ಸುಳ್ಯ:ಸುಳ್ಯ ಮುಂಗಾರು ವಾಲಿಬಾಲ್ ಅಕಾಡೆಮಿ ಇದರ ವತಿಯಿಂದ ಸುಳ್ಯದ ಗ್ರೀನ್‌ವ್ಯೂ ಶಿಕ್ಷಣ ಸಂಸ್ಥೆಯ ವಠಾರದಲ್ಲಿ ನಡೆದ ೧೦ ದಿನಗಳ ವಾಲಿಬಾಲ್ ತರಬೇತಿ ಸಮಾರೋಪ ಭಾನುವಾರ ಸಮಾರೋಪಗೊಂಡಿತು.
ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ನಗರ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫ ವಹಿಸಿ ಮಾತನಾಡಿ ಸುಳ್ಯದ ವಾಲಿಬಾಲ್ ಆಟಗಾರರಿಗೆ ಮುಂಗಾರು ವಾಲಿಬಾಲ್ ಅಕಾಡೆಮಿ ಉತ್ತಮ ಪ್ರೋತ್ಸಾಹವನ್ನು ನೀಡುತ್ತಾ ಬರುತ್ತಿದೆ. ಕಳೆದ ಹತ್ತು ದಿನಗಳಿಂದ ಶಿಬಿರದಲ್ಲಿ ಪಡೆದಿರುವ ತರಬೇತಿಯನ್ನು ಮುಂದಿನ ದಿನಗಳಲ್ಲಿ ಉತ್ತಮವಾಗಿ ಬೆಳೆಸಿಕೊಂಡು ಜಿಲ್ಲಾ ರಾಜ್ಯ ರಾಷ್ಟ್ರಮಟ್ಟದಲ್ಲಿ ತಮ್ಮ ಹೆಸರು ಗಳಿಸುವಂತಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪತ್ರಕರ್ತ ಹರೀಶ್ ಬಂಟ್ವಾಳ್, ವಾಲಿಬಾಲ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಸ್. ಸಂಶುದ್ದೀನ್ ಅರಂಬೂರು, ಕಾರ್ಯದರ್ಶಿ ಕೆ.ಬಿ. ಇಬ್ರಾಹಿಂ, ಉದ್ಯಮಿ ಹರಿರಾಯ ಕಾಮತ್, ಸುಳ್ಯ ನಗರ ಪಂಚಾಯಿತಿ ಮಾಜಿ ಸದಸ್ಯ ಗಿರೀಶ್ ಕಲ್ಲುಗದ್ದೆ ಮಾತನಾಡಿದರು.
ಈ ಸಂದರ್ಭದಲ್ಲಿ ಮುಂಗಾರು ವಾಲಿಬಾಲ್ ಅಕಾಡೆಮಿ ಇದರ ಸಂಸ್ಥಾಪಕ ರಜ್ಜಾಕ್, ಉದ್ಯಮಿ ಇಸ್ಮಾಯಿಲ್, ನಗರ ಪಂಚಾಯಿತಿ ಸದಸ್ಯ ರಿಯಾಜ್ ಕಟ್ಟೆಕ್ಕಾರ್ಸ್, ಉದ್ಯಮಿ ನಾಸಿರ್ ಕಟ್ಟೆಕ್ಕಾರ್ಸ್ ಮೊದಲಾದವರು ಉಪಸ್ಥಿತರಿದ್ದರು. ತರಬೇತಿದಾರ ಮನೋಜ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.




























