
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.18: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮಾಟಸೂಗೂರು ಗ್ರಾಮ ಮತ್ತು ಆಂದ್ರಪ್ರದೇಶದ ಮಾರ್ಲಮಾಡಿಕಿ ಗ್ರಾಮದ ನಡುವೆ ಹರಿಯುವ ವೇದಾವತಿ ನದಿಯ ಹಳೆಯ ಸೇತುವೆಯನ್ನು ತೆರವುಗೊಳಿಸಿ ಹೊಸದಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲು ತಾಳೂರಿನ ಪಿ.ರಾಘವೆರಂದ್ರ ರೆಡ್ಡಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಗಡಿ ಭಾಗದ ಗ್ರಾಮವಾದ ಮಾಟಸೂಗೂರು ಮತ್ತು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರು ತಾಲೂಕಿನ ಹೊಳಗುಂದ ಮಂಡಲಮ್ಮ ಗಡಿ ಭಾಗದ ಗ್ರಾಮವಾದ ಮರ್ಲಮಾಡಿಕಿ ನಡುವೆ ವೇದಾವತಿ ನದಿಯು ಹರಿಯುತ್ತಿದ್ದು, ಈ ನದಿಗೆ ಈ ಹಿಂದೆ ಕಿರು ಸೇತುವೆ ನಿರ್ಮಾಣ ಮಾಡಿದೆ. ಈ ಮೂಲಕ ಮೇಲೆ ಕರ್ನಾಟಕ ಮತ್ತು ಆಂಧ್ರ ರಾಜ್ಯಗಳ ಸಾರ್ವಜನಿಕರ ಸಾರಿಗೆ ವಾಹನ ಸಂಚಾರಗಳಿಗೆ, ಕೃಷಿ ಉತ್ಪನ್ನಗಳು ಮತ್ತು ಇತರೆ ಸಾಗಣಿಕೆ ವ್ಯವಹಾರಗಳಿಗಾಗಿ ಬಳಸಲಾಗುತ್ತಿದೆ. . ಆದರೆ ಇದು ಗುಂಡಿಗಳಿಂದ ಕೂಡಿದೆ. ಜೊತೆಗೆ ಮಳೆ ಬಂದಾಗ ಸೇತುವೆ ಮೇಲೆ ನೀರು ಹರಿಯುವುದರಿಂದ ಸಂಚಾರ ಬಂದ್ ಆಗುತ್ತೆ.
ಅದಕ್ಕಾಗಿ ನೂತನ ಆಧುನಿಕ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಮಾಡಿದರೆ ಮಾಟಸೂಗೂರು, ಉತ್ತನೂರು ಉಳೂರು ಮತ್ತು ತಾಳೂರು ಗ್ರಾಮಗಳ ಹಾಗು ಆಂಧ್ರಪ್ರದೇಶ ರಾಜ್ಯದ ಆಲೂರು ತಾಲೂಕಿನ ಗ್ರಾಮಗಳಾದ ಮಾರ್ಲಮಡಿಕ್ಕಿ,ಮುದ್ದುಟಮಾಗಿ, ಕೋಗಿಲೆತೋಟ ಮತ್ತು ಬಲ್ಲೂರು ಗ್ರಾಮಗಳ ಕೃಷಿ ಜಮೀನುಗಳಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಿದಂತಾಗುತ್ತದೆಂದು ಮನವಿ ಮಾಡಿದ್ದಾರೆ.
































