ಯಾಚೇನಹಳ್ಳಿಯಲ್ಲಿ ರಸ್ತೆ ಡಾಂಬರೀಕರಣಕ್ಕೆ ಸಂಸದ ಸುನೀಲ್ ಬೋಸ್ ಚಾಲನೆ

ಸಂಜೆವಾಣಿ ವಾರ್ತೆ
ತಿ.ನರಸೀಪುರ.ಸೆ.29:-
ಹೆದ್ದಾರಿಗಳನ್ನು ಸಂಪರ್ಕಿಸುವ ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳನ್ನು ಬಲವರ್ಧನೆಗೊಳಿಸಲು ಹಾಗೂ ದುಸ್ಥಿತಿಯಲ್ಲಿದ್ದ ರಸ್ತೆಗಳನ್ನೂ ಡಾಂಬರೀಕರಣ ಗೊಳಿಸುವ ಕಾಮಗಾರಿಗೆ ರಾಜ್ಯ ಸರ್ಕಾರ ಅನುದಾನವನ್ನ ಮಂಜೂರು ಮಾಡಿದ್ದರಿಂದ ಯಾಚೇನಹಳ್ಳಿ ಮುಖ್ಯ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.


ತಾಲೂಕಿನ ಯಾಚೇನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ 4.82 ಕೋಟಿ ರೂಗಳ ವೆಚ್ಚದ ರಸ್ತೆ ಡಾಂಭರೀಕರಣ ಕಾಮಗಾರಿಗೆ ಭೂಮಿ ಸಲ್ಲಿಸಿ ಮಾತನಾಡಿದ ಅವರು ತಾಲೂಕಿನ ಗಡಿ ಗ್ರಾಮವಾದ ಯಾಚೇನಹಳ್ಳಿಯಲ್ಲಿ ಹದಗೆಟ್ಟಿದ್ದ 5.255 ಕಿ.ಮೀ ಬನ್ನೂರು ಮುಖ್ಯ ರಸ್ತೆಯನ್ನು ನವೀಕರಣಗೊಳಿಸಲು 6 ಕೋಟಿ ರೂಗಳಿಗೆ ಯೋಜನೆ ರೂಪಿಸಲಾಗಿತ್ತಾದರೂ 4.82 ಕೋಟಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ ಎಂದರು.


ಕ್ಷೇತ್ರದ ಶಾಸಕರಾಗಿರುವ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಅಭಿವೃದ್ಧಿ ಕಾರ್ಯಗಳ ಮೂಲಕ ಅಧಿಕಾರ ನೀಡಿದ ಜನರ ಋಣವನ್ನು ತೀರಿಸುತ್ತಿದ್ದಾರೆ. ದಸರಾ ಮುಗಿದ ಬಳಿಕ ಬನ್ನೂರು ಭಾಗದಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಬಡವರು ಮತ್ತು ಮಧ್ಯಮ ವರ್ಗದ ಜನರ ಹಿತವನ್ನು ಕಾಪಾಡಲಿಕ್ಕೆ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿರುವ ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಬದ್ಧವಾಗಿದ್ದು, ಹಂತ ಹಂತವಾಗಿ ಶಾಶ್ವತ ಯೋಜನೆಗಳಿಗೆ ಅನುದಾನವನ್ನು ಮಂಜೂರು ಮಾಡಲಾಗುವುದು ಎಂದು ಸುನೀಲ್ ಬೋಸ್ ತಿಳಿಸಿದರು.


ಮೈಸೂರಿನಿಂದ ಬನ್ನೂರು ಪಟ್ಟಣದ ಮಾರ್ಗವಾಗಿ ಯಾಚೇನಹಳ್ಳಿ ಗ್ರಾಮಕ್ಕೆ ಆಗಮಿಸಿದ ಸಂಸದರಿಗೆ ಮಾರ್ಗದುದ್ದಕ್ಕೂ ಸ್ವಾಗತಿಸಿದ ಆಯಾಯ ಗ್ರಾಮಗಳ ಕಾರ್ಯಕರ್ತರು ಹಾಗೂ ಮುಖಂಡರು ಅಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆದು, ಅಭಿವೃದ್ಧಿಗೆ ಅನುದಾನವನ್ನು ನೀಡುವಂತೆ ಕೋರಿದರು.


