ಸಂಜೆವಾಣಿ ನ್ಯೂಸ್
ಮೈಸೂರು.ಆ.17:– ನಗರದಲ್ಲಿ ಮಹಾರಾಷ್ಟ್ರ ಪೆÇಲೀಸರು ಹಾಗೂ ಇಲ್ಲಿನ ಪೆÇಲೀಸರು ದಾಳಿ ನಡೆಸಿದ ಮೇಲೆ ಡ್ರಗ್ಸ್ ಫ್ಯಾಕ್ಟರಿಯೊಂದರ ಕಾರ್ಯ ನಿರ್ವಹಣೆ ಪತ್ತೆಯಾದುದು ತೀರಾ ಆತಂಕಕಾರಿಯಾದುದಾಗಿದೆ. ಇಲ್ಲಿ ಇಡೀ ಸಮಾಜವನ್ನು ಬುಡಮೇಲು ಮಾಡುವ ಯತ್ನ ನಡೆದಿತ್ತೆನ್ನುವುದು ಆತಂಕಕಾರಿ ವಿಷಯ. ಹೀಗಾಗಿ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕೆಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ ಆಗ್ರಹಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾದೊಡನೆಯೇ ಓರ್ವ ಪೆÇಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಅಮಾನತು ರದ್ದಾದುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದರ ಹಿಂದೆ ಪ್ರಭಾವೀ ವ್ಯಕ್ತಿಗಳ ಕೈವಾಡವಿರುವುದು ಸಾಬೀತಾಗಿದೆ. ಇಲ್ಲಿನ ಪೆÇಲೀಸ್ ಆಯುಕ್ತರೇನೋ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರಬಹುದು. ಆದರೆ ಅವರ ಕೈಕಟ್ಟಿ ಹಾಕಲಾಗಿದೆ ಎಂದು ದೂರಿದರು.
ಇದು ಮುಡಾ ನಂತರದ ಅತಿ ದೊಡ್ಡ ಹಗರಣವಾಗಿದೆ. ಇಡೀ ಸಮಾಜವನ್ನು ಬುಡಮೇಲು ಮಾಡಲು ನಡೆಸಿದ ಯತ್ನವಾಗಿದೆ. ರಿಂಗ್ ರಸ್ತೆಯಲ್ಲಿಯೇ ಡ್ರಗ್ಸ್ ಫ್ಯಾಕ್ಟರಿ ಇತ್ತೆಂದರೆ ಇದರ ಹಿಂದೆ ಕೆಲ ಪೆÇಲೀಸರ ಕುಮ್ಮಕ್ಕು ಸಹಾ ಇದೆಯೆಂಬ ಶಂಕೆ ವ್ಯಕ್ತವಾಗುತ್ತದೆ. ಪೆÇಲೀಸ್ ಅಧಿಕಾರಿ ಅಮಾನತು ರದ್ದು ಹಿಂದೆ ಸರ್ಕಾರದ ಕೃಪಾ ಕಟಾಕ್ಷವೂ ಇರಬಹುದಾಗಿದೆ. ಇಲ್ಲದಿದ್ದರೆ ಇಷ್ಟೊಂದು ದೊಡ್ಡ ಹಗರಣವನ್ನು ಇಷ್ಟು ಹಗುರವಾಗಿ ಪರಿಗಣಿಸುತ್ತಿರಲಿಲ್ಲ. ಹೀಗಾಗಿಯೇ ತನಿಖೆಯನ್ನು ಎನ್‍ಐಇಗೆ ವಹಿಸಬೇಕೆಂದು ಆಗ್ರಹಿಸಿದರು.
