Home ಜಿಲ್ಲೆ ಮಾಜಿ ಶಾಸಕನ ಆಪ್ತರ  ಅಕ್ರಮ ಚಟುವಟಿಕೆಗಳಿಗೆ ಪೊಲೀಸರೇ ಬೆಂಗಾವಲು : ನೇಮಿರಾಜ್ ಆರೋಪ 

ಮಾಜಿ ಶಾಸಕನ ಆಪ್ತರ  ಅಕ್ರಮ ಚಟುವಟಿಕೆಗಳಿಗೆ ಪೊಲೀಸರೇ ಬೆಂಗಾವಲು : ನೇಮಿರಾಜ್ ಆರೋಪ 

ಸಂಜೆವಾಣಿ ವಾರ್ತೆ

ಹಗರಿಬೊಮ್ಮನಹಳ್ಳಿ. ಮೇ.6 ಮಾಜಿ ಶಾಸಕನ ಆಪ್ತರು ನಡೆಸುವ ಒಸಿ, ಇಸ್ಪೇಟ್, ಐಪಿಎಲ್, ಕ್ಯಾಸಿನೋ  ಬೆಟ್ಟಿಂಗ್ ದಂಧೆ  ಗಳಿಗೆ ಅವರ ಸಂಬಂಧಿ ಡಿವೈಎಸ್ಪಿ ಮಲ್ಲೇಶ್ ನಾಯ್ಕ್ ದೊಡ್ಮನಿ ಬೆಂಗಾವಲಾಗಿದ್ದಾರೆ ಎಂದು ಶಾಸಕ ಕೆ. ನೇಮಿರಾಜ್ ನಾಯ್ಕ್ ಗಂಭೀರ ಆರೋಪ ಮಾಡಿದರು. ತಾಲೂಕಿನ ಮಾಲ್ವಿ ಜಲಾಶಯ ಕ್ರಸ್ಟ್ ಗೇಟ್ ಗಳ ಕಾಮಗಾರಿ ಸಂಪೂರ್ಣಗೊಂಡ ಹಿನ್ನೆಲೆ   ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು

 ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರು ಹೇಳಿಕೊಂಡು ವರ್ಗಾವಣೆ ದಂಧೆಯಲ್ಲಿ ತೊಡಗಿರುವ ಭೀಮ ನಾಯ್ಕಗೆ ನನ್ನ ಕುರಿತು ಮಾತನಾಡುವ  ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು .

ಮಾಲವಿ ಜಲಾಶಯ ಕ್ರಸ್ಟ್ ಗೇಟ್ ಗಳ ನವೀಕರಣಕ್ಕೆ ಅನುದಾನವನ್ನು 2023 ನವೆಂಬರ್ ತಿಂಗಳಲ್ಲಿ 4.2 ಕೋಟಿ ರೂ.ಹಾಕಿಸಿದ್ದೇನೆ. ಆದರೆ ಮಾಜಿ ಶಾಸಕ ಅನುದಾನ ನಾನು ತಂದಿದ್ದೇನೆ ಎಂದು ಸುಳ್ಳು ಹೇಳುತ್ತಿರುವುದು ಎಷ್ಟು ಬುದ್ಧಿ ಭ್ರಮೆಣೆಯಾಗಿದೆ ಎಂಬುದು ಗೊತ್ತಾಗುತ್ತದೆ. ಇವರು 30 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತಾರೆ ಅಂತ ಹೇಳುತ್ತಾರಲ್ಲ. ಇವರಂಗೆ ನಾಚಿಕೆ ಬಿಟ್ಟು ಬಟ್ಟೆ ಅಂಗಡಿಯಲ್ಲಿ ಲಂಚ ತೆಗೆದುಕೊಳ್ಳುತ್ತರಲ್ಲ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ. ಮೇಲೆ ನೋಡಿದರೆ ಸತ್ಯ ಹರಿಚಂದ್ರನನಂತೆ ಮಾತನಾಡುತ್ತಾರೆ . ನಾವು ಶಾಸಕರಾದ ಮೇಲೆ ಕ್ಷೇತ್ರದಲ್ಲಿ ಕೆಕೆಆರ್ ಡಿಬಿ,ಕೆಎಂಆರ್ಸಿ ಡಿಎಂಎಫ್ ಸೇರಿದಂತೆ ಹಲವಾರು ಇಲಾಖೆಗಳಿಂದ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ. ಕೊಟ್ಟೂರಿನ 30 ಬೆಡ್ಡ ಗಳ ಆಸ್ಪತ್ರೆಯನ್ನು 6.5 ಕೋಟಿ ಅನುದಾನ ನೀಡಿ  50 ಬೆಡ್ ಮಾಡುತ್ತಿದ್ದೇವೆ. ಜಿಟಿಟಿಸಿಗೆ 20 ಕೋಟಿ ಅನುದಾನ ತಂದಿದ್ದೇನೆ. ಏಳು ಕೋಟಿ ವೆಚ್ಚದಲ್ಲಿ ಎಸ್ ಟಿ ಹಾಸ್ಟೆಲ್ ಕಟ್ಟುತ್ತಿದ್ದೇವೆ.  49 ಕೋಟಿ ಟಾರ್ ರಸ್ತೆ ಗೆ ಅನುದಾನ ತಂದಿದ್ದೇನೆ. ಕ್ಷೇತ್ರದಲ್ಲಿ ಅನುದಾನ ತಂದು ಕೆಲಸ ಮಾಡುವುದರಿಂದ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೆಬಿಟೇಟ್ ಎಂಬ ಕಂಪನಿ ವಿರುದ್ಧ ಸುಳ್ಳು ಆರೋಪ ಮಾಡುವ ಈತನಿಗೆ ಆ ಕಂಪನಿಯ ಕ್ವಾಲಿಟಿ ಕೆಲಸ ಗೊತ್ತಿಲ್ಲ. ಆ ಕಂಪನಿಗೆ ಉಸ್ತುವಾರಿ ಸಚಿವರೇ ನೀಡುತ್ತಿದ್ದಾರೆ.