ಶ್ರೀ ರಾಮಕೃಷ್ಣ ಸೇವಾ ಆಶ್ರಮದ ನಾದನಂದನಾಥ ಸ್ವಾಮೀಜಿ, ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್.ಶಂಕರೇಗೌಡ, ಉಪಾಧ್ಯಕ್ಷ ವೈ.ಎಂ.ಚಂದ್ರು, ನಾಡಗೌಡರಾದ ವೈ.ಎಚ್. ಹನುಮಂತೇಗೌಡ, ಪುರಸಭೆ ಮಾಜಿ ಅಧ್ಯಕ್ಷ ಮುನಾವರ್ ಪಾಷ, ಮಾಜಿ ಉಪಾಧ್ಯಕ್ಷ ಬಿ. ಸಿ.ಪಾರ್ಥಸಾರಥಿ, ಸಹಾಯಕ ಪ್ರಾಧ್ಯಾಪಕ ಡಾ.ಬಿ ಕೆ.ಜ್ಞಾನಪ್ರಕಾಶ್, ಹಿಂದುಳಿದ ವರ್ಗಗಳ ಅಧ್ಯಕ್ಷ ಎ.ಎನ್. ಸ್ವಾಮಿ, ದಶಂಸ ಸಂಚಾಲಕ ಸೋಮಶೇಖರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ವೈ.ಸಿ.ಶಿವಕುಮಾರ, ಉಪಾಧ್ಯಕ್ಷೆ ಪಿ.ಶ್ವೇತ, ಸದಸ್ಯರಾದ ವೈ.ಎಸ್. ರಾಮಸ್ವಾಮಿ, ವೈ.ಟಿ.ಮಹೇಶ್ ಕುಮಾರ್, ಶೇಖರ್, ಸರೋಜಮ್ಮ, ಪ್ರೇಮಮ್ಮ, ಪಿಡಿಒ ವಿ.ಬಿ.ಕುಮಾರಸ್ವಾಮಿ, ಮಾಜಿ ಸದಸ್ಯ ಅಶೋಕ್ ಕುಮಾರ್, ತಾ ಪಂ ಮಾಜಿ ಸದಸ್ಯರಾದ ಕುಕ್ಕುರು ಗಣೇಶ್, ರಾಮಲಿಂಗಯ್ಯ, ಆಪ್ತ ಸಹಾಯಕ ಬಿ.ಬಸವರಾಜು, ರಾಷ್ಟ್ರೀಯ ಹೆದ್ದಾರಿ ಕಿರಿಯ ಇಂಜಿನಿಯರ್ ಬಿ.ಎ.ಮಹೇಶ್, ಗುತ್ತಿಗೆದಾರರಾದ ಬಿ.ಎಸ್. ಯೋಗಾನಂದ, ಪುರದ ಕೊಪ್ಪಲು ಅರವಿಂದ ಕುಮಾರ್, ರಾಮಕೃಷ್ಣ, ಜಿ.ಪಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಶಿವರಾಜು, ಲೋಕೋಪಯೋಗಿ ಎಇಇ ಸತೀಶ್ ಚಂದ್ರನ್, ಪೆÇೀಲಿಸ್ ಇನ್ಸ್ಪೆಕ್ಟರ್ ಮನೋಜ್ ಕುಮಾರ್, ಮುಖಂಡರಾದ ಸ್ವಾಮಿಗೌಡ, ಕುಮಾರ್ ರಾಮೇಗೌಡ, ಕೃಷ್ಣಗೌಡ, ಸೋಸಲೆ ಮಹದೇವಸ್ವಾಮಿ, ಪರಶಿವಮೂರ್ತಿ, ಡಿ.ಆರ್. ಮೂರ್ತಿ ಹಾಗೂ ಇತರರು ಇದ್ದರು.