
ಬಳ್ಳಾರಿ, ಮಾ.07: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಹಿಳಾ ಸಪ್ತಾಹ 2026 ಎರಡನೇ ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ನಗರದ ಸ್ತ್ರೀರೋಗ ತಜ್ಞರು ಆದ ಡಾ॥ ಮೋನಿಕಾ ಇವರು ಪ್ರಜನನ ಆರೋಗ್ಯ ಮತ್ತು ಹಕ್ಕು ಎಂಬ ವಿಷಯದ ಕುರಿತು ಮಾತನಾಡಿ ಹೆಣ್ಣುಮಕ್ಕಳ ಆರೋಗ್ಯ ಜಾಗೃತಿ ಬಗ್ಗೆ ಹೇಳುತ್ತಾ ಕಿಶೋರಾವಸ್ಥೆಯಲ್ಲಿ ಆಗುವ ಹಾರ್ಮೋನ್ ಬದಲಾವಣೆಗಳು, ಮೆನು ಪಾಸ್ ಸಮಸ್ಯೆಗಳು, ಋತುಚಕ್ರ ಸಮಯದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರ ಬಗ್ಗೆ ತಿಳಿಸುತ್ತಾ ಮೆನ್ಸ್ಟ್ರಿಯಲ್ ಕಪ್ ಬಳಸುವ ಬಗ್ಗೆ ತಿಳಿಸಿದರು. ಸರ್ವಯ್ಕಲ್ ಕ್ಯಾನ್ಸರ್ ಬಗ್ಗೆ ತಿಳಿಸುತ್ತಾ, ಎಂ ಎಂ ಆರ್ ಹಾಗೂ ಎಚ್ ಪಿ ವಿ ಲಸಿಕೆ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಜ್ಞಾ ಕೆ ವಿ ಅವರು ಮಾತನಾಡಿ ಮಹಿಳೆ ಆರೋಗ್ಯವಾಗಿದ್ದರೆ ಕುಟುಂಬ ಹಾಗೂ ದೇಶ
ಆರೋಗ್ಯವಾಗಿರುತ್ತದೆ. ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು,ಬೋಧಕ ಹಾಗೂ ಬೋಧಕೇ ತರ ಸಿಬ್ಬಂದಿಯವರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿನಿಯರಿಂದ ಬೆಂಕಿರಹಿತ ಅಡುಗೆ ಮಾಡುವ ಕಾರ್ಯಕ್ರಮ ನೆರವೇರಿತು.


















