
ಸಂಜೆವಾಣಿ ನ್ಯೂಸ್
ಮೈಸೂರು: ಜು.03:- ನಗರದ ಹೊರವಲಯದ ರಮ್ಮನಹಳ್ಳಿ, ವಸಂತನಗರ ಮೊದಲಾದ ಬಡಾವಣೆಗಳಿಗೆ ಕುಡಿಯುವ ನೀರು ಒದಗಿಸಲು ಮೇಳಾಪುರ ಯೋಜನೆಯನ್ನು ತ್ವರಿತವಾಗಿ ಮುಗಿಸಬೇಕು. ಕೈಬಿಟ್ಟು ಹೋಗಿರುವ ಬಡಾವಣೆಗಳಿಗೆ ನೀರು ಒದಗಿಸಲು ಮತ್ತೊಂದು ಡಿಪಿಆರ್ ತಯಾರಿಸುವಂತೆ ಶಾಸಕ ಜಿ.ಟಿ.ದೇವೇಗೌಡ ಸೂಚಿಸಿದರು.
ನಗರದ ನಗರಪಾಲಿಕೆ ವಲಯ ಕಚೇರಿ ಮೂರರ ಸಭಾಂಗಣದಲ್ಲಿ ಬುಧವಾರ ನಗರಪಾಲಿಕೆ, ಮುಡಾ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳ ಸಭೆಯಲ್ಲಿ ಹೊರ ವಲಯದ ಬಡಾವಣೆಗಳಿಗೆ ನೀರು ಒದಗಿಸುವ ಕುರಿತು ವಿಸ್ತøತವಾದ ಚರ್ಚೆಯ ಬಳಿಕ ಕೆಲವು ಸೂಚನೆಗಳನ್ನು ನೀಡಿದರು. ಮೈಸೂರು ನಗರದ ಪಾಲಿಕೆ, ಸ್ಥಳೀಯ ಸಂಸ್ಥೆಗಳು, ಎಂಡಿಎ ಬಡಾವಣೆಗಳು, ಖಾಸಗಿ ಬಡಾವಣೆಗಳಿಗೆ ಸಮರ್ಪಕ ನೀರು ಒದಗಿಸಬೇಕಿದೆ. ನಾವು ಮೊದಲು ನೀರು ಕೊಡಬೇಕು. ಮೇಳಾಪುರದಿಂದ ನಗರಕ್ಕೆ ಪೂರೈಕೆಯಾಗುತ್ತಿರುವ ನೀರಿನಲ್ಲಿ ಕೆಲವು ಪ್ರದೇಶಗಳಿಗೆ ಕೊಡಬೇಕು. ಅಮೃತ್-2 ಯೋಜನೆಯಡಿ ಕೈಗತ್ತಿಕೊಂಡಿರುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಹೇಳಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಆಸಿಫ್ ಮಾತನಾಡಿ, ಮೇಳಾಪುರದಿಂದ ಜರ್ಮನ್ ಪ್ರೆಸ್‍ಗೆ ನೀರು ಪೂರೈಕೆಯಾಗುತ್ತಿದೆ. ಅಲ್ಲಿಂದ ರಮ್ಮನಹಳ್ಳಿ, ವಸಂತನಗರ, ಪೆÇಲೀಸ್ ಲೇಔಟ್, ನಾಡಹನಹಳ್ಳಿ, ಕೆಬಿಲ್ ಲೇಔಟ್‍ಗೆ ನೀರು ಕೊಡಬೇಕಿದೆ. ಈಗ ರಮ್ಮನಹಳ್ಳಿಯಲ್ಲಿ ಅಳವಡಿಸಿರುವ ಟ್ಯಾಂಕ್‍ಗೆ ಪೈಪ್‍ಲೈನ್ ಕಾಮಗಾರಿ ಆಗಿದೆ. ಸಣ್ಣಪುಟ್ಟ ಕಾಮಗಾರಿ ಮುಗಿದರೆ ನೀರು ಒದಗಿಸಬಹುದು ಎಂದರು.
ಅದೇ ರೀತಿ ಬೇರೆ ಬೇರೆ ಭಾಗಗಳಿಗೆ ನೀರು ಕೊಡಲು ಎಂಡಿಎ ಮತ್ತು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಜಂಟಿ ಡಿಪಿಆರ್ ತಯಾರಿಸಲಾಗುವುದು. ಡಿಪಿಆರ್‍ನ್ನು ಎಂಡಿಎಗೆ ಕೊಡಲಾಗುವುದು. ಅದಕ್ಕೆ ಒಪ್ಪಿಗೆ ದೊರೆತರೆ ಕೆಲಸ ಶುರು ಮಾಡಬಹುದು ಎಂದರು.
