
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.3: ಓರ್ವ ಕಾಂಗ್ರೆಸ್ ಕಾರ್ಯಕರ್ತನ ಸಾವಿನ ಹಿನ್ನಲೆಯಲ್ಲಿ ಸೂತಕದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಬೇಡ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಸಲಹೆಯಂತೆ ತಾತ್ಕಾಲಿಕವಾಗಿ ಮುಂದೂಡಿದೆ ಎಂದು ಮಾಜಿ ಸಚಿವ, ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹೇಳಿದ್ದಾರೆ.
ನಗರದಲ್ಲಿ ನಿನ್ನೆ ಸಂಜೆ ಸುದ್ದಿಗೋಷ್ಟಿ ನಡೆಸಿದ ಅವರು. ಏನೇ ಆಗಲಿ ಕಾರ್ಯಕ್ರಮ ಮಾಡಲೇ ಬೇಕು. ಬಿಟ್ಟರೆ ಸಮಾಜಕ್ಕೆ ಹಿನ್ನಡೆಯಾಗುತ್ತೆ ಅದಕ್ಕಾಗಿ ಮಾಡಬೇಕು ಎಂದಿದ್ದರು. ಅವರ ಮನವೊಲಿಸಲು ಸಿಎಂ.ಡಿಸಿಎಂ, ಉಸ್ತುವಾರಿ ಸಚಿವರ ಸಲಹೆಯಂತೆ ನಾನು ಬಂದು ಭರತ್ ಅವರ ಸಲಹೆಯನ್ನು ತಿಳಿಸಿ ಕಾರ್ಯಕ್ರಮ ಮುಂದೂಡಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಇದಕ್ಕಿಂತ ವಿಜೃಂಭಣೆಯಿಂದ ಮಾಡಲಿದೆ ಅದಕ್ಕೆ ಎಲ್ಲರೂ ಆಗಮಿಸಲಿದ್ದಾರೆಂದರು. ಕಾಂಗ್ರೆಸ್ ಪಕ್ಷ ವಾಲ್ಮೀಕಿ ಪರವಾಗಿದೆ. 15 ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ರಲ್ಲಿ ವಿಜಯಿಯಾಗಿದೆ. ಬ್ಯಾನರ್ ವಿಚಾರದಲ್ಲಿ ಕ್ಷುಲ್ಲಕ ಕಾರಣಕ್ಕೆ ಭರತ್ ರೆಡ್ಡಿ ಮಾಡಿದ ಕೆಲಸ ಸಹಿಸದೇ ನಮ್ಮಕಾಂಗ್ರೆಸ್ ಪಕ್ಷಕ್ಜೆ ಕಪ್ಪು ಚುಕ್ಜೆ ತರುವ ಕೆಲಸ ಮಾಡಿದ್ದಾರೆ ಬಿಜೆಪಿಯವರು.
ಫೈರಿಂಗ್ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಕೆಲಸ ಮಾಡಲಿದೆ. ಮನೆ ಸೇರಿದರೂ ಮತ್ತೆ ಕಾಲು ಕೆರೆದು ಜಗಳಕ್ಕೆ ಬಂದಿದ್ದಾರೆ. ಇದು ಅವಮಾನದ ವಿಷಯವಾಗಿದೆಂದರು,
ಜನಾರ್ಧನರೆಡ್ಡಿ ಅವರು ಸೂರ್ಯನಾರಾಯಣ ರೆಡ್ಡಿ ಅವರ ಬಗ್ಗೆ ಮಾತನಾಡುವುದು ಶೋಭೆ ತರುವ ವಿಷಯ ಅಲ್ಲ. ತಮ್ಮ ಮನೆ ಮುಂದೆ ಬ್ಯಾನರ್ ಹಾಕಲು ಬಿಡದಿರುವುದು ಪ್ರಶ್ನೆಯಾಗಿದೆ. ರಿಪಬ್ಲಿಕ್ ಬಳ್ಳಾರಿ ಮಾಡಲು ಬಿಡಲ್ಲ. ಶಾಂತಿ ಕದಡುವ ಕೆಲಸಕ್ಕೆ ಅವಕಾಶ ನೀಡಲ್ಲ, ಅವರ ದಬ್ಬಾಳಿಕೆಗೆ ಬಗ್ಗಲ್ಲ. ಅವರು ತಮ್ಮ ಮನೆಯ ಮೇಲೆ ಕಲ್ಲು, ಕಾರಪುಡಿ ಇಟ್ಟುಕೊಂಡು ದಾಳಿ ಮಾಡಿದ್ದಾರೆಂದರು.
ವಾಲ್ಮೀಕಿ ಜನ ಕಾಂಗ್ರೆಸ್ ಪಕ್ಷದ ಪರ ಇದ್ದಾರೆ ಎಂದು ಈ ಗಲಾಟೆಗೆ ಬಿಜೆಪಿ ಹುನ್ನಾರ ಮಾಡಿದ್ದಾರೆಂದರು.
ಶಾಸಕ ಗಣೇಶ್ ಮಾತನಾಡಿ, ಬಿಜೆಪಿಯವರು ಏನೇನೂ ತನಿಖೆ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಕಾಲದಲ್ಲಿನ ಹತ್ಯೆಗಳ ಬಗ್ಗೆ ತನಿಖೆ ಆದರೆ ಅವರು ಎಲ್ಲಿ ಇರಬೇಕೋ ಅಲ್ಲಿ ಇರಬೇಕಾಗುತ್ತದೆ. ಮನೆಯಲ್ಲೇ ಮೂರು ಜನ ಸಚಿವರಿದ್ದರೂ ಮಾಡಿದ್ದೇನು ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಟಿಯಲ್ಲಿ ಶಾಸಕರಾದ ಭರತ್ ರೆಡ್ಡಿ, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಮುಖಂಡರಾದ ರಾಂಪ್ರಸಾದ್, ವೆಂಕಟೇಶ್ ಹೆಗಡೆ ಮೊದಲಾದವರು ಇದ್ದರು.

























