ಮ.ಮ ಬೆಟ್ಟಕ್ಕೆ ಬಿವೈ ವಿಜಯೇಂದ್ರ ಅಭಿಮಾನಿಗಳು ಪಾದಯಾತ್ರೆ

ಸಂಜೆವಾಣಿ ವಾರ್ತೆ
ಹನೂರು.ಫೆ.21:-
ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಬಿವೈ ವಿಜಯೇಂದ್ರ ಅಭಿಮಾನಿಗಳು ಪಾದಯಾತ್ರೆಯಲ್ಲಿ ಆಗಮಿಸುವಾಗ ಇಂದು ಶುಕ್ರವಾರ ಕಾಮಗೆರೆ ಗ್ರಾಮದ ದಿವಂಗತ ಹೆಚ್. ನಾಗಪ್ಪ ಅವರ ನಿವಾಸದಲ್ಲಿ ಮಜ್ಜಿಗೆ ಹಣ್ಣು ವಿತರಣೆ ಮಾಡಲಾಯಿತು.


ಕಾಮಗೆರೆ ಗ್ರಾಮದ ದಿವಂಗತ ಹೆಚ್ ನಾಗಪ್ಪ ನಿವಾಸದಲ್ಲಿ ಡಾ.ಪ್ರೀತನ್ ನಾಗಪ್ಪ ಅಭಿಮಾನಿಗಳು ಪಾದಯಾತ್ರೆಯಲ್ಲಿ ಬರುವವರಿಗೆ ಮಜ್ಜಿಗೆ ಹಣ್ಣು ವಿತರಣೆ ಮಾಡಿದರು. ಇನ್ನೂರಕ್ಕೂ ಹೆಚ್ಚು ಬಿ.ವೈ ವಿಜಯೇಂದ್ರ ಅಭಿಮಾನಿಗಳು ಪಾದಯಾತ್ರೆಯಲ್ಲಿ ಆಗಮಿಸಿದ್ದರು. ನಂತರ ಹನೂರು ಕಡೆಗೆ ತೆರಳಿದರು.


ಇದೇ ವೇಳೆ ಮಾಜಿ ಶಾಸಕಿ ಪರಿಮಳ ನಾಗಪ್ಪ ಅವರು ಮಾತನಾಡಿ ನಮ್ಮ ಕ್ಷೇತ್ರದ ಪವಾಡ ಪುರುಷ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ದರ್ಶನಕ್ಕೆ ಪಾದಯಾತ್ರೆಯಲ್ಲಿ ಬರುವುದು ಪುಣ್ಯ. ಇಂತಹ ಒಂದು ಮಹತ್ಕಾರದಲ್ಲಿ ಸನ್ಮಾನ್ಯ ಬಿಎಸ್ ಯಡಿಯೂರಪ್ಪ ಅವರ ಸುಪುತ್ರರಾದ ಬಿ.ವೈ ವಿಜಯೇಂದ್ರ ಅವರ ಅಭಿಮಾನಿಗಳು ಇಂದು ಪಾದಯಾತ್ರೆಯಲ್ಲಿ ಆಗಮಿಸಿದ್ದಾರೆ.


ಮಲೆ ಮಹದೇಶ್ವರ ಬೆಟ್ಟದ ಕಡೆಗೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದಾರೆ ಅವರಿಗೆ ಶ್ರೀ ಸ್ವಾಮಿಯು ಹೆಚ್ಚಿನ ಶಕ್ತಿ ಆರೋಗ್ಯವನ್ನು ನೀಡಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕೆ.ಆರ್.ಡಿ.ಎಲ್ ಮಾಜಿ ಅಧ್ಯಕ್ಷ ರುದ್ರೇಶ್, ಬೆಂಗಳೂರು ಮಾಲ್ ಜಿಲ್ಲಾ ಪಂಚಾಯತಿ ಅಧ್ಯಕ್ಷರು ಮರಿಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಕನಕಪುರ ಜಗದೀಶ್, ವಿಜಯ ಸೇನೆ ರಾಜ್ಯಾಧ್ಯಕ್ಷ ದೀಪಕ್, ಮಹೇಶ್, ಗ್ರಾಮ ಪಂ. ಮಾಜಿ ಸದಸ್ಯ ಶಿವಕುಮಾರ್, ವೀರಶೈವ ಮಹಾಸಭಾ ನಿರ್ದೇಶಕ ಕಿರಣ್ ಕುಮಾರ್, ಹನೂರು ಮಂಡಲ ಮಾಧ್ಯಮ ಸಂಚಾಲಕ ಕೆ.ಬಿ ಮಧು, ಪವನ್, ಚೇತನ್ ಸೇರಿದಂತೆ ಇನ್ನಿತರರು ಇದ್ದರು.