Home ಜಿಲ್ಲೆ ಮೈಸೂರು ಯುದ್ಧ ನಿಲ್ಲಿಸಲು ಒತ್ತಾಯಿಸಿ ಈಡುಗಾಯಿ ಚಳವಳಿ

ಯುದ್ಧ ನಿಲ್ಲಿಸಲು ಒತ್ತಾಯಿಸಿ ಈಡುಗಾಯಿ ಚಳವಳಿ

ಸಂಜೆವಾಣಿ ನ್ಯೂಸ್
ಮೈಸೂರು, ಏ.01:-
ಯುದ್ಧ ನಿಲ್ಲಿಸಿ, ಗ್ಯಾಸ್ ಸಿಲಿಂಡರ್ ಕೊಡಿಸುವಂತೆ ಒತ್ತಾಯಿಸಿ, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ರಾಮನಗರದಿಂದ ಮೈಸೂರಿನವರೆಗೆ ಮಂಗಳವಾರ ಈಡುಗಾಯಿ ಚಳವಳಿ ನಡೆಸಿದರು.


ನಗರದ ಹಾರ್ಡಿಂಜ್ ವೃತ್ತದ ಬಳಿ ಈಡುಗಾಯಿ ಒಡೆದು, ಇರಾನ್ ಮೇಲಿನ ಅಮೆರಿಕಾ ಹಾಗೂ ಇಸ್ರೇಲ್ ದಾಳಿಯಿಂದ ಮಾನವ ಕುಲವೇ ಬೆಚ್ಚಿ ಬಿದ್ದಿದೆ. ಇದರಿಂದ ತೀವ್ರ ಪರಿಣಾಮ ಬೀರಿ, ಜನರು ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಇಲ್ಲದೇ ಪರದಾಡುತ್ತಿದ್ದಾರೆ. ಈ ಕೂಡಲೇ ಯುದ್ಧ ನಿಲ್ಲಿಸಿ, ಶಾಂತಿ ಸ್ಥಾಪನೆಯಾಗಲಿ ಎಂದು ಒತ್ತಾಯಿಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಗ್ಯಾಸ್ ಸಿಲಿಂಡರ್ ಇಲ್ಲದೇ ಆಟೋಚಾಲಕರು, ಹೋಟೆಲ್‍ನವರು, ತಿಂಡಿ ನಡೆಸುತ್ತಿರುವ ವ್ಯಾಪಾರಿಗಳು ಪರದಾಡುತ್ತಿದ್ದಾರೆ. ಕೇಂದ್ರ ಸರಕಾರ ಸಮರ್ಪಕವಾಗಿ ಗ್ಯಾಸ್ ಸಿಲಿಂಡರ್‍ಗಳ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.


ಸರ್ವ ಪಕ್ಷಗಳ ನಿಯೋಗದಲ್ಲಿ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ ಪಕ್ಷಗಳ ರಾಜಕೀಯ ಮುಖಂಡರು, ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ, ಗ್ಯಾಸ್ ಸಿಲಿಂಡರ್ ಸಮಸ್ಯೆ ನೀಗಿಸಲಿ ಎಂದು ಒತ್ತಾಯಿಸಿದರು.


ರಾಜ್ಯ ಸರಕಾರ ಜನರಿಗೆ ಅನುಕೂಲ ಮಾಡಿಕೊಡಲಿ, ಸರಕಾರದ ಮಂತ್ರಿಗಳು ನೀವು ಮೊದಲು ಸೌದೆಯಲ್ಲಿ ಅಡುಗೆ ಮಾಡಿದರೆ ಜನರ ಕಷ್ಟ ಅರಿವಾಗುತ್ತದೆ. ಸಮಸ್ಯೆ ಬಗೆಹರಿಸದಿದ್ದರೆ ಸಿಎಂ ಸಿದ್ದರಾಮಯ್ಯ ಮನೆಗೆ ನುಗ್ಗುತ್ತೇನೆ. ಇಡೀ ರಾಜ್ಯದಲ್ಲಿ ಆಟೋ ಚಾಲಕರು ನೋವು ಪಡುತ್ತಿದ್ದಾರೆ. ಈ ಚಾಲಕರಿಗೆ ಪ್ರತಿ ತಿಂಗಳು 15 ಸಾವಿರ ಕೊಡಿ. 15 ದಿನದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.


ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿಗಳು ಪತ್ತೆ ವಿಚಾರವಾಗಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ತವರಿನಲ್ಲಿ ಹೀಗಾದರೆ ಹೇಗೆ? ಗೃಹಮಂತ್ರಿಗಳು, ಪೆÇಲೀಸ್ ಇಲಾಖೆ ಏನು ಮಾಡುತ್ತಿದೆ? ಮಹಾರಾಷ್ಟ್ರ ಪೆÇಲೀಸರು ಡ್ರಗ್ಸ್ ಪತ್ತೆ ಹಚ್ಚಲು ಮೈಸೂರಿಗೆ ಬರಬೇಕಾದರೆ, ಇಲ್ಲಿನ ಪೆÇಲೀಸರು ಏನು ಮಾಡುತ್ತಿದ್ದಾರೆ? ಡ್ರಗ್ಸ್ ಪ್ರಕರಣಗಳು ಮತ್ತೆ ಬಾರದಂತೆ ಸಿದ್ದರಾಮಯ್ಯನವರು ಬಿಗಿ ನಿಲುವು ತಾಳಬೇಕು ಎಂದು ಹೇಳಿದರು.


ಪಂಚರಾಜ್ಯ ಚುನಾವಣೆ ಕುರಿತು ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ ಶಕ್ತಿಯುತವಾಗಿ ಇರಬೇಕಾದರೆ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರು ಗೆಲ್ಲಬೇಕು. ತಮಿಳುನಾಡು ಹಾಗೂ ಕೇರಳ ಸೇರಿದಂತೆ ಚುನಾವಣೆ ಘೋಷಣೆಯಾಗಿರುವ ರಾಜ್ಯಗಳಲ್ಲಿ ಬಿಜೆಪಿ ಸೋಲಬೇಕು. ಯಾವುದೇ ಪಕ್ಷ ಧರ್ಮ, ಜಾತಿಯ ಹೆಸರಿನಲ್ಲಿ ಅಧಿಕಾರಕ್ಕೆ ಬರಬಾರದು. ಜಾತ್ಯಾತೀತ ಪಕ್ಷಗಳು ಅಧಿಕಾರಕ್ಕೆ ಬರಬೇಕು ಎಂದರು.


ಅಣ್ಣಮಲೈ ರಾಜ್ಯದಲ್ಲಿ ಪೆÇಲೀಸ್ ಅಧಿಕಾರಿಯಾಗಿ ಒಳ್ಳೆಯ ಹೆಸರು ಮಾಡಿದ್ದರು. ಆದರೆ, ಕೆಲಸ ಬಿಟ್ಟು ಬಿಜೆಪಿ ಸೇರಿದ ಇವರನ್ನು ಮೂಲೆಗುಂಪು ಮಾಡಲಾಗಿದೆ. ಅಲ್ಲದೇ, ಅವರ ವ್ಯಕ್ತಿತ್ವಕ್ಕೆ ಅವಮಾನ ಮಾಡಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ಹೋರಾಟಗಾರರಾದ ಪಾರ್ಥಸಾರಥಿ, ಮೂಗೂರು ನಂಜುಂಡಸ್ವಾಮಿ, ತೇಜಸ್ ಲೋಕೇಶ್‍ಗೌಡ ಮತ್ತಿತರರು ಪಾಲ್ಗೊಂಡಿದ್ದರು.