
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.29:- ಮಾತೇಶ್ವರಿ ಜಗದಾಂಬ ಸರಸ್ವತಿಯವರ 60ನೇ ವರ್ಷದ ಸ್ಮೃತಿ ದಿನವನ್ನು ಆಧ್ಯಾತ್ಮಿಕ ಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಬ್ರಹ್ಮಾಕುಮಾರಿ ದಾನೇಶ್ವರೀಜೀ ತಿಳಿಸಿದರು.
ಪಟ್ಟಣದ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಪ್ರಕಾಶ ಭವನದಲ್ಲಿ ಸಂಸ್ಥೆಯ ಪ್ರಥಮ ಆಡಳಿತ ಅಧಿಕಾರಿಣಿ ಮಾತೇಶ್ವರಿ ಜಗದಾಂಬ ಸರಸ್ವತ ಯವರ 60ನೇ ವರ್ಷದ ಸ್ಮೃತಿ ದಿನಾಚರಣೆ ಹಾಗೂ ನುಡಿ ನಮನ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕಿ, ಮನೋಬಲ ತರಬೇತಿದಾರರು, ಸ್ವಾಮಿ ವಿವೇಕಾನಂದ ಸದ್ಭಾವನ ರಾಜ್ಯ ಪ್ರಶಸ್ತಿ ಪುರಸ್ಕøತರಾದ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಅವರು, ಮಾತೇಶ್ವರಿ ಜಗದಾಂಬ ಸರಸ್ವತಿಯವರ 60ನೇ ವರ್ಷದ ಸ್ಮೃತಿ ದಿನವನ್ನು ಆಧ್ಯಾತ್ಮಿಕ ಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
1936 ರ ದಶಕದಲ್ಲಿ ಹೈದರಾಬಾದ್ ಸಿಂಧ್ ಕರಾಚಿಯಲ್ಲಿ ಸ್ಥಾಪನೆಯಾದ ಓಂ ಮಂಡಳಿಯ ಪ್ರಥಮ ಆಡಳಿತಾಧಿಕಾರಿಯಾದ ಮಾತೇಶ್ವರೀ ಜಗದಂಬರವರ ಜನ್ಮವು 1919ರಲ್ಲಿ ಅಮೃತಸರದಲ್ಲಿ ಒಂದು ಸಾಮಾನ್ಯ ಪರಿವಾರದಲ್ಲಾಯಿತು. ಅವರ ಬಾಲ್ಯದ ಹೆಸರು ಓಂ ರಾಧೆ ಮಾತೇಶ್ವರೀಜೀರವರು ಓಂ ಧ್ವನಿಯ ಉಚ್ಚಾರಣೆ ಮಾಡುತ್ತಿದ್ದಾಗ ವಾತಾವರಣದಲ್ಲಿ ಆಳವಾದ ಶಾಂತಿ ಮೂಡುತ್ತಿತ್ತು ಆದ್ದರಿಂದ ಅವರ ಹೆಸರು ಓಂ ರಾಧೆ ಎಂದು ಲೋಕಪ್ರಿಯವಾಯಿತು ಎಂದರು.
ಮಾತೇಶ್ವರಿ ಜಗದಂಬರವರ ಜನ್ಮವು ಅವಿಭಜಿತ ಭಾರತದ ಸಿಂಧ್ ಹೈದರಾಬಾದಿನಲ್ಲಿ ಆಯ್ತು. ಅವರ ವ್ಯಕ್ತಿತ್ವವು ಸಮಸ್ತ ಸ್ತ್ರೀ ಜಗತ್ತಿನ ಗೌರವ ಮತ್ತು ಪ್ರೇರಣೆಗೆ ಆಧಾರ. ಮಾತೇಶ್ವರೀಜಿರವರು ತಮ್ಮ ಆಧ್ಯಾತ್ಮಿಕ ಶಕ್ತಿಯ ಮೂಲಕ ಮಾನವತೆಯ ಸೇವಾ ಪಥದಲ್ಲಿ ಯಾವ ಸಮಯದಲ್ಲಿ ಮುಂದುವರೆದರೆಂದರೆ ಆಗ ಮಹಿಳೆಯರು ತಮ್ಮ ಮನೆಗಳಿಂದಲೂ ಕೂಡ ಹೊರಹೊರಡಲು ಅನುಮತಿ ಸಿಗುತ್ತಿರಲಿಲ್ಲ ಭಾರತೀಯ ಸಂಸ್ಕೃತಿಯ ಉತ್ಥಾನಕ್ಕಾಗಿ ಮಾತೇಶ್ವರೀಜೀರವರ ಈ ತ್ಯಾಗ, ಸಮರ್ಪಣೆ, ಮತ್ತು ಸೇವೆಯು ಸಮಸ್ತ ಭಾರತ ಹಾಗೂ ವಿಶ್ವಕ್ಕೆ ಅತ್ಯಂತ ಗೌರವ ವಿಷಯವಾಗಿರುವುದರಿಂದ ಇಂದಿಗೂ ವಂದೇ ಮಾತರಂ ಎಂಬ ಗಾಯನಕ್ಕೆ ಯೋಗ್ಯರಾಗಿದ್ದಾರೆ ಎಂದರು.
