ಜಾಜ್‌ಪುರ,ಅ.೮-ಒಡಿಶಾದ ಜಾಜ್‌ಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ನದಿಯಲ್ಲಿ ಬಟ್ಟೆ ತೊಳೆಯುತ್ತಿದ್ದಾಗ, ಇದ್ದಕ್ಕಿದ್ದಂತೆ ಮೊಸಳೆಯೊಂದು ಮಹಿಳೆಯನ್ನು ನದಿಗೆ ಎಳೆದುಕೊಂಡು ಹೋಗಿದೆ.
(ಅಕ್ಟೋಬರ್ ೬) ಕಾಂತಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ೫೫ ವರ್ಷದ ಸೌದಾಮಿನಿ ಮಹಾಲಾ ನದಿಯಲ್ಲಿ ಬಟ್ಟೆ ಒಗೆಯಲು ಹೋಗಿದ್ದರು ಆಗ ಮೊಸಳೆ ಇದ್ದಕ್ಕಿದ್ದಂತೆ ದಾಳಿ ಮಾಡಿ ನೀರಿಗೆ ಎಳೆದೊಯ್ದಿದೆ.ಒಂದು ಕ್ಷಣದಲ್ಲಿ ಮಹಿಳೆ ಮತ್ತು ಮೊಸಳೆ ಇಬ್ಬರೂ ನದಿಯಲ್ಲಿ ಕಣ್ಮರೆಯಾಗಿದ್ದಾರೆ.ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.
ಅದರಲ್ಲಿ ಮೊಸಳೆ ಮಹಿಳೆಯ ಕೈಯನ್ನು ಬಾಯಿಯಲ್ಲಿ ಹಿಡಿದುಕೊಂಡು ಈಜುತ್ತಿರುವುದು ಕಂಡುಬಂದಿದೆ. ಮಹಿಳೆಯ ದೇಹದ ಭಾಗಗಳು ಮತ್ತು ಕೂದಲುಗಳು ಗೋಚರಿಸುತ್ತಿವೆ. ಹತ್ತಿರದ ಜನರಿಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಮಹಿಳೆಯ ದೇಹವು ಇನ್ನೂ ಪತ್ತೆಯಾಗಿಲ್ಲ.ಘಟನೆಯನ್ನು ನೋಡಿದ ಜನರು ಕೂಗುತ್ತಲೇ ಇದ್ದರು, ಮಹಿಳೆಯ ಸಹಾಯಕ್ಕೆ ಧಾವಿಸಿದ್ದಾರೆ ಆದರೆ ಆಗಲೇ ತಡವಾಗಿತ್ತು.ಘಟನೆಯ ನಂತರ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಅಧಿಕಾರಿಗಳು ಶೋಧ ಕಾರ್ಯಾಚರಣೆ ಆರಂಭಿಸಿದರು,
ಆದರೆ ಮಹಿಳೆಯ ಸುಳಿವು ಸಿಕ್ಕಿಲ್ಲ. ಹುಡುಕಾಟ ಮುಂದುವರೆದಿದೆ, ಆದರೆ ಆಕೆಯ ಯಾವುದೇ ಸುಳಿವು ಪತ್ತೆಯಾಗಿಲ್ಲ. ನದಿಯ ಬಳಿ ವಾಸಿಸುವ ನಿವಾಸಿಗಳು ಜಾಗರೂಕರಾಗಿರಿ ಮತ್ತು ನದಿಗೆ ಇಳಿಯುವುದನ್ನು ತಪ್ಪಿಸುವಂತೆ ಸ್ಥಳೀಯ ಆಡಳಿತ ಮನವಿ ಮಾಡಿದೆ. ಕೆಲವು ತಿಂಗಳ ಹಿಂದೆ, ಇದೇ ಸ್ಥಳದಿಂದಮೊಸಳೆಯೊಂದು ಮೇಕೆಯನ್ನುಎಳೆದುಕೊಂಡು ಹೋಯಿತು.

























