ಮಹರ್ಷಿ ವಾಲ್ಮೀಕಿ ಈ ನೆಲದ ಸಂಸ್ಕøತಿ ರೂಪಿಸಿ ಪರಿಚಯಿಸುವ ಮೂಲಕ ವಿಶ್ವ ಪ್ರಜ್ಞೆಯನ್ನು ಜಾಗೃತಗೊಳಿಸಿದರು: ಪ್ರಶಾಂತನಾಯಕ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.08-
ಮಹರ್ಷಿ ವಾಲ್ಮೀಕಿಯವರು ಈ ನೆಲದ ಸಂಸ್ಕøತಿ ರೂಪಿಸಿ ಪರಿಚಯಿಸುವ ಮೂಲಕ ವಿಶ್ವಪ್ರಜ್ಞೆಯನ್ನು ಜಾಗೃತಗೊಳಿಸಿದರು.ಜಯಂತಿಆಚರಣೆಒಂದು ಸಮುದಾಯಕ್ಕೆ ಸೀಮಿತವಾಗಬಾರದು, ವರ್ಷದಿಂದ ವರ್ಷಕ್ಕೆ ನಮ್ಮ ಸಂಸ್ಕøತಿ, ಪರಂಪರೆಯಯೋಗ್ಯತೆಯನ್ನು ಹೆಚ್ಚಿಸಿಕೊಳ್ಳುವಂತಾಗಬೇಕು. ಪ್ರತಿಯೊಬ್ಬ ವ್ಯಕ್ತಿಯು ಪರಿಪೂರ್ಣತೆ ಹೊಂದಲು ವಾಲ್ಮೀಕಿಯವರರಾಮನನ್ನುಅನುಸರಿಸಬೇಕುಎಂದುಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದಕನ್ನಡ ಬಾರತಿ ಕುವೆಂಪು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದಡಾ.ಜಿ. ಪ್ರಶಾಂತನಾಯಕಅವರುಕರೆ ನೀಡಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿಂದು ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿಜಯಂತಿಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದಅವರು, ರಾಮಾಯಣ ಕೇವಲ ರಾವಣನಕೊಂದಕಥೆಯಲ್ಲ, ಅದು ಈ ನೆಲದ ಅವಿಭಕ್ತಕುಟುಂಬದಕಲ್ಪನೆ, ಅಣ್ಣ-ತಮ್ಮಂದಿರ ಬಾಂಧವ್ಯವನ್ನುಅಚ್ಚುಕಟ್ಟಾಗಿ ವಾಲ್ಮೀಕಿಯವರುಕಟ್ಟಿಕೊಟ್ಟಿದ್ದಾರೆ. ರಾಮನನ್ನು ಸಾಮರಸ್ಯದ ಪ್ರತೀಕವಾಗಿ ವಾಲ್ಮೀಕಿಯವರು ಸೃಷ್ಠಿಸುವ ಮೂಲಕ ಇಂದಿಗೂ ಜೀವಂತವಾಗಿದ್ದಾರೆ ಎಂದರೇತಪ್ಪಾಗಲಾರದು. ವಾಲ್ಮೀಕಿ ನಿಜವಾದರಾಮರಾಜ್ಯ, ಗ್ರಾಮ ಪಂಚಾಯಿತಿಕಲ್ಪನೆಯನ್ನು ಅಂದಿನ ಕಾಲದಲ್ಲೇ ನೀಡಿದ್ದಾರೆ. ಈ ದೇಶದಲ್ಲಿ ಶೇ.90ರಷ್ಟು ಜನರುರಾಮಾಯಣವನ್ನು ಓದಿಲ್ಲ. ರಾಮಾಯಣ ಓದಿ ಮಹರ್ಷಿ ವಾಲ್ಮೀಕಿಯವರನ್ನು ಎದೆಗಿಳಿಸಿಕೊಳ್ಳುವ ಮೂಲಕ ನಾವೆಲ್ಲರೂ ಸ್ವಾಭಿಮಾನಿಗಳಾಗಬೇಕು ಎಂದುಡಾ.ಜಿ. ಪ್ರಶಾಂತನಾಯಕಅವರು ತಿಳಿಸಿದರು.


ಪಶು ಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಕೆ.ವೆಂಕಟೇಶ್‍ಅವರು ಹಾಗೂ ಇತರೆಗಣ್ಯರು ನಗರದ ಪ್ರವಾಸಿ ಮಂದಿರದಲ್ಲಿ ಬೆಳ್ಳಿರಥದದಲ್ಲಿ ಇರಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.


ಮಂಗಳವಾದ್ಯ, ಡೊಳ್ಳುಕುಣಿತ, ಗೊರುಕನ ನೃತ್ಯ, ಗಾರುಡಿಗ ಗೊಂಬೆ, ಕೊಂಬು ಕಹಳೆ, ತಮಟೆ ಹಾಗೂ ಬ್ಯಾಂಡ್‍ಸೆಟ್ ಸೇರಿದಂತೆವಿವಿಧಆಕರ್ಷಕ ಕಲಾತಂಡಗಳೊಂದಿಗೆ ನಡೆದ ಮರೆವಣಿಗೆಯುಪ್ರವಾಸಿ ಮಂದಿರದಿಂದಆರಂಭಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಭುವನೇಶ್ವರಿ ವೃತ್ತದ ಮೂಲಕ ಪೇಟೆ ಪ್ರೈಮರಿ ಶಾಲೆ ತಲುಪಿತು.