ಯುವ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಸರಸ್ವತಿಯವರ ಆಧ್ಯಾತ್ಮಿಕ ಕೊಡುಗೆ ಇಂದಿನ ಜಗತ್ತಿಗೆ ಬಹಳ ಅವಶ್ಯಕವಾಗಿದೆ ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಎಲ್. ಸುರೇಶ್ ಮಾತನಾಡಿ ಜಾಗತಿಕ ಮಟ್ಟದಲ್ಲಿ ಮೂರನೇ ಮಹಾಯುದ್ಧಕ್ಕೆ ನಿಂತಿರುವ ಜಗತ್ತಿನವರು ಅರ್ಧ ಗಂಟೆ ಈಶ್ವರೀಯ ವಿಶ್ವ ವಿದ್ಯಾಲಯಕ್ಕೆ ಬಂದು ಧ್ಯಾನ ಮಾಡಿದರೆ ಶಾಂತಿಯ ಸಮಾಧಾನ ಸಿಗುತ್ತದೆ. ಈ ವಿಶ್ವವಿದ್ಯಾಲಯವು ಜಗತ್ತಿನಾದ್ಯಂತ 180 ರಾಷ್ಟ್ರಗಳಲ್ಲಿ ಇದೆ. ಅಲ್ಲಲ್ಲಿನ ಸೇವಾ ಕೇಂದ್ರಗಳಲ್ಲಿ ಭೇಟಿ ನೀಡಿದರೆ ಖಂಡಿತ ಮನಸ್ಸಿಗೆ ಶಾಂತಿ ದೊರಕುತ್ತದೆ. ಇದರಿಂದ ಜಗತ್ತಿನಲ್ಲೂ ಶಾಂತಿ ನೆಲೆಸುತ್ತದೆ, ಅಮಾಯಕರು ಬದುಕುಳಿಯುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂ ಸರ್ವಿಸ್‍ನ ಬಿಕೆ. ಆರಾಧ್ಯ, ಆರೋಗ್ಯ ಇಲಾಖೆಯ ಪುಷ್ಪ, ಗೀತಾ, ನ್ಯಾಯಾಂಗ ಇಲಾಖೆಯ ಶ್ರೀನಿವಾಸ್, ಶಿಕ್ಷಣ ಇಲಾಖೆಯ ಪ್ರಮಿಳ ಊದುಗಡ್ಡಿ, ಟೀಚರ್ ಶ್ರೀನಿವಾಸ್, ನಾಗಸಂದ್ರಣ್ಣ, ಪೆÇೀಲಿಸ್ ಇಲಾಖೆಯ ಗುರುಸಿದ್ದಣ್ಣ, ಗುರುಮಲ್ಲಣ್ಣ, ಲಕ್ಷ್ಮಿನರಸಿಂಹ, ಪ್ರಸಾದ್, ಸುಧಾ, ಶಿವಕಮಲ, ಮರಗತ್ತಮ್ಮ, ಶಶಿ, ಲಕ್ಷ್ಮಮ್ಮ, ಸಂಜೀವಿನಿ ಟ್ರಸ್ಟ್ ಸತೀಶ್ ಹಾಜರಿದ್ದರು