Home ಜಿಲ್ಲೆ ಮೈಸೂರು ಮಾದಕ ವಸ್ತು ವಶ: ಒರ್ವ ಬಂಧನ

ಮಾದಕ ವಸ್ತು ವಶ: ಒರ್ವ ಬಂಧನ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.15:-
ಮೈಸೂರು ನಗರದಲ್ಲಿ ಅಕ್ರಮ ಮಾದಕ ವಸ್ತು ಮಾರಾಟ ಮತ್ತು ಸಾಗಾಟದ ಮೇಲೆ ಮಂಡಿ ಠಾಣಾ ಪೆÇಲೀಸರಿಂದ ಕಾರ್ಯಾಚರಣೆ ಮುಂದುವರೆದಿದ್ದು, ದಾಳಿ ನಡೆಸಿ 4 ಲಕ್ಷ ಮೌಲ್ಯದ 41.31 ಗ್ರಾಂ ಮಾದಕ ವಸ್ತು ಎಂ.ಡಿ.ಎಂ.ಎ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸುಲ್ಲಿ ಪೆÇಲೀಸರು ಯಶಸ್ವಿಯಾಗಿದ್ದಾರೆ.


ನಗರದ ಮಂಡಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅಕ್ರಮ ಮಾದಕ ವಸ್ತು ಮಾರಾಟ ಮತ್ತು ಸಾಗಾಟದ ಮೇಲೆ ನಗರದ ಮಂಡಿ ಠಾಣಾ ಪೆÇಲೀಸರು ದಾಳಿ ನಡೆಸಿದ್ದು , ಫೆ.11ರಂದು 3.14 ಗ್ರಾಂ ಎಂಡಿಎಂಎ ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಆರೋಪಿ ಎಂ. ಮೊಹಮ್ಮದ್ ಕರೀಂ, ಎ2. ನಿಷಾದ್ ಪಾಷ ಬಂಧಿಸಿದ್ದರು. ಮೊ.ಸಂ 31/2026 ಕಲಂ: 22(ಬಿ) ಎನ್.ಡಿ.ಪಿ.ಎಸ್ ರೀತ್ಯಾ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಉಳಿದ ಆರೋಪಿಗಳ ದಸ್ತಗಿರಿಗೆ ಕ್ರಮ ಕೈಗೊಂಡು ಕಾರ್ಯಾಚರಣೆ ಮುಂದುವರೆಸಿದ್ದರು.ಇದೀಗ ಮೊ.ಸಂ 31/2026 ರ 2ನೇ ಆರೋಪಿ ನಿಷಾದ್ ಪಾಷ ಎಂಬಾತನಿಗೆ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಮೊಹಮ್ಮದ್ ರೋಷನ್ ಎಂಬಾತನನ್ನು ಬಂಧಿಸಿದ್ದು ಬಂಧಿತನಿಂದ 4 ಲಕ್ಷ ರೂ ಮೌಲ್ಯದ 41.31 ಗ್ರಾಂ ಎಂ.ಡಿ.ಎಂ.ಎ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಕ್ರಮ ಕೈಗೊಂಡಿದ್ದಾರೆ.


ಈ ಕಾರ್ಯಾಚರಣೆಯಲ್ಲಿ ಮಂಡಿ ಪೆÇಲೀಸ್ ಠಾಣಾ ಇನ್ಸ್ ಪೆಕ್ಟರ್ ಆರ್. ದಿವಾಕರ್, ಪಿ.ಎಸ್.ಐ ರಾಜು ಕೋನಕೇರಿ ಇತರರು ಕಾರ್ಯವನ್ನು ಶ್ಲಾಘಿಸಿದ್ದಾರೆ.