ಬಳಿಕ ಪೇಟೆ ಪ್ರೈಮರಿ ಶಾಲಾ ಅವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲೋಕಸಭಾ ಸದಸ್ಯ ಸುನಿಲ್ ಬೋಸ್‍ಅವರುಜಗತ್ತಿನ ಮಹಾಕಾವ್ಯಗಳಲ್ಲಿ ಒಂದಾಗಿರುವರಾಮಾಯಣದಂತಹಪವಿತ್ರಗ್ರಂಥ ಸೃಷ್ಠಿಸುವ ಮೂಲಕ ಇಡೀಜಗತ್ತಿಗೆರಾಮರಾಜ್ಯದ ಪರಿಕಲ್ಪನೆಯನ್ನುನೀಡಿದವರು ಮಹರ್ಷಿ ವಾಲ್ಮೀಕಿ.ಅವರ ಸುತ್ತಲಿನ ಪರಿಸರದಲ್ಲಿದ್ದಋಷಿಗಳ ತಪೋವನದಿಂದಜ್ಞಾನ ಸಂಪಾದನೆ ಮಾಡಿದ ವಾಲ್ಮೀಕಿಅವರು ಶ್ರೇಷ್ಠ ಋಷಿಗಳೇ ಆಗಿದ್ದಾರೆಎಂದರು.


ರಾಮರಾಜ್ಯದ ಪರಿಕಲ್ಪನೆಎಂದರೇ ಮಹಿಳೆಯರು, ಪುರುಷರು ಸೇರಿದಂತೆಎಲ್ಲರಿಗೂ ಸಮಾನತೆ ಕಲ್ಪಿಸುವುದೇಆಗಿದೆ.ಎಲ್ಲಾಜನರು ಸಾಮರಸ್ಯದಿಂದ ಸಹಬಾಳ್ವೆ ನಡೆಸಲು ಅವಕಾಶ ನೀಡುವುದೇಆಗಿದೆ.ಬುದ್ಧ, ಬಸವ, ಅಂಬೇಡ್ಕರ್ ಆಶಯಗಳು ಕೂಡಇದೇಆಗಿತ್ತು. ಜನರು ಮೂಢನಂಬಿಕೆ, ಕಂದಾಚಾರ ಬಿಡಿ, ನಮ್ಮ ಮುಂದೆ ಶ್ರೇಷ್ಠ ಸಂವಿಧಾನವಿದೆ. ರಾಮಾಯಣವನ್ನುಎಲ್ಲರೂ ಓದಿ, ಅದರಮೌಲ್ಯಗಳನ್ನು ಅಳವಡಿಸಿಕೊಳ್ಳೋಣ, ಮಹರ್ಷಿ ವಾಲ್ಮೀಕಿ ಹಾಕಿಕೊಟ್ಟ ಹಾದಿಯಲ್ಲಿ ಮುನ್ನೆಡೆಯೋಣಎಂದು ಸಂಸದರಾದ ಸುನೀಲ್ ಬೋಸ್‍ಅವರು ತಿಳಿಸಿದರು.


ಅಧ್ಯಕ್ಷತೆ ವಹಿಸಿದ್ದ ಎಂ.ಎಸ್.ಐ.ಎಲ್‍ಅಧ್ಯಕ್ಷಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿಮಾತನಾಡಿ,ಮಹರ್ಷಿ ವಾಲ್ಮೀಕಿಯವರುರಾಮಾಯಣದ ಮೂಲಕ ಸಮಾಜದಲ್ಲಿರಾಜ ಹಾಗೂ ಪ್ರಜೆಗಳ ನಡೆ-ನುಡಿ, ರೀತಿ ನೀತಿ ಹೇಗಿರಬೇಕು ಎಂಬ ಅದರ್ಶ ಪರಿಕಲ್ಪನೆಯನ್ನು ತಿಳಿಸಿಕೊಟ್ಟಿದ್ದಾರೆ.ರಾಮಾಜ್ಯದಲ್ಲಿ ಪ್ರಜೆಗಳ ಮಾತಿಗೂ ಬೆಲೆ ಇತ್ತು.ಪಿತೃವಾಕ್ಯ ಪರಿಪಾಲನೆಯು ಮುಖ್ಯವಾಗಿತ್ತು.ವಾಲ್ಮೀಕಿಅವರ ಮಾರ್ಗದರ್ಶನದಲ್ಲಿಎಲ್ಲರೂ ನಡೆಯೋಣ.ಮುಂದಿನ ವರ್ಷದೊಳಗೆ ನಗರದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿಯೂ ನಿರ್ಮಾಣವಾಗಲಿದೆಎಂದುಇದೇ ವೇಳೆ ಹೇಳಿದರು.


ಇದೇ ವೇಳೆ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಜಾನಪದಕಲಾವಿದರಾದ ಸುರೇಶ್ ನಾಗ್, ಸಾಕಷ್ಟು ಬಾರಿರಕ್ತದಾನ ಮಾಡಿದ ಮಧುಸೂಧನ್ ಮತ್ತು ಪತ್ರಕರ್ತರಾದ ಜಿ. ಬಂಗಾರು ಹಾಗೂ ಶ್ರೀನಿವಾಸನಾಯಕ್‍ಅವರನ್ನುಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.


ಕಾಡಾಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾಅಧ್ಯಕ್ಷÀ ಮಹಮದ್‍ಅಸ್ಗರ್ ಮುನ್ನಾ, ನಗರಸಭೆಅಧ್ಯಕ್ಷಎಸ್. ಸುರೇಶ್, ಸದಸ್ಯಕಲಾವತಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಡಾ.ಬಿ.ಟಿ. ಕವಿತಾ, ಹೆಚ್ಚುವರಿಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಎಚ್.ಎಸ್. ಬಿಂದ್ಯಾ, ಇತರರುಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.