ಮೇ 25 ರಂದು ಮಾಯ ಮದ ಮರ್ಧನ ಅಲ್ಲಮಪ್ರಭು ನಾಟಕ  ಪ್ರದರ್ಶನ


ಹೊಸಪೇಟೆ (ವಿಜಯನಗರ) ಮೇ23: ರಂಗ ಸಂಗಮ ಕಲೆ ಮತ್ತು ಸಾಂಸ್ಕೃತಿಕ ಸಂಘ ಇದೆ 25 ರಂದು “ಮಾಯ ಮದ ಮರ್ಧನ ಅಲ್ಲಮಫ್ರಭು”  ನಾಟಕ ಪ್ರದರ್ಶನ ಹೊಸಪೇಟೆಯ ಹಮ್ಮಿಕೊಂದಿದೆ ಎಂದು  ಸಂಘದ ಅಧ್ಯಕ್ಷೆ ರೇಷ್ಮಾ ಸಿ.ಅಳವಂಡಿ ಹೇಳಿದರು.
ಹೊಸಪೇಟೆಯ ಪತ್ರಿಕಾ ಭವನದಲ್ಲಿ ಶುಕ್ರವಾರ  ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೊಸಪೇಟೆಯ ಪಂಪಕಲಾ ಮಂದಿರದಲ್ಲಿ ಅಂದು ಸಂಜೆ 6.30ಕ್ಕೆ ಇಲಕಲ್ ತಾಲೂಕು ರಂಗ ಸಂಗಮದ 17ಕಲಾವಿದರು ದಿವಂಗತ ಫಕೀರಪ್ಪ ವಿರಚಿತ ನಾಟಕವನ್ನು ಪ್ರದರ್ಶಿಸಲಿದ್ದಾರೆ. ರಂಗಭೂಮಿ ಇಂದು ವಿನಾಶದ ಅಂಚಿಗೆ ತಲುಪಿದ್ದು ಅದನ್ನು ಪ್ರೋತ್ಸಾಹಿಸಲು ನಮ್ಮ ಸಂಘ ರಾಜ್ಯದ ವಿವಿಧ ಪ್ರದೇಶದಲ್ಲಿ  ಪ್ರದರ್ಶನ ನೀಡಿದೆ. ಸದ್ಯ ಇದೆ 25ರಂದು  ಹೊಸಪೇಟೆಯಲ್ಲಿ ಪ್ರದರ್ಶನ ಏರ್ಪಡಿಸಿದ್ದು  ಕಲಾಪ್ರೇಮಿಗಳು ಪ್ರೋತ್ಸಾಹಿಸಲು ಕೋರಿದರು.
ಸುದ್ಧಿಗೋಷ್ಠಿಯಲ್ಲಿ ಲಕ್ಷ್ಮೀ, ಡಾ.ಮಂಟೂರುಮಠ, ಜಯಶ್ರೀ ಪಾಟೀಲ್, ಉಮಾರಾಣಿ ಹಾಜರಿದ್ದರು.