
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ. 15 :- ತಾಲೂಕಿನ ಪಾಲಯ್ಯನಕೋಟೆಯಲ್ಲಿನ ಮೃತ ಬಾಣಂತಿ ಮತ್ತು ಮನೆ ಸೇರಿದಂತೆ ತಾ ಪಂ ಮಾಜಿ ಸದಸ್ಯರೊಬ್ಬರು ನಿಧನರಾಗಿದ್ದು ಅವರ ಮನೆಗೂ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ನೀಡಿ ಆತ್ಮಸ್ಥೈರ್ಯ ತುಂಬಿದರು.
ತಾಲೂಕಿನ ಪಾಲಯ್ಯನಕೋಟೆ ಗ್ರಾಮದ ಪವಿತ್ರ ಎನ್ನುವ ಬಾಣಂತಿ ಮಹಿಳೆ ಆಸ್ಪತ್ರೆ ಯೊಂದರಲ್ಲಿ ನಿಧನರಾಗಿದ್ದರು ಅವರ ಮನೆಗೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಭೇಟಿ ನೀಡಿದರು. ಮೃತ ಪವಿತ್ರಳ ಫೋಟೋ ತೋರಿಸುತ್ತ ತಿಂಗಳ ಮಗುವನ್ನು ಬಿಟ್ಟು ದೇವರ ಪಾದ ಸೇರಿದ್ದಾಳೆ ಎಂದು ಹೆಂಡತಿ ಬಾಣಂತಿ ಪವಿತ್ರಳನ್ನು ನೆನೆದು ಶಾಸಕರೆದುರು ಪತಿ ದುರುಗಪ್ಪ ಕಂಬನಿ ಮಿಡಿದನು ಆತನಿಗೆ ಸಾಂತ್ವನ ಹೇಳಿದ ಶಾಸಕರು ತಿಂಗಳ ಮಗುವಿನ ಆರೋಗ್ಯ ವಿಚಾರಿಸಿದರು ಅಲ್ಲದೆ ಮೃತ ಬಾಣಂತಿ ಪವಿತ್ರಳ ದಾಖಲಾತಿ ಗಳನ್ನು ಶಾಸಕರು ಪಡೆದುಕೊಂಡು ವೈಯಕ್ತಿಕ ಪರಿಹಾರ ನೀಡುವ ಜೊತೆಗೆ ಸರ್ಕಾರದಿಂದ ಪರಿಹಾರ ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದು ಮೃತ ಪವಿತ್ರ ಕುಟುಂಬಕ್ಕೆ ಭರವಸೆ ನೀಡಿದರು ಮಗುವಿನ ಆರೋಗ್ಯಹಾಗೂ ಹಾರೈಕೆ ಕಡೆ ಗಮನಹರಿಸುವಂತೆ ಕುಟುಂಬಸ್ಥರಿಗೆ ತಿಳಿಹೇಳಿದರು.
ಅದೇ ಗ್ರಾಮದ ಮುಖಂಡ ಕಲ್ಲೇಶ ಅವರ ತಾಯಿ
ಶರಣಮ್ಮ ನಿಧನರಾಗಿದ್ದು ಅವರ ಕುಟುಂಬ ಕ್ಕೂ ಸಾಂತ್ವನ ತಿಳಿಸಿದರು. ನಂತರವಾಗಿ ತಾಲೂಕಿನ ಸೂಲದಹಳ್ಳಿ ಗ್ರಾಮದ ಹಿರಿಯ ಮುಖಂಡ ಪಾತರ ಸಿದ್ದಪ್ಪ ಅವರ ಸಂಬಂದಿ ಹಾಗೂ ತಾ ಪಂ ಮಾಜಿ ಸದಸ್ಯ ಹಾಲಸ್ವಾಮಿ ನಿಧನರಾಗಿದ್ದರು ಅವರ ಮನೆಗೂ ಭೇಟಿ ನೀಡಿದ ಶಾಸಕರು ಕುಟುಂಬ ದವರೊಂದಿಗೆ ಮಾತನಾಡುತ್ತ ಮೃತರಿಗೆ ಆತ್ಮಶಾಂತಿ ಸಿಗಲಿ ಎಂದು ಹೇಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಆಯಾ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
