
ಮಂಗಳೂರು- ಕರ್ನಾಟಕ ಮಹಾನಗರಪಾಲಿಕೆಯ ಕಾಯ್ದೆಯಡಿಯಲ್ಲಿ ಕಟ್ಟಡ ನಕ್ಷೆ ಉಲ್ಲಂಘನೆಗಳಿಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಕರ್ನಾಟಕ ನಗರಪಾಲಿಕೆಗಳ ಕಟ್ಟಡ ಮಾದರಿ ಉಪವಿಧಿ-೨೦೧೭ ಗಳಿಗೆ ತಿದ್ದುಪಡಿಗೊಳಿಸಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಕಟ್ಟಡಗಳ ನಕ್ಷೆ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿಸಿಕೊಂಡು ಪರಿಷ್ಕೃತ ಕಟ್ಟಡ ನಕ್ಷೆಗಳಿಗೆ ಅನುಮೋದನೆ ನೀಡಲು ಪ್ರಮಾಣವನ್ನು ಸರಕಾರವು ನಿಗಧಿಪಡಿಸಿರುತ್ತದೆ.
ಅದರಂತೆ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡಲು ಕಟ್ಟಡ ಪರವಾನಿಗೆ ಪಡೆದು ಪರವಾನಿಗೆಯನ್ನು ಉಲ್ಲಂಘನೆ ಮಾಡಿ ನಿರ್ಮಾಣ ಮಾಡಲಾದ ಕಟ್ಟಡಗಳಿಗೆ ನಿಗದಿಪಡಿಸಲಾದ ದಂಡವನ್ನು ಪಾವತಿಸಿಕೊಂಡು ಪರಿಷ್ಕೃತ ನಕ್ಷೆ ನೀಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಶುಲ್ಕದ ಪ್ರಮಾಣ ಈ ಕೆಳಕಂಡಂತಿದೆ.
೧)ಕಟ್ಟಡ ಪರವಾನಿಗೆ ಪಡೆದು Seಣbಚಿಛಿಞ/ಅoveಡಿಚಿge ಗಳಲ್ಲಿ ಶೇ. ೧೫ರ ಮಿತಿಯೊಳಗೆ ಉಲ್ಲಂಘನೆ ಮಾಡಿದಲ್ಲಿ ಪ್ರತಿ ಚದರ ಮೀಟರ್‍ಗೆ ವಸತಿ/ಕೈಗಾರಿಕೆ/ಇತರೆ ಉದ್ದೇಶದ ಕಟ್ಟಡಕ್ಕೆ ರೂ. ೨೦೦೦ ವಾಣಿಜ್ಯ ಉದ್ದೇಶದ ಕಟ್ಟಡಕ್ಕೆ ರೂ. ೩೦೦೦ ಗಳನ್ನು ಪಾವತಿಸಬೇಕಾಗಿರುತ್ತದೆ.
೨)ಕಟ್ಟಡ ಪರವಾನಿಗೆ ಪಡೆದು ಶೇ. ೫ರ ಮಿತಿಯೊಳಗೆ ಉಲ್ಲಂಘನೆ ಮಾಡಿದಲ್ಲಿ, ಉಲ್ಲಂಘನೆ ಮಾಡಿ ನಿರ್ಮಾಣ ಮಾಡಲಾದ ಕಾರ್ ಪಾರ್ಕಿಂಗ್ ಒಂದಕ್ಕೆ ರೂ. ೫೦೦೦ ಗಳನ್ನು ಪಾವತಿಸಬೇಕಾಗಿರುತ್ತದೆ. ಎಫ್.ಎ.ಆರ್ ಉಲ್ಲಂಘನೆಗೆ ಪ್ರತಿ ಚ.ಮೀಗೆ ವಸತಿ/ಕೈಗಾರಿಕೆ/ಇತರೆ ಉದ್ದೇಶದ ಕಟ್ಟಡಕ್ಕೆ ರೂ. ೨೦೦೦ ವಾಣಿಜ್ಯ ಕಟ್ಟಡಕ್ಕೆ ರೂ. ೩೦೦೦ ಗಳನ್ನು ಪಾವತಿಸಬೇಕಾಗಿರುತ್ತದೆ ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




























