ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.28: ಶ್ರೀರಾಮುಲಮ್ಮ ದೇವಸ್ಥಾನ ಸಮಿತಿ ಸಮೃದ್ಧಿ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮುಂಡರಗಿ, ಬಳ್ಳಾರಿ. ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ. ಇವರ ಸಹಯೋಗದಲ್ಲಿ ಬಳ್ಳಾರಿಯ ಮುಂಡರಗಿ ಗ್ರಾಮದಲ್ಲಿ ಶ್ರೀರಾಮುಲಮ್ಮ ದೇವಿಯ 7ನೇ ವರ್ಷದ ಶರನ್ನನವರಾತ್ರಿ ದಸರಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ 6ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುಂಡರಗಿ ನಾಗರಾಜ ಉದ್ಘಾಟಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ದೇವಸ್ಥಾನ ಕಮಿಟಿಯ ಅಧ್ಯಕ್ಷರು ಸರ್ವ ಸದಸ್ಯರು ಮತ್ತು ಊರಿನ ಮುಖಂಡರು ಹಾಗೂ ವಿವಿಧ ದಲಿತ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜನೆ ಅಡಿಯಲ್ಲಿ ಸಿರುಗುಪ್ಪದ ನೇತ್ರ ಕಲಾ ಸಂಘ ತಂಡದ ಕಲಾವಿದರು ಕತ್ತಲ ರಾಜ್ಯದ ಮೂರ್ಖ ರಾಜ ಎಂಬ ಹಾಸ್ಯ ನಗೆ ನಾಟಕವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ನೆರೆದ ಸಾವಿರಾರು ಜನ ಸಮೂಹವನ್ನು ನಾಟಕದ ಮೂಲಕ ರಂಜಿಸಿದರು ಈ ನಾಟಕದ ಕಲಾವಿದರಾದ ಹಿರಿಯರಂಗ ಕಲಾವಿದ ಬದನೆಹಾಳ್ ಬೀಮಣ್ಣ ರಾಜನ ಪಾತ್ರದಲ್ಲಿ ನೆರೆದ ಪ್ರೇಕ್ಷಕರನ್ನು ನಗೆಗಡಲೆಲ್ಲಿ ತೇಲಿಸಿದರೆ ಮಂತ್ರಿ ಪಾತ್ರದಲ್ಲಿ ಸಿರಿಗೇರಿಯ ಹುಸೇನಿ ಸೈನಿಕನ ಪಾತ್ರದಲ್ಲಿ ಹರಿಕೃಷ್ಣ ಸಂಗನಕಲ್ ಶಿವು ಸಿರುಗುಪ್ಪ ಸ್ವಾಮೀಜಿ ಪಾತ್ರದಲ್ಲಿ ಲೋಕೇಶ್ ಶಿಷ್ಯಂದಿರ ಪಾತ್ರದಲ್ಲಿ ಹೆಚ್ ಮುತ್ತಣ್ಣ ತಿಮರಾಜ್ ಎಮ್ಮಿಗನೂರು ಕಟಕನ ಪಾತ್ರದಲ್ಲಿ ವೀರೇಶ್ ದಳವಾಯಿ ಮಾಲೀಕನ ಪಾತ್ರದಲ್ಲಿ ಹೆಚ್. ತಿಮ್ಮಪ್ಪ ಬಿಎಂ ಸೂಗೂರು. ಕುರುಬನ ಪಾತ್ರದಲ್ಲಿ ದೊಡ್ಡ ಹುಸೇನಪ್ಪ ಅರಳಿಗನೂರು ಇನ್ನು ಮುಂತಾದ ಕಲಾವಿದರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

























