
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.31: ನಗರದ ಪ್ರತಿಷ್ಠಿತ ವೀರಶೈವ ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆಯ ಮತ್ತು ಸಸ್ಯಶಾಸ್ತ್ರ ವಿಭಾಗದಿಂದ ಹಾಗೂ ಮಿಂಚೇರಿ ಅರಣ್ಯ ಪ್ರದೇಶದಲ್ಲಿ ಸಸಿ ಹಚ್ಚುವ ಮತ್ತು ಬೀಜ ನೆಡುವ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು (ಸ್ವಯಂ ಸೇವಕರು) ಪಾಲ್ಗೊಂಡಿದ್ದರು. ಕಾರ್ಯಕ್ರಮದ ಮುಖ್ಯ ಉದ್ದೇಶ ಅರಣ್ಯ ರಕ್ಷಣೆ ಮತ್ತು ಅಭಿವೃದ್ಧಿಯ ಜಾಗೃತಿ ವಿದ್ಯಾರ್ಥಿಗಳಲ್ಲಿ ಮೂಡಿಸಲಾಯಿತು.
ಸಸ್ಯಶಾಸ್ತ್ರ ಮುಖ್ಯಸ್ಥರು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಶರಣಬಸವ ಕಾರ್ಯಕ್ರಮ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂಧಿಗಳಾದ ಡಾ.ಕವಿತ ಸಂಗನಗೌಡ.ಎಂ, ಡಾ.ಶೃತಿ.ಆರ್, ನಿಖಿಲ್ ಕುಮಾರ್.ವೈ.ಎಸ್, ಕುಮಾರಿ. ರೇಖಾ.ಎನ್, ಕುಮಾರಿ ಸಂಗೀತಾ.ಕೆ, ಕುಮಾರಿ ಅರ್ಚನ.ಕೆ ಮತ್ತು ಕುಮಾರಿ ಅಂಕಿತಾ, ಡಿ ಉಮಾಪತಿ ಮುಂತಾದವರು ಪಾಲ್ಗೊಂಡಿದ್ದರು.