ಸಂಜೆವಾಣಿ ವಾರ್ತೆ
ಹನೂರು ಆ 19 :- ಶ್ರೀ ಮಲೆ ಮಾದಪ್ಪನ ಸನ್ನಿಧಿಯಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೂತನ ದಾಂಪತ್ಯ ಜೀವನಕ್ಕೆ 93 ಜೋಡಿಗಳು ಕಾಲಿಟ್ಟಿದ್ದಾರೆ.
ಮಲೆ ಮಾದಪ್ಪನ ಸನ್ನಿಧಿಯಲ್ಲಿ ಕಳೆದ 36 ವರ್ಷಗಳಲ್ಲಿ 2024 ಜೋಡಿಗಳನ್ನು ಹೊಸ ಜೀವನಕ್ಕೆ ಕಾಲಿರಿಸಿದ ಪುಣ್ಯ ಸ್ಥಳವಾಗಿದೆ. ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ಧಾರ್ಮಿಕ ಕಾರ್ಯಕ್ರಮಗಳು ಸೋಮವಾರ ಜರುಗಿತು.
ಮಹದೇಶ್ವರ ಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಉದ್ಘಾಟನೆಯನ್ನು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಜೊತೆಗೂಡಿ ಶಾಸಕ ಎಂ.ಆರ್ ಮಂಜುನಾಥ್ ಉದ್ಘಾಟನೆಯನ್ನು ನೆರವೇರಿಸಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಾಲೂರು ಬೃಹನ್ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು, ಶಾಸಕ ಎಂ.ಆರ್.ಮಂಜುನಾಥ್ ವಧುವಿನ ಕೈಗೆ ಮಾಂಗಲ್ಯ ವಿತರಣೆ ಮಾಡಿದರು.
ಬೆಳಗ್ಗೆ 9-20 ರಿಂದ 10-10 ರವರೆಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಸಾಮೂಹಿಕ ವಿವಾಹ ವೇಳೆಗೆ ವರರು ವಧುಗಳ ಕೊರಳಿಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ 93 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ವಿವಾಹ ಮಹೋತ್ಸವದಲ್ಲಿ 16 ಅಂತರ್ಜಾತಿ ವಿವಾಹ ವಾಗಿದ್ದು, ಹಾಗೂ ಅಂತರರಾಜ್ಯ ತಮಿಳುನಾಡಿನ ಸಹ 4 ವಿವಾಹವಾಗಿದೆ ಅಂಗವಿಕಲತೆ ಒಂದು ಜೋಡಿ ವಿಶೇಷವಾಗಿತ್ತು. ಪ್ರಾಧಿಕಾರದ ವತಿಯಿಂದ ಮಧುವಿಗೆ ಚಿನ್ನದ 4 ಗ್ರಾಂ. ತೂಕದ ಚಿನ್ನದ ತಾಳಿ, ಬೆಳ್ಳಿ ಕಾಲುಂಗುರ, ಸೀರೆ ರವಿಕೆ, ವರನಿಗೆ ಪಂಚೆ, ಶರ್ಟ್, ಟವಲ್, ಪೇಟ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೂತನ ವಧು ವರರಿಗೆ ಆಶೀರ್ವಚನ ನೀಡುತ್ತಾ ಮಾತನಾಡಿ ಧಾರ್ಮಿಕ ಕೇಂದ್ರದಲ್ಲಿ ವಿವಾಹವಾದರೆ ಒಳಿತು ಆಗುತ್ತದೆ ಎಂಬ ನಂಬಿಕೆ. ಮಲೆ ಮಹದೇಶ್ವರ ಸ್ವಾಮಿಯವರ ಪುಣ್ಯ ಸನ್ನಿಧಿಯಲ್ಲಿ ವಿವಾಹವಾಗಿರುವ ನವ ಜೋಡಿಗಳು ರಾಗ, ದ್ವೇಷ, ಅಸೂಯೆ ಬಿಟ್ಟು ಪರಸ್ಪರ ಅನ್ಯೂನ್ಯತೆ ಯಿಂದ ಅರಿತು ಸುಖ ಶಾಂತಿಯಿಂದ ಬಾಳ್ವೆಯಿಂದ ಜೀವನ ಸಾಗಲಿ.
ಮಹದೇಶ್ವರರು ಉತ್ತರ ನಾಡಿನಿಂದ ಇಲ್ಲಿಗೆ ಬಂದು ಇಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ವಾಸ ಮಾಡುತಿದ್ದ ಜನರ ಜೀವನವನ್ನು ಹಸನು ಮಾಡಿ ಬದುಕು ಕೊಟ್ಟವರು ಇಂತಹ ಸ್ಥಳದಲ್ಲಿ ನವ ಧಾಪಂತ್ಯಕ್ಕೆ ಕಾಲಿಡುತ್ತಿರುವ ನೀವೇ ಧನ್ಯರು.
