ಸುಳ್ಯ:ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಹಾಗೂ ಗೊಂಚಲಿನ ವಾರ್ಷಿಕ ಮಹಾಸಭೆಯು ಅಜ್ಜಾವರ ಮೇನಾಲದ ಡಾ. ಬಿ .ಆರ್ ಅಂಬೇಡ್ಕರ್ ಸಭಾಭವನದಲ್ಲಿ ಮಂಗಳವಾರ ನಡೆಯಿತು.
ಜಿಲ್ಲಾ ಪಂಚಾಯತ್ ಮಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಸೇವಾ ಯೋಜನೆ ಸುಳ್ಯ, ಅಜ್ಜಾವರ ಗ್ರಾಮ ಪಂಚಾಯತ್, ಅಜ್ಜಾವರದ ಶ್ರೀನಿಧಿ ಸ್ತ್ರೀಶಕ್ತಿ ಗೊಂಚಲು ಇದರ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಶಿಶು ಅಭಿವೃದ್ಧಿ ಇಲಾಖೆಯ ವಲಯ ಮೇಲ್ವಿಚಾರಕಿ ಜೆ.ಡಿ ವಿಜಯ ಉದ್ಘಾಟಿಸಿದರು. ಶ್ರೀನಿಧಿ ಗೊಂಚಲಿನ ಅಧ್ಯಕ್ಷೆ ವಿಶಾಲ ಸೀತಾರಾಮ ಕರ್ಲಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಚಂದ್ರಕಲಾ ಆರೋಗ್ಯದ ಕುರಿತು ಮಾಹಿತಿ ನೀಡಿದರು.
ಸಮಾರಂಭದಲ್ಲಿ ಅಜ್ಜಾವರ ಅಂಗನವಾಡಿ ಕಾರ್ಯಕರ್ತೆ ಸವಿತಾ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿ ಬಾಲಕೃಷ್ಣ ಮೇನಾಲ, ಶ್ರೀನಿಧಿ ಸ್ತ್ರೀಶಕ್ತಿ ಗೋಚಲಿನ ಉಪಾಧ್ಯಕ್ಷೆ ತಿಲಕ ಹರೀಶ್ ಕುತ್ಯಾಡಿ, ಕಾರ್ಯದರ್ಶಿ ವಾರಿಜಾ ತೋರಣಗಂಡಿ, ಪ್ರತಿಭಾ ಭಾಸ್ಕರ ದೊಡ್ಡೇರಿ, ಲತಾ ಪ್ರಸಾದ್ ಬೇಲ್ಯ, ಸುಜಾತ ವಸಂತ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುಂಗಾರು ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಜಾಥಾಕ್ಕೆ ಚಾಲನೆ ನೀಡಲಾಯಿತು. ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರವೀಂದ್ರ ಗೌಡ ಪಾಟೀಲ, ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ದಿನಕರ ಅಡಿಗ, ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯ ನಿರ್ದೇಶಕಿ ಡಾ. ಜ್ಯೋತಿ, ತಾಲೂಕು ಸಹಾಯಕ ತೋಟಗಾರಿಕಾ ನಿರ್ದೇಶಕಿ ಸುಹಾನ ಕೃಷಿ ಕಾರ್ಯಾಗಾರ ನಡೆಸಿಕೊಟ್ಟರು.
ಈ ವೇಳೆ ಶ್ರೀನಿಧಿ ಸ್ತ್ರೀಶಕ್ತಿ ಗೊಂಚಲು ಅಜ್ಜಾವರದ ನೂತನ ಅಧ್ಯಕ್ಷರಾಗಿ ಗೀತಾ ಪ್ರಸಾದ್ ಅಡ್ಪಂಗಾಯ, ಕಾರ್ಯದರ್ಶಿಯಾಗಿ ಪದ್ಮಿನಿ ಲೋಕೇಶ್ ದೊಡ್ಡೇರಿ, ಕೋಶಾಧಿಕಾರಿಯಾಗಿ ದಿವ್ಯ ಉದ್ದಂತ್ತಡ್ಕ, ಉಪಾಧ್ಯಕ್ಷರಾಗಿ ಯಶೋಧ ಮೇನಾಲ, ಜತೆ ಕಾರ್ಯದರ್ಶಿಯಾಗಿ ವೇದಾವತಿ ಮುಳ್ಯ ರವರನ್ನು ಆಯ್ಕೆ ಮಾಡಲಾಯಿತು. ಸುಳ್ಯ ಬ್ಲಾಕ್ ಸೊಸೈಟಿ ಸದಸ್ಯೆಯಾಗಿ ವಿಶಾಲ ಸೀತಾರಾಮ ಆಯ್ಕೆಯಾದರು.
ದೊಡ್ಡೇರಿ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಪ್ರಾರ್ಥಿಸಿದರು. ಶೋಭಾ ಮೇನಾಲ ಸ್ವಾಗತಿಸಿ, ಗೀತಾ ಪ್ರಸಾದ್ ವಂದಿಸಿದರು. ಸಾವಿತ್ರಿ ಜಯನ್ ಅಜ್ಜಾವರ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಸಖಿ ಪೂರ್ಣಿಮಾ ಸಹಕರಿಸಿದರು. ಸ್ತ್ರೀ ಶಕ್ತಿ ಗೊಂಚಲಿನ ಸದಸ್ಯರು ಭಾಗವಹಿಸಿದರು.