Home ಜಿಲ್ಲೆ ಮೈಸೂರು ಯಶಸ್ವಿಯಾಗಿ ಜರುಗಿದ ಮಹಿಳಾ ಭಜನಾ ಸ್ಪರ್ಧೆ

ಯಶಸ್ವಿಯಾಗಿ ಜರುಗಿದ ಮಹಿಳಾ ಭಜನಾ ಸ್ಪರ್ಧೆ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.24:
– ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ), ಮೈಸೂರು ಜಿಲ್ಲಾ ಮಹಿಳಾ ಘಟಕದ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಮಹಿಳೆಯರಿಗಾಗಿನ ವಿಭಾಗ ಮಟ್ಟದ ಭಜನಾ ಸ್ಪರ್ಧೆಯು ಅತ್ಯಂತ ಯಶಸ್ವಿಯಾಗಿ ಜರುಗಿದೆ.


ಈ ಸ್ಪರ್ಧೆಯಲ್ಲಿ ವಿವಿಧ ಭಾಗಗಳಿಂದ ಮಹಿಳಾ ಭಜನಾ ತಂಡಗಳು ಭಾಗವಹಿಸಿದ್ದು, ತೀರ್ಪುಗಾರರ ಅಂತಿಮ ತೀರ್ಪಿನಂತೆ ವಿಜೇತರ ಪಟ್ಟಿಯನ್ನು ಈ ಕೆಳಗಿನಂತೆ ಪ್ರಕಟಿಸಲಾಗಿದೆ.
ವಿಜೇತ ತಂಡಗಳ ವಿವರ: ಮುಖ್ಯ ಬಹುಮಾನಗಳು, ಪ್ರಥಮ ಬಹುಮಾನ: ಶಾರದಾಂಬ ಭಜನಾ ತಂಡ, ಉರದಳ್ಳಿ, ಚಾಮರಾಜನಗರ. ದ್ವಿತೀಯ ಬಹುಮಾನ: ಅಕ್ಕಮಹಾದೇವಿ ತಂಡ, ಆಲೂರು, ತೃತೀಯ ಬಹುಮಾನ: ಅರಿವಿನ ಮನೆ ಮಹಿಳಾ ಬಳಗ,ಜೆಪಿ ನಗರ ಮೈಸೂರು, ಸಮಾಧಾನಕರ ಬಹುಮಾನಗಳು
ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಈ ಕೆಳಗಿನ ಮಹಿಳಾ ತಂಡಗಳಿಗೆ ಸಮಾಧಾನಕರ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.


ಸಂಸ್ಥೆಯ ಪದಾಧಿಕಾರಿಗಳು ಹಾಗೂ ತೀರ್ಪುಗಾರರಾದ ಗುರುಮೂರ್ತಿ ಡಿ.ಸಿ. ಅವರು ವಿಜೇತರಿಗೆ ಶುಭ ಹಾರೈಸಿದ್ದಾರೆ.
ಮಹಿಳೆಯರಲ್ಲಿ ಭಕ್ತಿ ಭಾವ ಹಾಗೂ ಕಲಾತ್ಮಕತೆಯನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯ ದೃಷ್ಟಿಯಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಎಂದು ಮೈಸೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಧನ್ಯಸತ್ಯೇಂದ್ರ ಮೂರ್ತಿ ಅವರು ತಿಳಿಸಿದ್ದಾರೆ.ಇದೆ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಹಾಗೂ ಅಬ್ದುಲ್ ಕಲಾಂ ಪ್ರಶಸ್ತಿ ಪಡೆದ ಶ್ರೀಮತಿ ಮಂಗಳಾ ಮುದ್ದುಮಾದಪ್ಪ ಅವರಿಗೆ ಅಭಿನಂದಿಸಿ ಗೌರವಿಸಲಾಯಿತು