ಪವಿತ್ರವಾದ ಕ್ಷೇತ್ರಗಳಲ್ಲಿ ಮಹದೇಶ್ವರ ಬೆಟ್ಟ ಅಮೂಲ್ಯವಾದದ್ದು, ಈ ಕ್ಷೇತ್ರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರುವುದು ನಿಮ್ಮ ಜೀವನದ ಪುಣ್ಯ ಕ್ಷಣಗಳು ವೈವಾಹಿಕ ಜೀವನದಲ್ಲಿ ನಡೆಯುವ ಘಟನೆಗಳನ್ನು ಪರಸ್ಪರ ಸಮಾನವಾಗಿ ಹಚ್ಚಿಕೊಳ್ಳಬೇಕು. ಹಾಗೂ ಈ ಕ್ಷೇತ್ರದ ಶಾಸಕರು ಕ್ಷೇತ್ರದ ಎಲ್ಲಾ ಹಳ್ಳಿಗಳಿಗೂ ಮೂಲಭೂತ ಸೌಕರ್ಯಗಳನ್ನೂ ಒದಗಿಸುವ ಕನಸು ನನಸಾಗಲಿ ಎಂದು ಶುಭ ಹಾರೈಸಿ ಇಂದು ವಿವಾಹವಾಗಿರುವ ಜೋಡಿಗಳಿಗೆ ಶ್ರೀ ಮಹದೇಶ್ವರ ಆಶೀರ್ವಾದವಿರಲಿ ಎಂದರು.
ತಮಿಳುನಾಡು ಮೆಟ್ಟೂರು ಶಾಸಕ ಸದಾಶಿವಂ ಅವರು ಮಾತನಾಡಿ ಮಲೆ ಮಹದೇಶ್ವರ ಸನ್ನಿಧಿಯಲ್ಲಿ ವಿವಾಹ ನಡೆಯುವ ಇಂತಹ ಈ ದಿನ ನಿಜಕ್ಕೂ ನನಗೆ ತುಂಬಾ ಸಂತೋಷವಾಗುತ್ತಿದೆ ಈ ಮಾದರಿಯಲ್ಲಿ ಸರ್ಕಾರದ ವತಿಯಿಂದ ಉಚಿತ ಸಾಮೂಹಿಕ ಮಾಡುತ್ತಿರುವುದು ಇದೆ ಮೊದಲು ನಾನು ನೋಡುತ್ತಿರುವುದು.
ಅಲ್ಲದೆ ಮುಂದಿನ ದಿನಗಳಲ್ಲಿ ಮದುವೆಯಾಗುವ ನವ ಜೋಡಿಗಳಿಗೆ ತಲಾ 5,000 ಹಾಗೂ ತವರುಮನೆ ಹುಡುಗರೆಯಾಗಿ ಒಂದು ತಿಂಗಳಿಗಾಗುವಷ್ಟು ಪಾತ್ರೆ ಪ್ರವಾಸ ಧಾನ್ಯಗಳನ್ನು ನೀಡಲು ಸರ್ಕಾರ ಕ್ರಮ ವಹಿಸಲಿ ಎಂದ ಅವರು ಕರ್ನಾಟಕದ ಮಾದರಿಯಲ್ಲಿ ತಮಿಳುನಾಡಿನಲ್ಲಿಯು ಇದೇರೀತಿ ಉಚಿತ ಸಾಮೂಹಿಕ ವಿವಾಹವನ್ನು ಮಾಡಲು ನಾನು ಕಮಿಟಿಯಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ತಿಳಿಸಿದರು.
ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ, ಮಲೆಮಹದೇಶ್ವರ ಬೆಟ್ಟವು ಧಾರ್ಮಿಕ ಯಾತ್ರ ಸ್ಥಳವಾಗಿದ್ದು, ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿದೆ. ಇಲ್ಲಿನ ಮಾದಪ್ಪನ ಮಹಿಮೆಯಿಂದ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದೆ. ಇಲ್ಲಿ ಪ್ರತಿ ವರ್ಷ ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸುತ್ತಿರುವುದು ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲವಾಗಲಿದೆ.
ಇಲ್ಲಿ ಮದುವೆಯಾದ ದಂಪತಿಗಳು ಇದುವರೆಗೂ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಮದುವೆ ಎನ್ನುವುದು ಜೀವನದ ಪವಿತ್ರ ಬಂಧವಾಗಿದ್ದು, ದಂಪತಿಗಳು ಅನ್ಯೋನ್ಯವಾಗಿ ಜೀವನ ನಡೆಸಬೇಕು. ಪ್ರತಿಯೊಬ್ಬರ ಜೀವನದಲ್ಲಿ ಸಮಸ್ಯೆ ಇದ್ದೆ ಇರುತ್ತದೆ. ಆದರೆ ಸಮಸ್ಯೆಗಳನ್ನು ಎದುರಿಸಿ ಜೀವನ ನಡೆಸುವುದೇ ನಿಜವಾದ ಬದುಕು , ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಳ್ಳುವುದು ವ್ಯರ್ಥ ಸರಳವಾಗಿ ಸಾಮೂಹಿಕ ವಿವಾಹವಾಗುವುದು ನಮ್ಮ ಮುಂದಿನ ಜೀವನಕ್ಕೆ ಸಹಾಯವಾಗುತ್ತದೆ ಎಂದು ನವ ದಂಪತಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ತಮಿಳುನಾಡು ಮೆಟ್ಟೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸದಾಶಿವಂ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕವಿತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೂತ್, ಡಿವೈಎಸ್ ಪಿ.ಧರ್ಮೇಂದ್ರ, ತಾಲೂಕು ತಹಶೀಲ್ದಾರ್ ಚೈತ್ರಾ ಹಾಗೂ ಸಾರಿಗೆ ಇಲಾಖೆ ವ್ಯವಸ್ಥಾಪಕರಾದ ಅಶೋಕ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.




























