
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.08: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಹಿಳಾ ಸಪ್ತಾಹ 2026 ಕಾರ್ಯಕ್ರಮದ ಅಡಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಡಾ. ಗೌರಿ ಮಾಣಿಕ್ ಮಾನಸ, ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಸಮಾಜ ಕಾರ್ಯ ವಿಭಾಗ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಇವರು “ಕೊಟ್ಟು ಪಡೆಯುವುದು ಮಹಿಳೆಯ ಜೀವನದ ಯಾನದಲ್ಲಿ ಕೊಡುಗೆಯ ಶಕ್ತಿ “ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಮಹಿಳೆಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ತಮ್ಮ ಉಪನ್ಯಾಸದಲ್ಲಿ ಕೊಟ್ಟು ಪಡೆಯುವುದರ ಮಹತ್ವದ ಬಗ್ಗೆ ತಿಳಿಸುತ್ತಾ ಮಹಿಳೆಯರ ಕೊಡುಗೆಯ ಅಪಾರವಾದದ್ದು ಅವರು ಪಡೆದುಕೊಂಡಿರುವ ಸವಲತ್ತುಗಳು ಕಡಿಮೆ ಎಂದು ತಿಳಿಸಿದರು.
ಮಹಿಳೆಯರು ಗೃಹಸ್ಥಾಶ್ರಮದಲ್ಲಿ ಅನುಭವಿಸುವ ಯಾಚನೆಗಳು ನಿಬಂಧನೆಗಳ ಬಗ್ಗೆ ತಿಳಿಸುತ್ತ ಸಂಪ್ರದಾಯಗಳು ಹೆಣ್ಣಿಗೆ ಮಾತ್ರ ಸೀಮಿತವಾಗಬಾರದು ಎಂದು ಹೇಳಿದರು. ಹೆಣ್ಣು ಸತತವಾಗಿ ಅಭಿವೃದ್ಧಿ ಹೊಂದಬೇಕು ಹಾಗೂ ಆರ್ಥಿಕ ಸ್ವಾತಂತ್ರ್ಯ ಪಡೆದುಕೊಳ್ಳಬೇಕು ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹೇಳುತ್ತಾ, ಹೆಣ್ಣು ಉನ್ನತ ಮಟ್ಟದಲ್ಲಿ ಬೆಳೆಯಬೇಕು ಎಂದು ವಿದ್ಯಾರ್ಥಿ ನಿಯರಿಗೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಶ್ರೀ ಶಿವರಾಜ್ ಕುಮಾರ್ ಎಸ್ ವಾಣಿಜ್ಯಶಾಸ್ತ್ರ ವಿಭಾಗ ಅವರು ಮಾತನಾಡಿ ಅಮೆರಿಕ ಯುರೋಪ್ ದೇಶಗಳಿಗಿಂತ ಹೆಚ್ಚಾಗಿ ಅವಕಾಶಗಳು ಭಾರತದಲ್ಲಿ ಇದೆ ಔದ್ಯೋಗಿಕರಾಜಕೀಯ ರಂಗದಲ್ಲಿ ಸಾಧಿಸಿರುವ ನಮ್ಮ ದೇಶದ ಮಹಿಳೆಯರನ್ನು ಮಾದರಿಯಾಗಿ ತೆಗೆದುಕೊಂಡು ಇಂದಿನ ಮಹಿಳೆಯರು ಸಾಧನೆಯನ್ನು ಮಾಡಬೇಕು
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು,ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ವಿದ್ಯಾರ್ಥಿನಿಯರಿಗೆ ಕ್ರಿಕೆಟ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.























