ಮಹರ್ಷಿ ವಾಲ್ಮೀಕಿಯವರ ದಾರ್ಶನೀಕತೆ ಅಮರವಾದದ್ದು


ಬಳ್ಳಾರಿ, ಅ.07: ನಗರದ ಪ್ರತಿಷ್ಠಿತ ವೀ.ವಿ.ಸಂಘದ ವೀರಶೈವ ಮಹಾವಿದ್ಯಾಲಯದಲ್ಲಿಂದು ಮಹರ್ಷಿ ವಾಲ್ಮೀಕಿ ಜಯಂತೋತ್ಸವವನ್ನು ಶದ್ಧ್ದಾ ಭಕ್ತಿಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ದರೂರು ಶಾಂತನಗೌಡರು, ಮಹರ್ಷಿ ವಾಲ್ಮೀಕಿಯವರ ಜೀವನವೇ ದಾರ್ಶನೀಕತೆಯಿಂದ ಕೂಡಿರುವುದು ಮತ್ತು ಅವರು ರಚಿಸಿದ ಮಹಾಕಾವ್ಯ ಶ್ರೀಮದ್ ರಾಮಾಯಣ ಜಗತ್ತಿನ ಅತ್ಯಂತ ಶ್ರೇಷ್ಠವಾದ ಮಹಾಕಾವ್ಯವಾಗಿದ್ದು ಸಾವಿರಾರು ವರ್ಷಗಳ ನಂತರವೂ ಜನಮಾನಸದಲ್ಲಿ ಹಚ್ಚಹಸಿರಾಗಿ ಉಳಿದಿದೆ. ಇದು ಅಖಂಡ ಭಾರತದ ಜನತೆಯ ಅಸ್ಮಿತೆ ಯಾಗಿದ್ದು ಇಂದಿಗೂ ದಾರಿ ದೀಪವಾಗಿ ಬೆಳಗುವ ಏಕೈಕ ಮಹಾಕಾವ್ಯವಾಗಿದೆ. ರಾಮಾಯಣದ ಒಂದೊಂದು ಪಾತ್ರವು, ಆದರ್ಶ, ತತ್ವ, ಚಿಂತನೆ ಮತ್ತು ಮಾನವೀಯತೆ ಜೀವನ ಮೌಲ್ಯಗಳನ್ನು ಸಾರುವಂತವುಗಳು. ಸರ್ವಶ್ರೇಷ್ಠ ಮಹರ್ಷಿ ವಾಲ್ಮೀಕಿಯವರ ಭೋಧನೆಗಳನ್ನು ಅಳವಡಿಸಿಕೊಂಡು ಸಂಸ್ಕಾರಯುತ ಜೀವನ ನಡೆಸುವುದು ಸಾಧ್ಯ ಎಂದು ಶ್ರೀ ದರೂರು ಶಾಂತನಗೌಡರು ನುಡಿದರು.
ಕಾಲೇಜಿನ ಪ್ರಾಚಾರ್ಯರಾದ ಜಿ.ಮಲ್ಲನಗೌಡ, ಮಹರ್ಷಿ ವಾಲ್ಮೀಕಿ ಯವರ ಜೀವನದ ಎರಡು ಪಮುಖ ಘಟ್ಟಗಳಾದ ದರೋಡೆಕೋರನಾದ ರತ್ನಾಕರ ಮಹರ್ಷಿಯಾಗಿದ್ದು ಮತ್ತು ಮಹಾಕಾವ್ಯವಾದ ಶ್ರೀಮದ್ ರಾಮಾಯಣ ರಚನೆಯಾದ ಸಂಧರ್ಭವವನ್ನು ಮತ್ತು ಅದರ ಶ್ರೇಷ್ಠತೆಯನ್ನು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಡಾ.ರವಿಕುಮಾರ್ ನಾಯ್ಕ, ಡಾ.ಕವಿತಾ ಸಂಗನಗೌಡ.ಎಂ, ಡಾ.ಶರಣಬಸವ, ಡಾ.ಶೃತಿ.ಆರ್ ಮತ್ತು ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ.ವಿನೋದ್ ಕುಮಾರ್, ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ಎನ್.ಸಿ.ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಡಾ.ಜಿ.ಶ್ಯಾಮೂರ್ತಿ, ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ ಇವರು  ಕಾರ್ಯಕ್ರಮವನ್ನು ನಿರೂಪಿಸಿದರು.