
ಸಂಜೆವಾಣಿ ವಾರ್ತೆ
ಬಳ್ಳಾರಿ, ಅ.19: ವಿಶ್ವ ವಿಖ್ಯಾತ ಮೈಸೂರು ದಸರಾ 2026 ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೈಸೂರಿನ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಬಳ್ಳಾರಿ ಸಂಗನಕಲ್ಲು ಗ್ರಾಮದ ಶ್ರೀಮತಿ ಉಷಾ ಸಂಗನಕಲ್ಲು ಇವರಿಂದ ಭಾನುವಾರ ಸಂಜೆ 8:30 ರಿಂದ 10 ಗಂಟೆವರೆಗೆ ಸುಗಮ ಸಂಗೀತದ ಮೂಲಕ ಸುಜುಗಾದ ಸೂಜಿಮಲ್ಲಿಗೆ, ಆರು ಮಲೆ ಮಾಯಕಾರ, ಮಹದೇಶ್ವರನ ಹಾಡು, ಶಿಶುನಾಳ ಶರೀಫರ ಭೋದವೊಂದೇ ಬ್ರಹ್ಮನಾದವೊಂದೇ, ಕಡಕೋಳ ಮಡಿವಾಳಪ್ಪನವರ ಜಲ್ದಿ ನೋಡಿಕೊಳ್ಳೋ ತಮ್ಮ ಬಂದುದ್ಯಾವಲ್ಲಿ, ಬಿಚ್ಚು ನುಡಿಗೆ ಮೆಚ್ಚರಯ್ಯ ಎಂಬ ಸಾಹಿತ್ಯದ ಹಾಡುಗಳು ನೆರೆದ ಪ್ರೇಕ್ಷಕರ ಮನಸುಲುವಂತೆ ಮಾಡಿತು ಸಹಕಲಾವಿದರಾದ ಹನುಮಯ್ಯ ಮರಿಯಮ್ಮನಹಳ್ಳಿ ಇವರಿಂದ ಶಿಶುನಾಳ ಶರೀಫರ ತರವಲ್ಲ ತಗಿ ನಿನ್ನ, ಒಳಿತು ಮಾಡು ಮನುಷ್ಯ, ಎಲ್ಲೋ ಜೋಗಪ್ಪ ನಿನ್ನ ಅರಮನೆ, ನಿಮ್ಮ ಶರಣರಿಗೆ ಶರಣಂಬುದು ಕರುಣಿಸು ಕೂಡಲ ಸಂಗಮ ದೇವ ವಚನ ಹಾಡುಗಳು ನೆರೆದಿದ್ದ ಜನ ಸಮೂಹವನ್ನು ಮಂತ್ರಮುಗ್ಧರನ್ನಾಗಿಸಿದವು. ಹಾರ್ಮೋನಿಯಂ ವಾದ್ಯ ಕಲಾವಿದರಾಗಿ ಹುಸೇನಪ್ಪ ಅರಳಿಗನೂರು, ಕ್ಯಾಷಿಯೋ ವಿನೋದ್ ಕುಮಾರ್ ಕುಡುದರಹಾಳು, ತಬಲಾ ಸುರೇಶ್ ಬೆಂಗಳೂರು ಇವರು ಸಾತ್ ನೀಡಿದರು ಸುಗಮ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟ ಶ್ರೀಮತಿ ಉಷಾ ಸಂಗನಕಲ್ಲು ತಂಡದವರಿಗೆ ವೇದಿಕೆಯ ನಿರ್ವಹಣ ಅಧಿಕಾರಿಗಳು ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಿದರು.





















