ಮೋದಿ -ಟ್ರಂಪ್ ಸದಾಕಾಲಅತ್ಯುತ್ತಮ ಸ್ನೇಹಿತರು

ನವದೆಹಲಿ,ಸೆ,೭- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸದಾ ಕಾಲ ಅತ್ಯುತ್ತಮ ಸ್ನೇಹಿತರು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ಹೇಳಿದ್ದಾರೆ.ಡೊನಾಲ್ಡ್ ಟ್ರಂಪ್ ಟವರ ಭಾವನೆಗಳನ್ನು ಗೌರವಿಸುವ ಮತ್ತು ಮೆಚ್ಚಿಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಯ ವ್ಯರ್ಥ ಮಾಡಲಿಲ್ಲ, ಇಬ್ಬರ ಸಂಬಂಧ ಚೆನ್ನಾಗಿದೆ, ಮುಂದೆಯೂ ಚೆನ್ನಾಗಿ ಇರಲಿದೆ ಎಂದು ತಿಳಿಸಿದ್ದಾರೆ


ಅಮೆರಿಕದೊಂದಿಗೆ ಭಾರತ ಉತ್ತಮ ಸಂಬಂಧ ಹೊಂದಿದೆ. ಮುಂದೆಯೂ ಉತ್ತಮ ಸಂಬಂಧ ಹೊಂದಲಿದೆ. ಹೀಗಿರುವಾಗ ಭಾರತ ಮತ್ತು ಅಮೇರಿಕಾದ ಸಂಬಂಧ ಬಗ್ಗೆ ಹೆಚ್ಚಿಗೆ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.ತಿಂಗಳಾಂತ್ಯದಲ್ಲಿ ೮೦ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಭಾಗವಹಿಸಲು ನ್ಯೂಯಾರ್ಕ್ ತಾವು ತೆರಳುತ್ತಿರುವುದಾಗಿ ಹೇಳಿದ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅನೇಕ ವಿಷಯಗಳನ್ನು ಪ್ರಸ್ತಾಪ ಮಾಡಲಾಗುವುದು ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮನಸ್ಸು ಮಾಡಿದರೆ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಬಹುದು, ಎಲ್ಲವೂ ಪ್ರಧಾನಿ ಅವರ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.


ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಇತ್ತೀಚಿನ ಹೇಳಿಕೆಗಳಿಗೆ ಬದ್ಧರಾಗುತ್ತಾರೆ ಎಂದು ಭಾರತ ಆಶಿಸುತ್ತದೆ, ಭಾರತ-ಪಾಕಿಸ್ತಾನ ಕದನ ವಿರಾಮದ ಬಗ್ಗೆ ಡೊನಾಲ್ಡ್ ಟ್ರಂಪ್ ತಮ್ಮ ಕದನ ವಿರಾಮ ಹೇಳಿಕೆ ಹಿಂತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಭಾರತದ ವಿದೇಶಾಂಗ ನೀತಿ ಮತ್ತು ಜಾಗತಿಕ ಪುನರ್ರಚನೆಯಲ್ಲಿ ಸಂಭವನೀಯ ಬದಲಾವಣೆಯ ಬಗ್ಗೆ, ವಿಶೇಷವಾಗಿ ಎಸ್ ಸಿಓ ಶೃಂಗಸಭೆಯ ನಂತರ, ಭಾರತ ಅಮೆರಿಕದೊಂದಿಗಿನ ತನ್ನ ಕಾರ್ಯತಂತ್ರದ ಪಾಲುದಾರಿಕೆ ಗೌರವಿಸುತ್ತದೆ ಎನ್ನಲಾಗಿದೆ.


ಅಮೇರಿಕಾ ಅಧ್ಯಕ್ಷ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಗಳು ಭಾರತದ ವಿರುದ್ಧ ವ್ಯಾಪಾರ ಮಾತ್ರವಲ್ಲದೆ ಹಲವಾರು ವಿಷಯಗಳ ಬಗ್ಗೆ ಅಪ್ರಚೋದಿತ ಮತ್ತು ನಿರಂತರ ಟೀಕೆಗಳ ಬಗ್ಗೆ ಸರ್ಕಾರ ಎಚ್ಚರದಿಂದಿದೆ, ಇದು ಭಾರತ ಮತ್ತು ಅಮೇರಿಕಾದ ನಡುವೆ ಸಂಬಂಧ ಹದಗೆಡದಂತೆ ಎಚ್ಚರಿಕೆ ವಹಿಸಲಾಗಿದೆ ಎಂದೂ ಹೇಳಲಾಗಿದೆ.