
ಸಂಜೆವಾಣಿ ನ್ಯೂಸ್
ಮೈಸೂರು:ಫೆ.06:- ಆದಾಯಕ್ಕಿಂತ ಹೆಚ್ಚು ಹಣ ಸಂಪಾದಿಸಿದ್ದಾರೆ ಎಂಬ ಆರೋಪದ ಮೇರೆಗೆ ಮೈಸೂರು ಲೋಕಾಯುಕ್ತ ಪೆÇಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಏಕಕಾಲದಲ್ಲಿ ಇಬ್ಬರು ಅಧಿಕಾರಿಗಳ ಮನೆ ಹಾಗೂ ಕಚೇರಿ ಸೇರಿದಂತೆ ಏಳು ಕಡೆ ದಾಳಿ ನಡೆಸಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಹಾಗೂ ಟಿ.ನರಸೀಪುರ ಪುರಸಭೆ ಜೆಇ ಆಗಿರುವ ಕೆ.ಆರ್.ಚಂದ್ರಶೇಖರ್ ಅವರಿಗೆ ಸೇರಿದ ಮೈಸೂರಿನ ವಿಜಯನಗರದ ನಿವಾಸ, ಕೆಜಿ.ಕೊಪ್ಪಲು ನಿವಾಸ ಹಾಗೂ ಟಿ.ನರಸೀಪುರ ಕಚೇರಿ ನಾಲ್ಕು ಕಡೆಗಳಲ್ಲಿಯೂ ಎಕಕಾಲದಲ್ಲಿ ಶೋಧ ನಡೆಸಿದರು. ಜೂನಿಯರ್ ಎಂಜಿನಿಯರ್ ಕೆ.ಆರ್.ಚಂದ್ರಶೇಖರ್ ಗೆ ಸೇರಿದ ನಾಲ್ಕು ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದು, ಅಂದಾಜು 1,37,00,000ರೂ. ಸ್ಥಿರ ಆಸ್ತಿ, 55ಲಕ್ಷ ಮೌಲ್ಯದ 2 ನಿವೇಶನ, 82ಲಕ್ಷ ಮೌಲ್ಯದ 1ಮನೆ, ಕೃಷಿ ಭೂಮಿ, ಅಂದಾಜು 2,75,10,300ರೂ. ಚಲಿಸಬಲ್ಲ ಆಸ್ತಿ ಇರುವುದಾಗಿ ದಾಖಲೆ ನೀಡಿದ್ದಾರೆ. ಇನ್ನೂ ಶೋಧದ ವೇಳೆಯಲ್ಲಿ 62,00,400 ರೂ. ನಗದು, 2.02.39,900 ಆಭರಣ, 10,70,000 ಮೌಲ್ಯದ ವಾಹನ ಸೇರಿ ಬರೋಬ್ಬರಿ 2ಕೋಟಿ 54ಲಕ್ಷ 10ಸಾವಿರ 300 ರೂ. ಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.
ಎಜಿಒ ಅಲ್ತಾಫ್ ಹುಸೇನ್ ಜಕಾರ್ತಿ ಎರಡು ಮನೆ ಹಾಗೂ ಕಚೇರಿಯಲ್ಲಿ ಹುಡುಕಾಟ ನಡೆಸಿದ್ದು, 2,34,10,000ರೂ. ಅಂದಾಜು ಸ್ಥಿರ ಆಸ್ತಿ, 1,03,10,000 ಮೌಲ್ಯದ 4ನಾಲ್ಕು ನಿವೇಶನ, 1,31,00,000 ಮೌಲ್ಯದ ಮನೆ ಸೇರಿ ಒಟ್ಟು ಚರ ಆಸ್ತಿಗಳ ಅಂದಾಜು ಒಟ್ಟು ಮೌಲ್ಯ 1,10,02,829 ರೂ. ಎಂದು ಖಚಿತಪಡಿಸಿದ್ದಾರೆ. ಶೋಧ ಕಾರ್ಯದ ವೇಳೆ 1,45,340 ನಗದು ವಶ ಪಡಿಸಿಕೊಂಡಿದ್ದು, 75,46,800 ಮೌಲ್ಯದ ಆಭರಣ, 19,55,000 ಮೌಲ್ಯದ ವಾಹನ ಹಾಗೂ ಇತರೆ 13,55,689 ಸೇರಿ ಒಟ್ಟು 2 ಕೋಟಿ 41ಲಕ್ಷ 77ಸಾವಿರ 849 ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್ಪಿ ಉದ್ದೇಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಈ ದಾಳಿ ನಡೆಸಿದೆ.






























