
ಮಂಗಳೂರು: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಃIಖಿ)ಯ ಓSS ಘಟಕದ ಸಹಯೋಗದಲ್ಲಿ ‘ಸುರಕ್ಷಿತ ಮನಸ್ಸು – ಸುರಕ್ಷಿತ ಕ್ಯಾಂಪಸ್ – ರ್ಯಾ ಗಿಂಗ್ ಮತ್ತು ಡ್ರಗ್ಸ್ ಬೇಡ’ ಎಂಬ ಮಾದಕ ದ್ರವ್ಯ ಮತ್ತು ರ್‍ಯಾಗಿಂಗ್ ವಿರೋಧಿ ಜಾಗೃತಿ ಕಾರ್ಯಕ್ರಮವು ಆಗಸ್ಟ್ ೨೪ರಂದು ಅಂತರರಾಷ್ಟ್ರೀಯ ಸೆಮಿನಾರ್ ಹಾಲ್ ನಲ್ಲಿ ನಡೆಯಿತು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪೊಲೀಸ್ ಅಧಿಕಾರಿ ಪುನೀತ್ ಗಾಂವ್ಕರ್, ಮಾದಕ ದ್ರವ್ಯ ಮತ್ತು ರ್ಯಾಗಿಂಗ್ ನಿಂದ ದೂರವಿರುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇವುಗಳಿಂದ ಉಂಟಾಗುವ ಗಂಭೀರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ವಿವರಿಸಿದರು. ಸುರಕ್ಷಿತ ಕ್ಯಾಂಪಸ್ ವಾತಾವರಣ ನಿರ್ಮಿಸುವಲ್ಲಿ ಪರಸ್ಪರ ಗೌರವ, ಶಿಸ್ತು, ಅರಿವು ಮತ್ತು ಸಹಕಾರದ ಮಹತ್ವವನ್ನು ಒತ್ತಿ ಹೇಳಿದ ಅವರು ವಿದ್ಯಾರ್ಥಿಗಳು ಜವಾಬ್ದಾರಿಯುತ ಆಯ್ಕೆಗಳನ್ನು ಮಾಡಬೇಕು ಎಂದು ಕರೆ ನೀಡಿದರು.
ಸಂಚಾರ ನಿಯಮಗಳ ಪಾಲನೆ ಮತ್ತು ರಸ್ತೆ ಸುರಕ್ಷತೆಯ ಬಗ್ಗೆಯೂ ಅವರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ದರು. ಸಂಚಾರ ನಿಯಮ ಉಲ್ಲಂಘನೆಯಿಂದ ನಿಯಮ ಉಲ್ಲಂಘಿಸುವ ವ್ಯಕ್ತಿಗೆ ಮಾತ್ರವಲ್ಲದೆ, ಇತರರಿಗೂ ಅಪಾಯ ಉಂಟಾಗಬಹುದು ಎಂದು ಹೇಳಿದರು.
ಸೈಬರ್ ಅಪರಾಧ ಮತ್ತು ಸೈಬರ್ ಸುರಕ್ಷತೆಯ ಕುರಿತು ಮಾತನಾಡಿದ ಅವರು, ಆನ್ಲೈನ್ ವಂಚನೆ, ಸಾಮಾಜಿಕ ಮಾಧ್ಯಮದ ದುರುಪಯೋಗ, ವೈಯಕ್ತಿಕ ಮಾಹಿತಿಯ ಹಂಚಿಕೆ ಸೇರಿದಂತೆ ಸೈಬರ್ ಸಂಬಂಧಿತ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದರು. ಡಿಜಿಟಲ್ ವೇದಿಕೆಗಳು ಮತ್ತು ಇಂಟರ್ನೆಟ್ ಬಳಸುವಾಗ ಎಚ್ಚರಿಕೆಯಿಂದ ಹಾಗೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ. ಬಿಕೆಸಿ ನಿರ್ದೇಶಕ ಎಸ್.ಐ. ಮಂಜುರ್ ಬಾಷಾ ಮಾತನಾಡಿ, ಮಾದಕ ದ್ರವ್ಯ ಮತ್ತು ರ್ಯಾ ಗಿಂಗ್ನಿಂದ ಕಟ್ಟುನಿಟ್ಟಾಗಿ ದೂರವಿದ್ದು, ಕ್ಯಾಂಪಸ್ ನಲ್ಲಿ ಶಿಸ್ತು ಮತ್ತು ಜವಾಬ್ದಾರಿಯುತ ನಡವಳಿಕೆಯನ್ನು ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಸಂಚಾರ ನಿಯಮಗಳನ್ನು ಪಾಲಿಸುವುದು ಮತ್ತು ಸುರಕ್ಷಿತ ರಸ್ತೆ ನಡವಳಿಕೆಯನ್ನು ರೂಢಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.
ಮಾದಕ ದ್ರವ್ಯಗಳ ಬಳಕೆ ಹಾಗೂ ರ್ಯಾ ಗಿಂಗ್ ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಮತ್ತು ಸುರಕ್ಷಿತ, ಆರೋಗ್ಯಕರ ಹಾಗೂ ಶಿಸ್ತುಬದ್ಧ ಕ್ಯಾಂಪಸ್ ಪರಿಸರ ನಿರ್ಮಾಣದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
೭ನೇ ಸೆಮಿಸ್ಟರ್ ಇ&ಸಿ ವಿಭಾಗದ ವಿದ್ಯಾರ್ಥಿನಿ ಅವ್ವಾಬಿ ಶಹನಾ ಕಾರ್ಯಕ್ರಮ ನಿರೂಪಿಸಿದರು. ಮುಸ್ತಫಾ ಖಲೀಲ್ ಅವರು ಅತಿಥಿಗಳನ್ನು ಪರಿಚಯಿಸಿದರು. ಃIಖಿಯ ಅSಇ ವಿಭಾಗದ ಪ್ರೊ. ಮೊಹಮ್ಮದ್ ಸಿನಾನ್ ಸ್ವಾಗತಿಸಿದರು. ಓSS ಕಾರ್ಯಕ್ರಮ ಅಧಿಕಾರಿ ಡಾ. ಮೊಹಮ್ಮದ್ ಕಫೀಲ್ ಡೆಲ್ವಿ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
