ಮಹಾರಾಷ್ಟ್ರದಿಂದ ಪೆÇಲೀಸರು ಬರದಿದ್ದರೆ ಇದು ಬೆಳಕಿಗೆ ಬರುತ್ತಿರಲಿಲ್ಲ. ಇದು ನಾಚಿಕೆಗೇಡಿನ ವಿಷಯವಾಗಿದೆ. ಅಲ್ಲಿಂದಲೇ ಮಹಾರಾಷ್ಟ್ರ ಪೆÇಲೀಸರು ಇಲ್ಲಿನ ಪೆÇಲೀಸರಿಗೆ ತಿಳಿಸಬಹುದಾಗಿತ್ತು. ಆದರೆ ಅವರೇ ಬರಬೇಕಾಯಿತೆಂದರೆ ಏನರ್ಥ ಎಂದು ಪ್ರಶ್ನಿಸಿದರು. ಇಲ್ಲಿ ಪತ್ತೆಯಾದುದು 300 ಕೋಟಿಗೂ ಹೆಚ್ಚಿನ ಡ್ರಗ್ಸ್ ಅಲ್ಲ ಎನ್ನುತ್ತಾರೆ. ಅಷ್ಟು ಪ್ರಮಾಣದಲ್ಲಿ ಸಿಗಲಿಲ್ಲ ಎಂದರೂ ಸಿಕ್ಕಿತಲ್ಲವೇ, ಹೀಗಾಗಿ ಇಲ್ಲಿನ ಪೆÇಲೀಸ್ ಆಯುಕ್ತರು ನಿಜವಾದ ಮೌಲ್ಯ ವಿವರಿಸಲಿ. ಡಾರ್ಕ್ ವೆಬ್ ಮೂಲಕ ಆನ್‍ಲೈನ್‍ನಲ್ಲಿ ಡ್ರಗ್ಸ್ ಸರಬರಾಜು ಆಗುತ್ತಿತ್ತೆಂಬ ಮಾಹಿತಿ ಇವರಿಗೆ ಇರಲಿಲ್ಲವೇ, ಕೋಟ್ಯಂತರ ಮೌಲ್ಯದ ಎಂಡಿಎಂಎ ನಗರಕ್ಕೆ ಬಂದುದಾದರೂ ಹೇಗೆ, ಯಾರು ಇದನ್ನು ಇಲ್ಲಿಗೆ ತಂದರು, ಯಾವ ಮಾರ್ಗದಲ್ಲಿ ತಂದರು, ಈ ಬಗೆಗಿನ ಪೆÇಲೀಸರ ತನಿಖೆ ಎಲ್ಲಿಗೆ ಬಂದಿದೆ ಎಂಬ ಮಾಹಿತಿ ನೀಡಬೇಕೆಂದು ಒತ್ತಾಯಿಸಿದರು.
ಒಟ್ಟಾರೆ ಈ ಪ್ರಕರಣ ಗಮನಿಸಿದರೆ ಮೈಸೂರು ನಗರದಲ್ಲಿ ಇನ್ನೂ ಏನೇನೋ ಮಾಫಿಯಾಗಳು ವಿದ್ರೋಹಿ ಚಟುವಟಿಕೆಯಲ್ಲಿ ತೊಡಗಿರಬಹುದಾಗಿದೆ. ವಿದೇಶೀ ಶಕ್ತಿಗಳ ಕೈವಾಡವನ್ನೂ ಅಲ್ಲಗಳೆಯುವಂತಿಲ್ಲ. ಆದರೆ ತನಿಖೆಯನ್ನು ಹಳ್ಳ ಹಿಡಿಸಿ ಪ್ರಭಾವೀ ವ್ಯಕ್ತಿಗಳನ್ನು ರಕ್ಷಿಸಲು ಪೆÇಲೀಸರು ನಿರ್ಧರಿಸಿದಂತಿದೆ. ಹೀಗಾಗಿ ಎನ್‍ಐಎಗೆ ತನಿಖೆ ವಹಿಸಬೇಕೆಂದು ಒತ್ತಾಯಿಸಿದರು. ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಕಾರ್ಯಾಲಯ ಕಾರ್ಯದರ್ಶಿ ಎಸ್.ನಂದಕುಮಾರ್ ಇದ್ದರು.


























