Home ಜಿಲ್ಲೆ ಮಂಗಳೂರು ಮುಕ್ಕೂರು ಅಂಗನವಾಡಿ ಕೇಂದ್ರದ ಎರಡನೆ ಹಂತದ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ

ಮುಕ್ಕೂರು ಅಂಗನವಾಡಿ ಕೇಂದ್ರದ ಎರಡನೆ ಹಂತದ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ

ಸುಳ್ಯ:ಕೋಟೆ ಪೌಂಡೇಷನ್ ಪ್ರಾಯೋಜಕತ್ವದಲ್ಲಿ ಮುಕ್ಕೂರು ನೇಸರ ಯುವಕ ಮಂಡಲ, ನೇಸರ ಯುವತಿ ಮಂಡಲ, ನೇಸರ ದಶಪ್ರಣತಿ ಸಮಿತಿ ಇದರ ಸಹಕಾರದೊಂದಿಗೆ ಸುಮಾರು ೧.೫೦ ಲಕ್ಷ ರೂ. ವೆಚ್ಚದಲ್ಲಿ ಮುಕ್ಕೂರು ಅಂಗನವಾಡಿ ಕೇಂದ್ರದ ಎರಡನೆ ಹಂತದ ಅಭಿವೃದ್ಧಿ ಕಾಮಗಾರಿ ಹಾಗೂ ಚಿಣ್ಣರ ಸಾಂಸ್ಕೃತಿಕ ಸಂಭ್ರಮ ನಡೆಯಿತು.
ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದ ಪೆರುವಾಜೆ ವನಶ್ರೀ ಶಶಿಕಲಾ ಬಿ.ಕೆ. ಮಾತನಾಡಿ ತನ್ನ ಬದುಕಿನ ಬಹುತೇಕ ಸಮಯವನ್ನು ಸಮಾಜಕೋಸ್ಕರ ಮೀಸಲಿಟ್ಟ ಕೋಟೆ ವಸಂತ ಕುಮಾರ್ ಅವರು ಸತ್ಯ, ಧರ್ಮ, ನ್ಯಾಯದ ಮಾರ್ಗದಲ್ಲಿ ಮುನ್ನಡೆದವರು. ಅವರ ನೆನಪಿನಲ್ಲಿ ಸ್ಥಾಪಿಸಿದ ಕೋಟೆ ಪೌಂಡೇಷನ್ ಮೂಲಕ ಮುಕ್ಕೂರು ಅಂಗನವಾಡಿಯಲ್ಲಿ ಅನುಷ್ಠಾನಿಸಿದ ಅಭಿವೃದ್ಧಿ ಕೆಲಸ ಅವರ ಸಮಾಜಮುಖಿ ಚಿಂತನೆಗೆ ಸಮರ್ಪಿತ ಕಾರ್ಯ’ ಎಂದು ಹೇಳಿದರು.
ಮುಕ್ಕೂರು ನೇಸರ ಯುವಕ ಮಂಡಲ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಸಮಾರಂಭ ಉದ್ಘಾಟಿಸಿದರು. ನೇಸರ ದಶಪ್ರಣತಿ ಸಮಿತಿ ಅಧ್ಯಕ್ಷ ಡಾ.ನರಸಿಂಹ ಶರ್ಮ ಕಾನಾವು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸುಳ್ಯ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಅಶ್ವಿನಿ ಕೋಡಿಬೈಲು, ನೇಸರ ಯುವಕ ಮಂಡಲದ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಪುಣ್ಚಪ್ಪಾಡಿ ಸ.ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ರಶ್ಮಿತಾ ಜೈನ್, ಬೆಳ್ಳಾರೆ ಜೇಸಿಐ ಅಧ್ಯಕ್ಷೆ ಪೂರ್ಣಿಮಾ ಪೆಲಂಪಾಡಿ, ಬೆಳ್ಳಾರೆ ವಲಯ ಮಹಿಳಾ ಮೇಲ್ವಿಚಾರಕಿ ಉಷಾ ಪ್ರಸಾದ್ ರೈ, ಪೆರುವಾಜೆ ಡಾ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಕ್ಷಿತ್ ಕುಮಾರ್ ಪೆರುವಾಜೆ, ನೇಸರ ದಶಪ್ರಣತಿ ಸಮಿತಿ ಸಂಚಾಲಕ ಕುಂಬ್ರ ದಯಾಕರ ಆಳ್ವ ಶುಭ ಹಾರೈಸಿದರು. ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಾ ಅಧ್ಯಕ್ಷ ಯತೀಶ್ ಭಂಡಾರಿ, ಮುಕ್ಕೂರು ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷೆ ಸುನೀತಾ ಕಂಬುರ್ತೋಡಿ, ಮುಕ್ಕೂರು ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು ಉಪಸ್ಥಿತರಿದ್ದರು.
ಗೌರವಾರ್ಪಣೆ
ಈ ಸಂದರ್ಭದಲ್ಲಿ ಅನುದಾನ ಒದಗಿಸಿದ ಕೋಟೆ ಪೌಂಡೇಷನ್ ಪರವಾಗಿ ಕೆ.ಗಣಪಯ್ಯ ವನಶ್ರಿ, ಅನುದಾನ ತರುವಲ್ಲಿ ಪ್ರಧಾನ ಪಾತ್ರ ವಹಿಸಿದ ನೇಸರ ದಶಪ್ರಣತಿ ಸಮಿತಿ ಸಂಚಾಲಕ ನರಸಿಂಹ ತೇಜಸ್ವಿ ಕಾನಾವು, ಅಂಗವಾಡಿಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮುಕ್ಕೂರು ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷೆ ಸುನೀತಾ ಕಂಬುರ್ತೋಡಿ ಅವರನ್ನು ಸಮ್ಮಾನಿಸಲಾಯಿತು.
ನೇಸರ ದಶಪ್ರಣತಿ ಸಮಿತಿ ಸಂಚಾಲಕ ನರಸಿಂಹ ತೇಜಸ್ವಿ ಕಾನಾವು ಪ್ರಸ್ತಾವನೆಗೈದು ಕೋಟೆ ಪೌಂಡೇಷನ್ ನ ಕಾರ್ಯ ವ್ಯಾಪ್ತಿಯ ಬಗ್ಗೆ ವಿವರಿಸಿದರು. ಅಂಗನವಾಡಿ ಕಾರ್ಯಕರ್ತೆ ರೂಪಾ ವಂದಿಸಿದರು. ನೇಸರ ಯುವತಿ ಮಂಡಲದ ಸದಸ್ಯೆ ದೀಕ್ಷಾ ನೀರ್ಕಜೆ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಮುಕ್ಕೂರು ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ ಸಾಂಸ್ಕೃತಿಕ ಸಂಭ್ರಮ ನಡೆಯಿತು.