
ಸಂಜೆವಾಣಿ ನ್ಯೂಸ್
ಮೈಸೂರು: ಫೆ.12:- ನಗರದಲ್ಲಿ ಅಕ್ರಮ ಮಾದಕ ವಸ್ತುಗಳ ಮಾರಾಟದ ವಿವಿಧ ಪ್ರಕರಣಗಳಲ್ಲಿ ಒಟ್ಟು ಐವರನ್ನು ಬಂಧಿಸಿ 3.14ಗ್ರಾಂ ಎಂಡಿಎಂಎ, 35ಗ್ರಾಂ ಮತ್ತು 550ಗ್ರಾಂ ಗಾಂಜಾ ಅನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಕರಣ ಒಂದರಲ್ಲಿ ಅಕ್ರಮ ಮಾದಕ ವಸ್ತು ಮಾರಾಟ ಮತ್ತು ಸಾಗಾಟದ ಮೇಲೆ ನಿರಂತರ ಕಾರ್ಯಾಚರಣೆ ಕೈಗೊಂಡಿರುವ ಸಿಸಿಬಿ ಮತ್ತು ಮಂಡಿ ಠಾಣಾ ಪೆÇಲೀಸರು 3.14ಗ್ರಾಂ ಎಂಡಿಎಂಎ ಇಬ್ಬರೂ ಆರೋಪಿಗಳನ್ನು ಬಂದಿಸಿದ್ದಾರೆ. ಮಂಡಿಮೊಹಲ್ಲಾದ ಎಂಕೆಡಿಕೆ ರಸ್ತೆ 3ನೇ ಕ್ರಾಸ್ ನಿವಾಸಿ ಮೊಹಮ್ಮದ್ ಕರೀಂ(29), ಕಲ್ಯಾಣಗಿರಿ 2ನೇ ಕ್ರಾಸ್ ನಿವಾಸಿ ನಿಷಾದ್ ಪಾಷ(36)ರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ. ಮೊಹಮ್ಮದ್ ಕರೀಂ ಮೇಲೆ ಈಗಾಗಲೇ ಮಂಡಿ ಠಾಣೆ, ಎನ್.ಆರ್ ಪೆÇಲೀಸ್ ಠಾಣೆ ಹಾಗೂ ಸೆನ್ ಪೆÇಲೀಸ್ ಠಾಣೆಯಲ್ಲಿ ಒಟ್ಟು 5 ಎನ್.ಡಿ.ಪಿ.ಎಸ್ ಪ್ರಕರಣಗಳು ದಾಖಲಾಗಿರುತ್ತವೆ. ಹಾಗೂ ನಿಷಾದ್‍ಪಾಷ ಮೇಲೆ ಈಗಾಗಲೇ ಚನ್ನಪಟ್ಟಣ ನಗರ ಪೆÇಲೀಸ್ ಠಾಣೆಯಲ್ಲಿ 3 ಕಳ್ಳತನ ಮತ್ತು ಸುಲಿಗೆ ಪ್ರಕರಣಗಳು ಹಾಗೂ ನಜರಬಾದ್ ಪೆÇಲೀಸ್ ಠಾಣೆ ಮತ್ತು ಉದಯಗಿರಿ ಪೆÇಲೀಸ್ ಠಾಣೆಯಲ್ಲಿ 2 ಎನ್.ಡಿ.ಪಿ.ಎಸ್ ಪ್ರಕರಣ ಸೇರಿ ಒಟ್ಟು 5 ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುತ್ತವೆ.
ಮತ್ತೊಂದು ಪ್ರಕರಣದಲ್ಲಿ ಸಿಸಿಬಿ ಪೆÇಲೀಸರು, ಮಂಡಿ ಹಾಗೂ ಉದಯಗಿರಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಪ್ರತ್ಯೇಕ ಪ್ರಕರಣಗಳಲ್ಲಿ 35ಗ್ರಾಂ ಮತ್ತು 550ಗ್ರಾಂ ಗಾಂಜಾ ವಶಪಡಿಸಿಕೊಂಡು ಬಂಬೂ ಬಜಾರ್ ನಿವಾಸಿ ಸಂಜಯ್(31), ನ್ಯೂ ಬಂಬೂ ಬಜಾರ್ ನಿವಾಸಿ ರಾಜ್‍ಕುಮಾರ್(30)ರನ್ನು ದಸ್ತಗಿರಿ ಮಾಡಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುವ ಉದ್ದೇಶಕ್ಕಾಗಿ ಸಾಗಾಟ ಮಾಡಲು ಉಪಯೋಗಿಸುತ್ತಿದ್ದ ದ್ವಿಚಕ್ರ ವಾಹನ ಟಿವಿಎಸ್ ಏಂ-09-ಎಇ-6223 ವಾಹನವನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ.
ಇನ್ನೊಂದು ಪ್ರಕರಣದಲ್ಲಿ ರಾಜೀವ್ ನಗರ 5ನೇ ಕ್ರಾಸ್ ನಿವಾಸಿ ಮೊಹಮ್ಮದ್ ಅಫಾಕ್(23)ರನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ. ನಗರದಲ್ಲಿ ಮಾದಕ ವಸ್ತು ಮಾರಾಟ, ಸಾಗಾಟ ಹಾಗೂ ಸೇವನೆ ಮಾಡುವವರ ಮೇಲೆ ನಗರ ಪೆÇಲೀಸರ ಕಾರ್ಯಾಚರಣೆ ಮುಂದುವರೆದಿದ್ದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಹಾಯವಾಣಿಗೆ ಕರೆ ಮಾಡಿ: ನಗರ ಪೆÇಲೀಸ್ ವತಿಯಿಂದ ನೂತನವಾಗಿ ಸ್ಥಾಪಿಸಲಾಗಿರುವ ”ವಿಮುಕ್ತಿ ಸಹಾಯವಾಣಿ ಸಂಖ್ಯೆ 8277948080” ಗೆ ಮಾದಕ ವಸ್ತು ಮಾರಾಟ, ಸಾಗಾಟ ಹಾಗೂ ಸೇವನೆಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಕರು ಹಂಚಿಕೊಂಡು ಮೈಸೂರು ನಗರವನ್ನು ಮಾದಕವಸ್ತು ಮುಕ್ತ ನಗರವನ್ನಾಗಿಸಲು ಪೆÇಲೀಸರೊಂದಿಗೆ ಕೈ ಜೋಡಿಸಲು ಕೋರಿದ್ದಾರೆ.






























