
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಫೆ.16 ಯುವಕರು ಉತ್ತಮ ಗುಣಗಳನ್ನು ಬೆಳೆಸಿಕೊಂಡು ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿಡಬೇಕು ಎಂದು ಹಿಂದುಳಿದ ಜಾತಿ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಬುಡ್ಡಿ ಬಸವರಾಜ್
ಕರೆ ನೀಡಿದರು.
ತಾಲೂಕಿನ ಹಂಪಾಪಟ್ಟಣ ಗ್ರಾಮದ ನವೋದಯ ಯುವಕ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಸೇವೆ ಎಂದರೆ ನಿಸ್ವಾರ್ಥ ಸೇವೆಯಾಗಿರಬೇಕು. ಗ್ರಾಮದ ಸಮೀಪ ಕಾರ್ಖಾನೆ ಸ್ಥಾಪನೆ ಆಗುತ್ತಿರುವ ಹಿನ್ನಲೆಯಲ್ಲಿ ಜನರ ಸುರಕ್ಷತೆ ಹಾಗೂ ಅಭಿವೃದ್ಧಿಯ ಕಡೆ ಯುವಕರು ವಿಶೇಷ ಗಮನ ಹರಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಬಿ. ಕುಬೇರ ,
ಮಾತನಾಡಿ ಯುವಕರು ಸಂಘಟಿತವಾಗಿ ಕಾರ್ಯನಿರ್ವಹಿಸಿ ಸಂಘವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಬೇಕು ಎಂದು ಹೇಳಿದರು.
ಎನ್. ನಾಗರಾಜ್ ಮಾತನಾಡಿದರು.
ನೂತನ ಅಧ್ಯಕ್ಷರಿಗೆ ಪದಗ್ರಹಣ ನೆರವೇರಿಸಲಾಯಿತು.
ಕಾಳಿಂಗರಾಯ ತಂಡ ಮಹಿಳಾ ಕಲಾವಿದರಿಗೆ ಸನ್ಮಾನ ಮಾಡಲಾಯಿತು.
ನೂತನ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ವಿಎಸ್ಎಸ್ಎನ್ ಅಧ್ಯಕ್ಷರಿಗೆ ಗೌರವ ಸಲ್ಲಿಸಲಾಯಿತು.
ಕುಮಾರೇಶ್ವರ ಕೃಪೋಷಿತ ಪಂಡಿತ ಶ್ರೀ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘ ಗದಗ ಇವರು ಕಾಮಿಡಿ ನಾಟಕ “ಅಕ್ಕ ಅಂಗಾರ ತಂಗಿ ಬಂಗಾರ” ನಾಟಕ ಪ್ರದರ್ಶನವಾಯಿತು
ಈ ಸಂದರ್ಭದಲ್ಲಿ ವಿಎಸ್ಎಸ್ಎನ್ ಅಧ್ಯಕ್ಷ ಹುಲುಗಪ್ಪ, ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಕಾಳಪ್ಪ, ಉಪಾಧ್ಯಕ್ಷ ಪಿ. ಗಣೇಶ, ಸದಸ್ಯರಾದ ಸಿ.ಎಲ್. ಕುಮಾರ್, ಬಿ. ನಾಗರಾಜ್, ಎಸ್. ಗಾಳೆಪ್ಪ, ಟಿ. ಮಂಜುನಾಥ್, ಸುಸಿ, ಗೀತಮ್ಮ, ಯಲ್ಲಪ್ಪ ಪತ್ರಿ, ಜಿ. ಮಂಜುಳಾ ಉಪಸ್ಥಿತರಿದ್ದರು. ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಬಿ.ಕೆ. ಬಸವರಾಜ್, ವಾಲಾಪುರ ಗ್ರಾ ಪಂ ಅಧ್ಯಕ್ಷ ಮಂಜುನಾಥ್, ಊರಿನ ಮುಖಂಡರಾದ ಉಪ್ಪಾರ್ ಕೃಷ್ಣಪ್ಪ, ಜಿ. ಫಕೀರಪ್ಪ, ಜಿ. ರಾಘವೇಂದ್ರ, ಉಪ್ಪಾರ್ ಸೋಮಣ್ಣ, ಪೂಜಾರ್ ಸೋಮಣ್ಣ, ಉಪ್ಪಾರ್ ಅಂಜಿನಿ, ಹಡಗಲಿ ಖಾಜಾ ಸಾಬ್ , ಎಚ್. ಅಶೋಕ, ಪತ್ರಿ ಎಲ್ಲಪ್ಪ, ಬಂಟರ ಸೋಮಣ್ಣ, ಮುಂಡರಗಿ ಈಶಪ್ಪ, ಜಿ. ಶ್ರೀನಿವಾಸ, ಎ. ಕೇಶವಮೂರ್ತಿ, ಕಮ್ಮಾರ್ ದೊಡ್ಡ ಹನುಮಂತಪ್ಪ, ಡಿ. ಹನುಮಂತಪ್ಪ, ಎಸ್. ಚಂದ್ರು, ಉಪ್ಪಾರ್ ಕನಕಪ್ಪ, ಸಣ್ಣಪ್ಪನವರ ನಾಗರಾಜ್, ನಜೀರ್ ಸಾಬ್, ಎಸ್ಟಿಎಂಸಿ ಅಧ್ಯಕ್ಷ ವಿ. ಹನುಮಂತ . ಉಲವತ್ತಿ ಬಸವರಾಜ್ . ಟಿ ಸುರೇಶ. ಟಿ. ಮಧುಸೂದನ್. ಬರದೂರ್ ಸೋಮನಾಥ್, ಕಡ್ಲಪ್ಪ .ಬಿ,ಮಲ್ಲೇಶ, ಟಿ ಕನಕಪ್ಪ, ಚಿಂತ್ರಪಳ್ಳಿ ಗೋಣೆಪ್ಪ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಎಲ್ಐಸಿ ಹುಲುಗಪ್ಪ, ಭಜಂತ್ರಿ ಸೋಮನಾಥ ನಿರ್ವಹಿಸಿದರು



























