕೆ ಅನುದಾನ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.
ರಾಜ್ಯ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ. ಬಾಲಾಜಿ ಮಾತನಾಡಿ ತಾಲೂಕು ಯುವಜನ ಮೇಳಗಳನ್ನು ಸರಕಾರ ಮತ್ತೆ ಆರಂಭಿಸಬೇಕು. ಈ ನಿಟ್ಟಿನಲ್ಲಿ ಸರಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದ್ದು, ಮುಂದೆ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಜಾನುವಾರ ಮೇಳವನ್ನು ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ್ ಉದ್ಘಾಟಿಸಿದರು. ಬೆಳ್ತಂಗಡಿಯ ಕಿರಣ್ ಚಂದ್ರ ಡಿ ಪುಷ್ಪಗಿರಿ ಉರುವಾಲು, ಮಂಗಳೂರು ಡಿ.ಕೆ. ಗ್ರೂಪ್ ಆಫ್ ಕಂಪೆನೀಸ್ ವ್ಯವಸ್ಥಾಪಕ ನಿರ್ದೇಶಕ ಅಲ್ವಿನ್ ಜೋಯಲ್ ನೊರೊನ್ಹಾ, ರಾಜ್ಯ ಯುವಜನ ಒಕ್ಕೂಟದ ಅಧ್ಯಕ್ಷ ಡಾ.ಬಾಲಾಜಿ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಯುವಜನ ಸೇವಾ ಕ್ರೀಡಾ ಇಲಾಖೆಯ ಸುಳ್ಯ ತಾಲೂಕು ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ, ಹಿರಿಯರಾದ ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ, ಜಿಲ್ಲಾ ಯುವಜನ ಒಕ್ಕೂಟದ ನಿರ್ದೇಶಕ ರಾಕೇಶ್ ರೈ ಕೆಡೆಂಜಿ, ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಎ.ಪಿ.ಎಂ.ಸಿ. ಮಾಜಿ ಉಪಾಧ್ಯಕ್ಷ ಸಂತೋಷ್ ಜಾಕೆ, ಹಿರಿಯ ವೈದ್ಯರಾದ ಡಾ. ರಾಮಯ್ಯ ಭಟ್, ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ದೇವಿಪ್ರಸಾದ್ ಚಿಕ್ಮುಳಿ,ಯಂ. ಮಾಧವ ಗೌಡ ಬೆಳ್ಳಾರೆ, ಯುವ ಸಂಭ್ರಮ ಸಂಘಟನಾ ಸಮಿತಿ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು, ಪ್ರಧಾನ ಕಾರ್ಯದರ್ಶಿ ವಿಜೇಶ್ ಹಿರಿಯಡ್ಕ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ಗೌರವಾಧ್ಯಕ್ಷ ವಿಜಯಕುಮಾರ್ ಉಬರಡ್ಕ, ಕಾರ್ಯದರ್ಶಿ ಮುರಳಿ ನಳಿಯಾರು, ಕೋಶಾಧಿಕಾರಿ ಲೋಹಿತ್ ಬಾಳಿಕಳ ವೇದಿಕೆಯಲ್ಲಿ ಇದ್ದರು.
ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಪ್ರಾಸ್ತಾವಿಕ ಮಾತನಾಡಿದರು. ರಮ್ಯ ಬಾಬ್ಲುಬೆಟ್ಟು, ಆದ್ಯಾ ಬಾಬ್ಲುಬೆಟ್ಟು, ಆರಾಧನಾ ಬಾಬ್ಲುಬೆಟ್ಟು ಪ್ರಾರ್ಥಿಸಿದರು. ಸೋಮಶೇಖರ್ ನೇರಳ – ಕೌಶಿಕ್ ಕುಳ ಕಾರ್ಯಕ್ರಮ ನಿರೂಪಿಸಿದರು.
ಜಾನಪದ ವೈವಿಧ್ಯ ಸ್ಪರ್ಧೆ :
ರಾಜ್ಯ ಮಟ್ಟದ ಆಹ್ವಾನಿತ ತಂಡಗಳಿಂದ ಜನಪದ ವೈವಿಧ್ಯ ಸ್ಪರ್ಧೆ ಭಾನುವಾರ ನಡೆಯಿತು. ಇದರಲ್ಲಿ ರಾಜ್ಯದ ವಿವಿಧ ಕಡೆಗಳಿಂದ ೬ ತಂಡಗಳು ಭಾಗವಹಿಸಿತು. ವೀರ ಮಾರುತಿ ಗುತ್ತಿಗಾರು ತಂಡ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ವಿದ್ಯಾರ್ಥಿ ಸಂಘ ಬೈಕಂಪಾಡಿ ದ್ವಿತೀಯ, ಮುರಳಿ ಬ್ರದರ್‍ಸ್ ಪುತ್ತೂರು ತೃತೀಯ ಹಾಗೂ ಮೈಸೂರಿನ ತಂಡ ಚತುರ್ಥ ಸ್ಥಾನ ಪಡೆದುಕೊಂಡಿತ್ತು. ಗೆದ್ದ ತಂಡಗಳಿಗೆ ನಗದು ಸಹಿತ ಶಾಶ್ವತ ಫಲಕ ಪ್ರದಾನ ಮಾಡಲಾಯಿತು.


























