
ಮಂಗಳೂರು-ಕೂಲಿಕಾರ, ಮಹಿಳಾ ವಿರೋಧಿ ವಿಬಿ ರಾಮ್ ಜಿ ಮಸೂದೆ ವಿರೋಧಿಸಿ, ಮನರೇಗಾ ಉಳಿಸಲು ಒತ್ತಾಯಿಸಿ, ಮರ್ಯಾದೆಗೇಡು ಹತ್ಯೆ ನಿಷೇಧ ಕಾಯ್ದೆ ಜಾರಿಗಾಗಿ, ಸಾಮಾಜಿಕ ಭದ್ರತಾ ಯೋಜನೆ ಯಡಿ ಮಾಸಿಕ ಪಿಂಚಣಿ ೫೦೦೦ ರೂ.ಗೆ ಹೆಚ್ಚಿಸಲು ಹಾಗೂ ಮಹಿಳೆಯರಿಗೆ ಆರ್ಥಿಕ ಸಬಲೀಕರಣ ಮತ್ತು ದೌರ್ಜನ್ಯ ಮುಕ್ತ ಬದುಕನ್ನು ಖಾತ್ರಿಗೊಳಿಸಲು, ಧರ್ಮಸ್ಥಳದಲ್ಲಿ ನಡೆದಿರುವ ಎಲ್ಲಾ ಪ್ರಕರಣಗಳನ್ನು ರಾಜಕೀಯ ಮುಕ್ತ ಸಿಟ್ ತನಿಖೆಗೆ ಒತ್ತಾಯಿಸಿ ಮಾ.೫ರಂದು ಬೆಂಗಳೂರು ಚಲೋ ಕಾರ್ಯಕ್ರಮ ನಡೆಯಲಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಹೇಳಿದ್ದಾರೆ.
ನಗರದಲ್ಲಿ ನಡೆದ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತೆಯರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳು ರಾಜ್ಯದಲ್ಲಿ ಮಹಿಳೆಯರ ಸಂಕಷ್ಟಗಳನ್ನು ತೀವ್ರಗೊ ಳಿಸಿದೆ. ಮಹಿಳೆಯರ ಬದುಕಿನ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿವೆ. ಮಹಿಳೆಯರಿಗೆ ಆರ್ಥಿಕ ಸಬಲೀಕ ರಣ ಮತ್ತು ದೌರ್ಜನ್ಯ ಮುಕ್ತ ಬದುಕನ್ನು ಖಾತ್ರಿಗೊಳಿಸದೆ ಪರಿಪೂರ್ಣ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಆಳುವ ಸರಕಾರಗಳು ಅರ್ಥ ಮಾಡಿಕೊಂಡು ಪರಿಹಾರಗಳನ್ನು ಒದಗಿಸಬೇಕು ಎಂದು ದೇವಿ ಹೇಳಿದರು.
ಸೌಜನ್ಯ, ಪದ್ಮಲತಾ, ವೇದವಲ್ಲಿ, ಮಾವುತ ನಾರಾಯಣ, ಯಮುನಾ ಮುಂತಾದ ನೂರಾರು ಮಂದಿಯ ಸಹಿತ ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ, ಕೊಲೆ, ಅಸಹಜ ಸಾವುಗಳ ಕುರಿತಂತೆ ಸಮಗ್ರವಾಗಿ ಎಸ್.ಐ.ಟಿ ತನಿಖೆಯಾಗಬೇಕು. ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳು ರಾಜಕೀಯ ಮುಕ್ತ ತನಿಖೆಯನ್ನು ಖಾತ್ರಿಗೊಳಿಸ ಬೇಕು. ಇದರೊಂದಿಗೆ ತಳುಕು ಹಾಕಿಕೊಂಡಿರುವ ಭೂಕಬಳಿಕೆ, ಭೂ ಅಕ್ರಮಗಳು, ಧರ್ಮಸ್ಥಳ ಮೈಕ್ರೋಫೈನಾನ್ಸ್ ಸಂಸ್ಥೆಗಳ ದೌರ್ಜನ್ಯಗಳನ್ನು ಒಳಗೊಂಡಂತೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷೆ ಕಿರಣ್ ಪ್ರಭಾ, ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ, ಮಂಗಳೂರು ನಗರ ಕಾರ್ಯದರ್ಶಿ ಅಸುಂತ ಮತ್ತಿತರರು ಭಾಗವಹಿಸಿದ್ದರು.

























