Home ಜಿಲ್ಲೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ವಿಮರ್ಶೆ ಕುರಿತ ಕಾರ್ಯಾಗಾರ

ಮಹಾರಾಜ ಕಾಲೇಜಿನಲ್ಲಿ ವಿಮರ್ಶೆ ಕುರಿತ ಕಾರ್ಯಾಗಾರ

ಸಂಜೆವಾಣಿ ನ್ಯೂಸ್
ಮೈಸೂರು.ಫೆ.07:-
ಮೈಸೂರು ವಿಶ್ವ ವಿದ್ಯಾನಿಲಯದ ಮಹಾರಾಜ ಕಾಲೇಜಿನ ಕನ್ನಡ ವಿಭಾಗದ ಸಾಹಿತ್ಯ ವಿಮರ್ಶೆಯ ಕೌಶಲ್ಯಗಳು, ರೂಸ ಪ್ರಾಯೋಜಿತದಲ್ಲಿ ಒಂದು ದಿನದ ಕಾರ್ಯಾಗಾರವನ್ನು ನಡೆಸಲಾಯಿತು.


ಕಾರ್ಯಕ್ರಮದಲ್ಲಿ ವಿಮರ್ಶಕ ಪೆÇ್ರ.ಓ.ಎಲ್.ನಾಗಭೂಷಣಸ್ವಾಮಿ ವಿಮರ್ಶೆಯಲ್ಲಿ ಓರೆಗಲ್ಲು ವಿಧಾನದ ಬಗ್ಗೆ ಮಾತನಾಡಿದರು. ಬಳಿಕ ಕಾವ್ಯದ ವಿನ್ಯಾಸ: ಅರ್ಥ ಗ್ರಹಿಕೆ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿದರು. ಮ್ಯಾಥ್ಯೂ ಆರ್ನಾಲ್ಡ್ ಅವರ ಸಾಹಿತ್ಯವನ್ನು ಕುರಿತು ಓರೆಗಲ್ಲು ವಿಧಾನ 1878ರ ಹೊತ್ತಿನಲ್ಲಿ ಎ ಸ್ಟಡಿ ಆಫ್ ಪೆಟ್ರಿ ಲೇಖನವನ್ನು ವಿಮರ್ಶಾಕತ್ಮಕವಾಗಿ ಚರ್ಚಿಸುವುದರ ಜೊತೆಗೆ ವಿದ್ಯಾರ್ಥಿಗಳ ಜತೆ ಸಂವಾದವನ್ನು ನಡೆಸಿದರು. ಗಂಭೀರ ವಿಶ್ಲೇಷಣೆಯ ಮಹತ್ವದ ಬಗ್ಗೆ ಧರ್ಮ ಹಾಗೂ ವಿಜ್ಞಾನಗಳೆರಡೂ ವಿಮರ್ಶಿಸಲಾಗದ ಮನುಷ್ಯನ ತಳಮಳಗಳನ್ನು ಸಾಹಿತ್ಯ ವಿವೇಚಿಸುತ್ತದೆ. ಅದಕ್ಕಾಗಿ ಸಾಹಿತ್ಯ ವಿಮರ್ಶೆ ಬಹಳ ಮುಖ್ಯ ಎಂಬ ಮಾತುಗಳ ಜೊತೆ ಹೋಮರ್, ಶೇಕ್ಸ್‍ಪಿಯರ್, ಡಾಂಟೆ, ಮಿಲ್ಟನ್ ಮೊದಲಾದ ಗಂಭೀರ ಕರ್ತೃಗಳೊಂದಿಗೆ ಸಮಕಾಲೀನ ಓದನ್ನು ಒರೆ ಹಚ್ಚಿ ನೋಡುವ ವಿಧಾನವನ್ನು ಮತ್ತು ಸಂಸ್ಕೃತಿ ಚಿಂತನೆಯ ಹೊಳಹಾಗಳನ್ನು ಅಲ್ಲಮಪ್ರಭು ಹಾಗೂ ಬಸವಣ್ಣನ ವಚನಗಳನ್ನು ವಕ್ಲೋಷಿಸುವ ಮೂಲಕ ವಿಮರ್ಶಾ ಕೌಶಲಗಳನ್ನು ತಿಳಿಸಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಪೆÇ್ರ.ವಿ.ಷಣ್ಮುಗಂ, ಕನ್ನಡ ವಿಭಾಗದ ಮುಖ್ಯಸ್ಥೆ ಪೆÇ್ರ.ಡಿ.ವಿಜಯಲಕ್ಷ್ಮಿ, ಸಂಚಾಲಕಿ ಪೆÇ್ರ.ಷಹಸೀನಾ ಬೇಗಂ, ಡಾ.ಎಸ್.ಕೃಷ್ಣಪ್ಪ, ಸಹ ಸಂಚಾಲಕರಾದ ಡಾ.ಕೃತಿ ಜಯಕುಮಾರ್, ಪೆÇ್ರ.ಅಶ್ವನಿ ಇದ್ದರು.