 ಚುನಾವಣೆಯಲ್ಲಿ ಗೆದ್ದಾಗ ಒಂದು ರೂಪಾಯಿ ಅನುದಾನ ತಗೊಳ್ಳಿ ನೋಡುತ್ತೇನೆ ಎಂದು ಚಿಟಿಕೆ ಹೊಡೆದಿದ್ದೆಲ್ಲ, ಯಾವುದಾದರೂ ಅನುದಾನ ತಂದರೆ ಹೇಗೆ ಕೊಟ್ಟಿರಿ ಎಂದು ಇಲಾಖೆಗೆ ಪ್ರಶ್ನೆ ಮಾಡುತ್ತಾನೆ. ಕ್ಷೇತ್ರದ ಹಳ್ಳಿಗಳಲ್ಲಿ ಸಿಸಿ ರಸ್ತೆ ಚರಂಡಿ, ಚೆಕ್ ಡ್ಯಾಮ್ ನಿರ್ಮಾಣ ಮಾಡಿರುವುದು ಕಣ್ಣಿಗೆ ಕಾಣುತ್ತಿಲ್ಲ, ಕೆಎಂಆರ್ಸಿ ಹಾಗೂ ಕೇಂದ್ರದ ಅನುದಾನದಿಂದ ಕೆಲಸ ನಡೆಯುತ್ತಿವೆ.ಈ ಸರ್ಕಾರದಲ್ಲಿ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ, 100 ಕೋಟಿ ರೂ. ಹಣ ದುರ್ಬಳಿಕೆಯಾಗಿದೆ ಅಂತ ಹೇಳುತ್ತೀರಲ್ಲ ನಿಮ್ಮದೇ ಸರ್ಕಾರ ಇದೆ ತನಿಖೆ ಮಾಡಿಕೊಳ್ಳುಲಿ, ಜನಪ್ರತಿನಿಧಿಯಲ್ಲದಿದ್ದರೂ ಡಿ ವೈ ಎಸ್ ಪಿ ಕೃಪಾಕಟಾಕ್ಷದಿಂದ ಪೊಲೀಸ್ ಜೀಪ್  ಎಸ್ಕಾರ್ಟ್ ನೀಡಲಾಗುತ್ತದೆ. ಇವರಿಗೆ ಮಾನ ಮರ್ಯಾದೆ ಇದೆಯಾ  ಭ್ರಷ್ಟಾಚಾರ ಆರೋಪ ಮಾಡುವ ಈತನೇ ಮೊದಲು ಭ್ರಷ್ಟಾಚಾರ ಮಾಡಿರುತ್ತಾನೆ ಎಂದು ಕಿಡಿ ಕಾರಿದರು . ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ, ತಾಲೂಕ ಅಧ್ಯಕ್ಷ ವೈ ಮಲ್ಲಿಕಾರ್ಜುನ, ಪುರಸಭೆಯ ಸದಸ್ಯ ನಾಗರಾಜ್ ಜನ್ನು, ಪ್ರಮುಖರಾದ ಕೃಷ್ಣಮೂರ್ತಿ ಶೆಟ್ರು, ಜಿ ಎಂ ಜಗದೀಶ್, ಚಿತ್ತವಾಡಗಿ ಪ್ರಕಾಶ್, ಹೋಟೆಲ್ ಸಿದ್ದರಾಜು, ನರೇಗಲ್ ಬಸವರಾಜ್, ನರೇಗಲ್ ಕೊಟ್ರೇಶ್, ಅಡೂರು ಶಿವಕುಮಾರ್, ತಹಶೀಲ್ದಾರ್ ಕವಿತ ಆರ್, ನೀರಾವರಿ ಇಲಾಖೆಯ ಎಇಇ ಧರ್ಮರಾಜು ಇತರರಿದ್ದರು.