ಯಮುನಾ ನದಿ ನೀರಿನ ಮಟ್ಟ ಏರಿಕೆ: ಪ್ರವಾಹ ಭೀತಿ

ದೆಹಲಿ,ಆ.19-ದೆಹಲಿಯಲ್ಲಿ ಯಮುನಾ ನದಿಯ ನೀರಿನ ಮಟ್ಟ ಗಣನೀಯವಾಗಿ ಏರುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ.ಹರಿಯಾಣದ ಹಥಿನಿಕುಂಡ್ ಬ್ಯಾರೇಜ್‍ನಿಂದ ಲಕ್ಷಾಂತರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ ನಂತರ ಯಮುನಾ ನದಿ ಉಕ್ಕಿ ಹರಿಯುತ್ತಿದೆ. ಈ ಋತುವಿನಲ್ಲಿ ಬಿಡುಗಡೆಯಾದ ಗರಿಷ್ಠ ನೀರು ಇದಾಗಿದೆ ಎಂದು ಹೇಳಲಾಗುತ್ತಿದೆ. ಸಧ್ಯ ಯಮುನಾದ ನೀರಿನ ಮಟ್ಟ ಸುಮಾರು 205 ಮೀಟರ್ ತಲುಪಿದ್ದು, ತಡರಾತ್ರಿಯ ವೇಳೆಗೆ ಅದು 206 ಮೀಟರ್ ಮಟ್ಟವನ್ನು ದಾಟುವ ಭೀತಿಯಿದೆ.

ಮುಂದಿನ 24 ಗಂಟೆಗಳು ಮುಖ್ಯ
ತಜ್ಞರ ಪ್ರಕಾರ, ಮಂಗಳವಾರ (ಆಗಸ್ಟ್ 206) ತಡರಾತ್ರಿಯ ವೇಳೆಗೆ ಯಮುನೆಯ ನೀರಿನ ಮಟ್ಟ 109 ಮೀಟರ್ ದಾಟಬಹುದು. ಇದರ ನಂತರ ಸ್ವಲ್ಪ ಪರಿಹಾರ ಸಿಗುವ ಸಾಧ್ಯತೆಯಿದೆ, ಆದರೆ ಪ್ರಸ್ತುತ ಪರಿಸ್ಥಿತಿ ಅಪಾಯಕಾರಿಯಾಗಿದೆ. ನೀರಿನ ಮಟ್ಟ ಮತ್ತಷ್ಟು ಏರಿ 208 ಮೀಟರ್ ತಲುಪಿದರೆ, ದೆಹಲಿಯಲ್ಲಿ ಮತ್ತೆ ಭೀಕರ ಪ್ರವಾಹದಂತಹ ಪರಿಸ್ಥಿತಿ ಉದ್ಭವಿಸಬಹುದು ಎನ್ನಲಾಗಿದೆ.

ಕಳೆದ 2023 ರಲ್ಲಿ, ಯಮುನಾ ನದಿಯ ಮಟ್ಟ 208 ಮೀಟರ್ ತಲುಪಿದಾಗ, ದೆಹಲಿಯ ಅನೇಕ ಪ್ರದೇಶಗಳು ಮುಳುಗಿ ಭಾರಿ ಹಾನಿ ಸಂಭವಿಸಿದೆ.ಈ ಬಾರಿಯೂ ನೀರಿನ ಮಟ್ಟ 206 ಮೀಟರ್ ದಾಟಿದರೆ, ಅನೇಕ ತಗ್ಗು ಪ್ರದೇಶಗಳು ಮುಳುಗುತ್ತವೆ. ನಿಗಮ್ ಬೋಧ್ ಘಾಟ್ ಬಳಿಯ ಯಮುನಾ ಬಜಾರ್ ಸೇರಿದಂತೆ ಹಲವು ಪ್ರದೇಶಗಳಿಗೆ ನೀರು ಪ್ರವೇಶಿಸಲು ಪ್ರಾರಂಭಿಸಿದೆ.

24 ಗ್ರಾಮಗಳಲ್ಲಿ ಎಚ್ಚರಿಕೆ
ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ತಗ್ಗು ಪ್ರದೇಶಗಳಲ್ಲಿರುವ ಸುಮಾರು 24 ಹಳ್ಳಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲು ದೋಣಿಗಳು ಮತ್ತು ಡೈವರ್‍ಗಳ ಸಹಾಯವನ್ನು ಪಡೆಯಲಾಗುತ್ತಿದೆ. ದೆಹಲಿ ಸರ್ಕಾರವು ಆಶ್ರಯ ಮನೆಗಳನ್ನು ಸಹ ಸಿದ್ಧಪಡಿಸಿದ್ದು, ಅಲ್ಲಿ ಪೀಡಿತ ಜನರನ್ನು ಸ್ಥಳಾಂತರಿಸಲಾಗುತ್ತಿದೆ.

ಯಮುನಾ ನದಿಯ ದಡದಲ್ಲಿ 25 ಕ್ಕೂ ಹೆಚ್ಚು ದೋಣಿಗಳನ್ನು ನಿಯೋಜಿಸಲಾಗಿದ್ದು, ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮತ್ತು ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ., ಭಯಪಡುವ ಅಗತ್ಯವಿಲ್ಲ, ಆದರೆ ಜಾಗರೂಕರಾಗಿರುವುದು ಬಹಳ ಮುಖ್ಯ ಎಂದು ಆಡಳಿತ ಎಚ್ಚರಿಸಿದೆ.

ದೆಹಲಿ ಸರ್ಕಾರ ಯಮುನಾ ನದಿಯ ದಡದಲ್ಲಿ ವಾಸಿಸುವ ಜನರಿಗೆ . ಪ್ರತಿಯೊಬ್ಬರೂ ತಮ್ಮ ಮಕ್ಕಳು ಮತ್ತು ಜಾನುವಾರುಗಳನ್ನು ನೋಡಿಕೊಳ್ಳಬೇಕು ಮತ್ತು ಸಾಧ್ಯವಾದಷ್ಟು ಬೇಗ ಸುರಕ್ಷಿತ ಸ್ಥಳಗಳಿಗೆ ತೆರಳಲು ಸಲಹೆ ನೀಡಿದೆ.ನೀರಿನ ಮಟ್ಟ ವೇಗವಾಗಿ ಏರುತ್ತಿರುವುದರಿಂದ ಯಮುನಾ ನದಿಯ ದಡದಲ್ಲಿ ನಿಲ್ಲಬೇಡಿ ಎಂದು ಎಚ್ಚರಿಸಿದ್ದಾರೆ.