ಮಾದಕ ವಸ್ತುಗಳ ಸೇವನೆ ಮಾಡಿ ವಾಹನ ಚಲಾಯಿಸಿ ಬೇಡಿ:ಮರಡಿ

ಸೈದಾಪುರ:ಡಿ.೨೦: ಪ್ರತಿಯೊಬ್ಬ ವಾಹನ ಚಾಲಕರು ಚಾಲನೆ ಸಮಯದಲ್ಲಿ ಮಾದಕ ವಸ್ತುಗಳ ಸೇವನೆಯಿಂದ ದೂರವಿರಿ ಎಂದು ಸೈದಾಪುರ ಪೊಲೀಸ್ ಠಾಣೆಯ ಪಿಐ ಶಿವಾನಂದ.ಎA ಮರಡಿ ತಿಳಿಸಿದರು.
ಪಟ್ಟಣಕ್ಕೆ ಹತ್ತಿ ತುಂಬಿಕೊAಡು ಆಗಮಿಸಿದ ಟ್ರಾಕ್ಟರ್, ಬೊಲೇರೋ, ಟೆಂಪೋ ವಾಹನ ಚಾಲಕರನ್ನ ಹಾಗೂ ರೈತರನ್ನು ಒಂದೆಡೆ ಸೇರಿಸಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು. ವಾಹನ ಚಾಲಕರು, ಯುವಜನತೆ ಮಾದಕ ವಸ್ತುಗಳ ಸೇವನೆಯಿಂದ ಸಾಕಷ್ಟು ದುಷ್ಪರಿಣಾಮಗಳು ಉಂಟಾಗುತ್ತವೆ. ನಷೆ, ಅಮಲು ಪದಾರ್ಥಗಳ ಸೇವೆನೆಯ ಸಮಯದಲ್ಲಿ ಅಪರಾಧಗಳ ಹೆಚ್ಚಾಗಿ ನಡೆಯುತ್ತವೆ. ಅಷ್ಟೇ ಅಲ್ಲದೆ ಮಾದಕ ವಸ್ತು ಮಾರಾಟ, ಸಾಗಣೆ, ಹಾಗೂ ಸೇವನೆ ಕೂಡ ಅಪರಾಧ. ಆದ್ದರಿಂದ ನಿದ್ದೆ ಮಂಪರುನಲ್ಲಿ ಅಮಲು ಪದಾರ್ಥಗಳ ಸೇವನೆ ಮಾಡಿ ವಾಹನಗಳನ್ನು ಚಲಾಯಿಸಬಾರದು, ಚಾಲಕರು ಕಡ್ಡಾಯವಾಗಿ ಪರವಾನಗಿ ತೆಗೆದುಕೊಂಡಿರಬೇಕು. ರಾತ್ರಿ ಸಮಯದಲ್ಲಿ ದೂರದ ವಾಹನ ಚಾಲಕರಿಗೆ ನಿಮ್ಮ ವಾಹನಗಳು ಕಾಣಿಸಲು ಸೂಕ್ತ ಬಣ್ಣದ ರೇಡಿಯಂನ್ನು ಅಂಟಿಸಿಬೇಕು. ಅಪರಾಧಗಳು ನಡೆದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ಭಯ ಬೇಡ. ವಾಹನಗಳನ್ನು ರಸ್ತೆ ದಾಟುವಾಗ ಅಕ್ಕ ಪಕ್ಕ ಹಿಂದೆ ಮುಂದೆ ನೋಡಿಕೊಂಡು ಹೋಗಿ. ರಸ್ತೆ ಮದ್ಯೆ, ಪಕ್ಕದಲ್ಲೇ ವಾಹನಗಳನ್ನು ನಿಲ್ಲಿಸಬೇಡಿ. ಇದರಿಂದ ಅಪಘಾತಗಳು ಸಂಭವಿಸಿ ಪ್ರಾಣ ಹಾನಿಯಾಗಿ ಬಹಳಷ್ಟು ಕುಟುಂಬಗಳು ಬೀದಿಗೆ ಬರುವಂತಾಗಿವೆ. ಆದ್ದರಿಂದ ಸಂಚಾರಿ ಮತ್ತು ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಹಾಗೂ ಜಾಗುರುಕತೆ ಇರಲಿ ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿಎಸ್‌ಐ ಅಲ್ಲಾಭಕ್ಷ, ಪೊಲೀಸ್ ಪೇದೆ ನೂರಂದು ನೈಕೋಡಿ ಸೇರಿದಂತೆ ಇತರರಿದ್ದರು.