ರಮ್ಮನಹಳ್ಳಿ ಮೊದಲಾದ ಬಡಾವಣೆಗಳಿಗೆ ನೀರು ಪೂರೈಕೆಗೆ ಐದು ಎಂಎಲ್‍ಡಿ ನೀರನ್ನು ಹರಿಸಲು ಯೋಜನೆಯಲ್ಲಿ ಸೇರಿಸಲಾಗಿದೆ. ಅಮೃತ್-2 ಯೋಜನೆಯಡಿ ಕೆಲವು ಕಾಮಗಾರಿ ನಡೆಯಲಿದೆ. ಇದರಲ್ಲಿ ಗಳಿಗರಹುಂಡಿ, ವಸಂತನಗರ, ಸರ್ದಾರ್ ವಲ್ಲಭಬಾಯ್ ಪಟೇಲ್ ನಗರ, ಪೆÇಲೀಸ್ ಲೇಔಟ್‍ಗೆ ಹರಿಸಬಹುದು ಎಂದು ವಿವರಿಸಿದರು.
34 ಕೋಟಿ ರೂ.ವೆಚ್ಚದಲ್ಲಿ ಮತ್ತೊಂದು ಯೋಜನೆ ನಡೆಯುತ್ತಿದೆ. ಇದರಲ್ಲಿ ಆರು ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ಹಂಚ್ಯಾ, ಕಾಳಿಸಿದ್ದನಹುಂಡಿ ಸೇರಿ ಇನ್ನಿತರ ಕಡೆಗಳಿಗೆ ಕೊಡಲಾಗುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಜಿ.ಟಿ.ದೇವೇಗೌಡ, ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ರಮ್ಮನಹಳ್ಳಿಯಿಂದ ಬೇರೆ ಬೇರೆ ಪ್ರದೇಶಗಳಿಗೆ ನೀರು ತಲುಪಲು ಡಿಪಿಆರ್ ತಯಾರಿಸಿ ಸಲ್ಲಿಸಿದರೆ ಎಂಡಿಎ ಸಭೆಯಲ್ಲಿ ಚರ್ಚಿಸಿ ಅಗತ್ಯವಿರುವ ಅನುಮೋದನೆ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಕಬಿನಿ ನದಿ ಮೂಲದಿಂದ ಶ್ರೀರಾಂಪುರ, ಆರ್‍ಟಿನಗರ ಮತ್ತಿತರ ಬಡಾವಣೆಗಳಿಗೆ ನೀರು ಕೊಡಲಾಗುತ್ತಿದೆ. ಹೆಚ್ಚುವರಿ 60 ಎಂಎಲ್‍ಡಿ ನೀರು ತರುವ ಕಾಮಗಾರಿಗೆ 150 ಕೋಟಿ ರೂ. ಬಿಡುಗಡೆ ಆಗಬೇಕಿದೆ. ತಕ್ಷಣವೇ ಕೊಡಿಸಬೇಕು ಎಂದು ಅಧಿಕಾರಿಗಳು ಶಾಸಕರಲ್ಲಿ ಮನವಿ ಮಾಡಿದರು.
ಇದನ್ನು ಪರಿಗಣಿಸಿದ ಶಾಸಕರು, ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುವುದು. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ತಕ್ಷಣವೇ ಅನುದಾನ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ನುಡಿದರು.
ಹಳೇ ಉಂಡುವಾಡಿ ಯೋಜನೆ ಕಾಮಗಾರಿ ನಡೆಯುತ್ತಿದೆ. ಜಲಜೀವನ್ ಮಿಷನ್‍ನಿಂದ ಕೈಗೆತ್ತಿಕೊಳ್ಳುವ ನೀರಿನ ಯೋಜನೆಗಳಿಗೂ ಸ್ಥಳಾವಕಾಶ ಕೊಡುವಂತೆ ಮನವಿ ಬಂದಿದೆ. ಈ ಬಗ್ಗೆ ಪತ್ರ ವ್ಯವಹಾರ ನಡೆಸಲಾಗುತ್ತಿದೆ. ಜೆಜೆಎಂನಿಂದಲೂ ದೇವೇಗೌಡ ಸರ್ಕಲ್ ಬಳಿ ಟ್ಯಾಂಕ್ ನಿರ್ಮಾಣ ಮಾಡಿ 32 ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಎಂಡಿಎ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿಗಳಾದದ ಮಹೇಶ್,ನಾಗೇಂದ್ರ ಮತ್ತಿತರರು ಹಾಜರಿದ್ದರು.