Home ಜಿಲ್ಲೆ ಮಾತೆ ರಮಾಬಾಯಿ, ಸಾವಿತ್ರಿಬಾಯಿ ಫುಲೆಯವರ ಜಯಂತಿ

ಮಾತೆ ರಮಾಬಾಯಿ, ಸಾವಿತ್ರಿಬಾಯಿ ಫುಲೆಯವರ ಜಯಂತಿ

ಸಂಜೆವಾಣಿ ವಾರ್ತೆ

ಬಳ್ಳಾರಿ, ಫೆ.28: (ಸ್ವಾಭಿಮಾನಿ ಪ್ರೊ.ಬಿ ಕೃಷ್ಣಪ್ಪ ಬಣ) ವತಿಯಿಂದ ರಾಜ್ಯ ಮಟ್ಟದ ದ.ಸಂ.ಸ.ಹಾಗೂ ರಾಜ್ಯ ದಲಿತ ಮಹಿಳಾ ಒಕ್ಕೂಟ ವತಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾತೆ ರಮಾಬಾಯಿ ಅಂಬೇಡ್ಕರ್ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಕರಾಗಿ  ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರಾದ ಪ್ರದೀಪ್ ಈಶ್ವರ್ ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ ರಾಜ್ಯ, ಸಂಚಾಲಕರಾದ ಒ ಸೋಮಶೇಖರ್, ರಾಜ್ಯ ಮಹಿಳಾ ಸಂಚಾಲಕಿಯಾದ ಭಾಗ್ಯಮ್ಮ ನಾರಾಯಣಸ್ವಾಮಿ, ರಾಜ್ಯ ಸಂ.ಸ.ಗಿ ನಾರಾಯಣಸ್ವಾಮಿ,ಅಂದಾನಿ ಸೋಮನಹಳ್ಳಿ, ಅನಂತಕುಮಾರ್ ಆ ಬಸವರಾಜ ಹಾಗು ಕೋಲಾರ ಜಿಲ್ಲಾ ಸಂಚಾಲಕರಾದ ಚಿಕ್ಕಣ್ಣ ಬಳ್ಳಾರಿ ಜಿಲ್ಲಾ ಸಂಚಾಲಕರಾದ ರಾಮಣ್ಣ ಚೇಳ್ಳಗುರ್ಕಿ ಬಳ್ಳಾರಿ ಜಿಲ್ಲಾ ಸಂಚಾಲಕಿಯಾದ ಃ ಇ ಮಲ್ಲೇಶ್ವರಿ, ರಾಜ್ಯದ ಎಲ್ಲ ಜಿಲ್ಲಾ ಸಂಚಾಲಕರು ಮಹಿಳಾ ಸಂಚಾಲಕಿಯರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.