
ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಕನ್ನಡ ಸಾಹಿತ್ಯ ೬ನೇ ಸಮ್ಮೇಳನ ಶೇಡಿಮನೆ ಅರಸಮ್ಮಕಾನು ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ ೧ರಂದು ಗಂಗಡಬೈಲು ಸುಬ್ರಾಯ ಬಾಯರಿ ವೇದಿಕೆಯಲ್ಲಿ ನಡೆಯಲಿದೆ.
ಮಡಾಮಕ್ಕಿ ಗರಾಮ ಪಂಚಾಯಿತಿ ಅಧ್ಯಕ್ಷ ದಯಾನಂದ ಪೂಜಾರಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಪರಿಷತ್ತಿನ ಧ್ವಜಾರೋಹಣ ಮಾಡುವರು. ಸಮ್ಮೇಳನಾಧ್ಯಕ್ಷ, ಭುವನೇಶ್ವರಿ ತಾಯಿ ಮೆರವಣಿಗೆಯನ್ನು ಕಮಲಶಿಲೆ ಕ್ಷೇತ್ರದ ಧರ್ಮದರ್ಶಿ ಸಚ್ಚಿದಾನಂದ ಚಾತ್ರ ಉದ್ಘಾಟಿಸುವರು. ಶಾಸಕ ಕಿರಣ್ ಕುಮಾರ್ ಕೊಡ್ಗಿ ಸಮ್ಮೇಳನ ಉದ್ಘಾಟಿಸುವರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡುವರು.
ಶೇಡಿಮನೆ ಅರಸಮ್ಮಕಾನು ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕುದ್ರುಬೀಡು ಮೋಹನದಾಸ ಹೆಗ್ಡೆ ಪುಸ್ತಕ ಮಳಿಗೆ ಉದ್ಘಾಟಿಸುವರು. ಪಿ. ಜಯಲಕ್ಷ್ಮೀ ಅಭಯ ಕುಮಾರ್ ನಿಕಟಪೂರ್ವ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡುವರು. ವಿಕ್ರಂ ಶೆಟ್ಟಿ ಪುಸ್ತಕ ಬಿಡುಗಡೆಗೊಳಿಸುವರು. ಸ್ವಾಗತ ಸಮಿತಿ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಅರಸಮ್ಮಕಾನು, ಕಾರ್ಯಾಧ್ಯಕ್ಷ ಶಂಕರ ಪೂಜಾರಿ, ಸಂಚಾಲಕ ರಾಧಾಕೃಷ್ಣ ಕ್ರಮಧಾರಿ, ಜನಪ್ರತಿನಿಧಿಗಳು, ಗಣ್ಯರು, ಸಾಹಿತಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಅಧಿಕಾರಿಗಳು ಭಾಗವಹಿಸುವರು.
೩ ಪುಸ್ತಕಗಳ ಬಿಡುಗಡೆ, ೨ ಗೋಷ್ಠಿಗಳು, ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ ೩ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಾಹಿತಿ ಪಿ.ವಿ. ಆನಂದ ಸಾಲಿಗ್ರಾಮ ಸಮಾರೋಪ ಭಾಷಣ ಮಾಡುವರು. ಶಾಸಕ ಸುನಿಲ್ ಕುಮಾರ್ ಸಾಧಕರನ್ನು ಸನ್ಮಾನಿಸುವರು.
ವಿವಿಧ ಕ್ಷೇತ್ರಗಳ ಸಾಧಕರಾದ ಮಡಾಮಕ್ಕಿ ಉದಯ ಕುಮಾರ ಶೆಟ್ಟಿ ಬಾಗಳಮಕ್ಕಿ (ಸಮಾಜಸೇವೆ), ಕುಚ್ಚೂರಿನ ಭೂತುಗುಂಡಿ ಕರುಣಾಕರ ಶೆಟ್ಟಿ (ಸಹಕಾರಿ), ಬೆಳ್ವೆಯ ನಾಗರತ್ನ ಜಿ. ಹೆಬ್ಬಾರ್ (ಸಾಹಿತ್ಯ), ಹೆಬ್ರಿಯ ಸುಲತಾ ಹೆಬ್ರಿ (ಸಾಹಿತ್ಯ), ಚಾರದ ಶ್ರುತಿ ಚಂದ್ರಶೇಖರ್ (ಚಲನಚಿತ್ರ), ಶಿವಪುರದ ಶೈಲಜಾ ಶಿವಪುರ (ಸಂಗೀತ), ವರಂಗದ ವೇದಮೂರ್ತಿ ರಾಘವೇಂದ್ರ ಭಟ್ (ಧಾರ್ಮಿಕ), ನಾಡ್ಪಾಲು ಸುದೀಪ್ ಶೆಟ್ಟಿ ಮೇಗದ್ದೆ (ಯಕ್ಷಗಾನ), ಮುದ್ರಾಡಿಯ ಬಾಲಚಂದ್ರ (ಆರೋಗ್ಯ) ಅವರನ್ನು ಸನ್ಮಾನಿಸಲಾಗುವುದು.


























